ಜೈಲು ಸೇರುವಂತೆ ಮಾಡಿದ ವಾಟ್ಸ್ ಆಪ್ ಪ್ರೊಫೈಲ್ ಚಿತ್ರ
ಧಾರವಾಡ, ಜೂನ್ 1: ಯುವಕನೊಬ್ಬ ಹಾಕಿದ್ದ ವಾಟ್ಸ್ ಆಪ್ ನ ಪ್ರೊಫೈಲ್ ಭಾವಚಿತ್ರ ಆತನ ಬಂಧನಕ್ಕೆ ಕಾರಣವಾಗಿದೆ. ಅಳ್ನಾವರ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಅಷ್ಟಕ್ಕೂ ಬಂಧನದವರೆಗೂ ಎಳೆದುತಂದ ಆ ಪ್ರೊಫೈಲ್ ಪಿಕ್ಚರ್ ಯಾವುದು ಗೊತ್ತಾ? ಮುಸ್ಲಿಮರ ಪಾಲಿಗೆ ಪವಿತ್ರ ಕ್ಷೇತ್ರವಾದ ಮೆಕ್ಕಾದ ಮಸೀದಿಯ ಭಾವಚಿತ್ರದ ಮೇಲೆ ಆಂಜನೇಯನ ಚಿತ್ರ ಅಂಟಿಸಿದ್ದನಂತೆ ಈ ವ್ಯಕ್ತಿ.
ಅಳ್ನಾವರದ ಗ್ಯಾರೇಜೊಂದರಲ್ಲಿ ಕೆಲಸ ಮಾಡುವ ವೆಂಕಟೇಶ ಜಾಳಗೆಕರ ಬಂಧಿತ. ಈತ ತನ್ನ ವಾಟ್ಸ್ ಆಪ್ ಪ್ರೊಫೈಲ್ ಫೋಟೋ ಆಗಿ ಮೆಕ್ಕಾ ಮಸೀದಿಯ ಮೇಲೆ ನಿಂತ ಆಂಜನೇಯನ ಚಿತ್ರವನ್ನು ಹಾಕಿಕೊಂಡಿದ್ದ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಅಪಾರ ಸಂಖ್ಯೆಯಲ್ಲಿ ಜನರು ಅಳ್ನಾವರ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು.[ಕಲಘಟಗಿಯಲ್ಲಿ ನೂರಾರು ಕೋಟಿ ವಂಚಿಸಿದ್ದ ಸಹೋದರರು ಅರೆಸ್ಟ್!]

ಅಬ್ದುಲ್ ಸತ್ತಾರ್, ನಿಸಾರ್ ಕತೀಬ್ ಎಂಬುವರು ದೂರು ದಾಖಲಿಸಿ, ಯುವಕನ ಇಂಥ ಕೃತ್ಯದಿಂದ ಮುಸ್ಲಿಮರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ. ತಕ್ಷಣವೇ ಆತನನ್ನು ಬಂಧಿಸಬೇಕು ಎಂದು ಆಗ್ರಹಿಸಿದರು. ವೆಂಕಟೇಶ ಜಾಳಗೆಕರನನ್ನು ಪೊಲೀಸರು ಬಂಧಿಸಿ. ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಸದ್ಯಕ್ಕೆ ಸನ್ನಿವೇಶ ಶಾಂತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications