ಧಾರವಾಡ: ಸೇವಾ ನ್ಯೂನ್ಯತೆ ಎಸಗಿದ ಸೋಲಾರ್ ಕಂಪನಿಗೆ ದಂಡ

ಧಾರವಾಡ, ಏಪ್ರಿಲ್‌ 24: ಧಾರವಾಡದ ತಪೋವನ ನಗರದ ನಿವಾಸಿಯಾದ ಮಹಾದೇವಿ ಮಠಪತಿ ಎನ್ನುವವರು ತಮ್ಮ ವಸತಿ ನಿಲಯಕ್ಕೆ ಸುಮಾರು 1.18,500 ಲಕ್ಷ ರೂಪಾಯಿಗಳನ್ನು ವಿನಿಯೋಗಿಸಿ ಬೆಂಗಳೂರಿನ ಅನು ಕಂಪೆನಿಯ ಸೋಲಾರ ವಾಟರ್ ಹೀಟರ್‌ಗಳನ್ನು ಧಾರವಾಡದ ಬನಶಂಕರಿ ಡೀಲರ್ ಕಡೆಯಿಂದ ಹಾಕಿಸಿದ್ದರು.

ಅವುಗಳ ಬಳಕೆ ಸಮಯದಲ್ಲಿ ಆ ವಾಟರ್ ಹೀಟರ್‌ಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಹಾಗೂ ವಾಟರ್ ಟ್ಯಾಂಕ್‌ನಲ್ಲಿ ಲೀಕೇಜ್ ಇದೆ ಎಂದು ಅದನ್ನು ಸರಿಪಡಿಸಿಕೊಡಲು ಎದುರುದಾರರಿಗೆ ಹಲವು ಬಾರಿ ದೂರು ಸಲ್ಲಿಸಿದ್ದರು. ಆದರೂ ಸೋಲಾರ್ ಕಂಪೆನಿ ಅಥವಾ ಡೀಲರ್‌ಗಳು ದೂರುದಾರರ ಕೋರಿಕೆಯನ್ನು ಮನ್ನಿಸಿರಲಿಲ್ಲ. ಆದ್ದರಿಂದ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಎದುರುದಾರರು ಸೇವಾ ನ್ಯೂನ್ಯತೆ ಎಸಗಿದ್ದಾರೆಂದು ಅವರ ವಿರುದ್ಧ ಕ್ರಮ ಕೈಗೊಳ್ಳಲು ದೂರುದಾರರು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.

Penalty For Solar Company For Service Deficiency

ಈ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಕೆ.ಭೂತೆ, ಸದಸ್ಯರುಗಳಾದ ವಿಶಾಲಾಕ್ಷಿ.ಅ. ಬೋಳಶೆಟ್ಟಿ ಹಾಗೂ ಪ್ರಭು ಸಿ. ಹಿರೇಮಠ ಅವರು 2018 ರಲ್ಲಿ 500 ಲೀಟರ್ ಸಾಮರ್ಥ್ಯದ ಮೂರು ಸೋಲಾರ್ ವಾಟರ್ ಹೀಟರ್‌ಗಳನ್ನು ಎದುರುದಾರರು ಹಣ ಪಡೆದು ದೂರುದಾರರಿಗೆ ಮಾರಾಟ ಮಾಡಿದ್ದು, ವಾರಂಟಿ ಅವಧಿಯಲ್ಲಿ ನ್ಯೂನ್ಯತೆ ಕಂಡು ಬಂದಿದ್ದರೂ ಅದನ್ನು ಸರಿಪಡಿಸದೇ ಇರುವುದು ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗಿರುತ್ತದೆ ಅಂತಾ ಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿದೆ.

ಎದುರುದಾರ ಸೋಲಾರ್ ಕಂಪೆನಿ ಮತ್ತು ಡೀಲರ್‌ರವರಿಂದ ದೂರುದಾರರಿಗೆ ಆಗಿರುವ ಅನಾನುಕೂಲ ಹಾಗೂ ಮಾನಸಿಕ ತೊಂದರೆಗಾಗಿ ದೂರುದಾರರಿಗೆ 50,000 ಪರಿಹಾರ ಮತ್ತು 5,000 ಪ್ರಕರಣದ ಖರ್ಚು ವೆಚ್ಚ ಒಟ್ಟು 55,000 ಎದುರುದಾರರು ನೀಡುವಂತೆ ಆಯೋಗ ತನ್ನ ಆದೇಶದಲ್ಲಿ ತಿಳಿಸಿದೆ.

ಎತ್ತಿನ ಮೈ ತೊಳೆಯಲೇಂದು ಹೋದವ ಕಾಲು ಜಾರಿ ಕೆರೆಗೆ ಬಿದ್ದು ಸಾವು

ಕುಂದಗೋಳ : ಕೆರೆಯಲ್ಲಿ ಎತ್ತಿನ ಮೈ ತೊಳೆಯಲು ಹೋದ ಯುವಕ ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟ ಘಟನೆ ಕುಂದಗೋಳ ತಾಲೂಕಿನ ಹಿರೇಹರಕುಣಿ ಗ್ರಾಮದಲ್ಲಿ ಇಂದು ಬೆಳಿಗ್ಗೆ ನಡೆದಿದೆ.

Penalty For Solar Company For Service Deficiency

ಜಾತ್ರೆ ನಿಮಿತ್ತವಾಗಿ ಬೆಂಗಳೂರಿನಿಂದ ಕುಂದಗೋಳ ತಾಲೂಕಿನ ಹಿರೇಹರಕುಣಿ ಗ್ರಾಮಕ್ಕೆ ಬಂದ ಗುರುನಾಥಗೌಡ ಹನುಮಂತಗೌಡ ಡವಗಿ ವಯಾ (20) ಎಂಬ ಯುವಕ ಎತ್ತಿನ ಮೈ ತೊಳೆಯಲೇಂದು ಹೋಗಿ ಕೆರೆಯಲ್ಲಿ ಜಾರಿ ಬಿದ್ದಿದ್ದಾನೆ. ತಕ್ಷಣ ಗಮನಿಸಿದ ಸ್ಥಳೀಯರು ಯುವಕನನ್ನು ಮೇಲೆತ್ತಲು ಪ್ರಯತ್ನಿಸಿದರಾದರೂ ಅದಾಗಲೇ ಯುವಕ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ.

ಸದ್ಯ ಈ ಘಟನೆ ಹಿರೇಹರಕುಣಿ ಗ್ರಾಮದ ಕುಡ್ಡಿ ಕೆರೆಯಲ್ಲಿ ನಡೆದಿದ್ದು, ಈಗಾಗಲೇ ಎರಡು ಮೂರು ಜನ ಇದೇ ರೀತಿ ಕೆರೆಯಲ್ಲಿ ಬಿದ್ದು ಸಾವನ್ನಪ್ಪಿದ್ದು ಜನ ಕೆರೆಗೆ ಭದ್ರತೆ ಒದಗಿಸುವಂತೆ ಒತ್ತಾಯ ಮಾಡುತ್ತಿದ್ದಾರೆ. ಕುಂದಗೋಳ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದ್ದು, ತನಿಖೆ ಮುಂದುವರೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+