ಜೆಡಿಎಸ್ ಜೊತೆ ಬಿಜೆಪಿ ಮೈತ್ರಿ ವಿಚಾರ: ಓವರ್ ಟು ಗೋವಿಂದ ಕಾರಜೋಳ

ಧಾರವಾಡ, ಡಿ 23: ಜೆಡಿಎಸ್ ಪಕ್ಷ ಬಿಜೆಪಿ ಜೊತೆ ವಿಲೀನಗೊಳ್ಳಲಿದೆ ಎನ್ನುವ ಸುದ್ದಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟನೆಯನ್ನು ನೀಡಿದ್ದರೂ, ಅದರ ಸುತ್ತಮುತ್ತ ಇನ್ನೂ ಸುದ್ದಿಗಳು ಹೊಗೆಯಾಡುತ್ತಲೇ ಇದೆ.

ಈ ಬಗ್ಗೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಸ್ಪಷ್ಟನೆಯನ್ನು ನೀಡಿದ್ದಾರೆ. "ಕಾಂಗ್ರೆಸ್ ನಂಬಿಕೆಗೆ ಯೋಗ್ಯವಾದ ಪಕ್ಷವಲ್ಲ ಎನ್ನುವುದು ಜೆಡಿಎಸ್ ಮುಖಂಡರಿಗೆ ಗೊತ್ತಾಗಿದೆ. ಹಾಗಾಗಿ, ಬಿಜೆಪಿಗೆ ಹತ್ತಿರವಾಗುತ್ತಿದ್ದಾರೆ"ಎಂದು ಕಾರಜೋಳ ಹೇಳಿದ್ದಾರೆ.

"ಕೆಲವೊಂದು ವಿಚಾರಗಳಲ್ಲಿ ನಾವು ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿರುವುದು ಹೌದು"ಎಂದು ಒಪ್ಪಿಕೊಂಡಿರುವ ಕಾರಜೋಳ, ವಿಲೀನ ವಿಚಾರ ಮಾತ್ರ ಶುದ್ದ ಸುಳ್ಳು ಎಂದು ಸ್ಪಷ್ಟನೆಯನ್ನು ನೀಡಿದ್ದಾರೆ.

News On Alliance With JDS, DCM Govind Karjol Clarification

"ವಿಷಯಾಧಾರಿತವಾಗಿ ಜೆಡಿಎಸ್ ನಮ್ಮ ಜೊತೆ ಇದ್ದದ್ದು ಹೌದು. ವಿಧಾನಪರಿಷತ್ತಿನ ಸಭಾಪತಿಗಳು ಪಕ್ಷಪಾತಿ ನಿಲುವನ್ನು ತಾಳಿದ್ದರು. ಹೀಗಾಗಿ, ಈ ವಿಚಾರದಲ್ಲಿ ಅವಿಶ್ವಾಸ ಗೊತ್ತುವಳಿಯನ್ನು ತಂದಿದ್ದೆವು. ಈ ವಿಷಯದಲ್ಲಿ ಮಾತ್ರ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳಲಾಗಿತ್ತು"ಎಂದು ಕಾರಜೋಳ ಹೇಳಿದ್ದಾರೆ.

"ಈ ವಿಚಾರ ಒಂದು ಬಿಟ್ಟರೆ, ಬೇರೆ ಏನೂ ನಮ್ಮ ನಡುವೆ ಚರ್ಚೆ ನಡೆದಿಲ್ಲ. ಈ ಹಿಂದೆಯೂ ಜೆಡಿಎಸ್ ಜೊತೆ ಸರಕಾರ ರಚಿಸಿದ್ದೆವು. ಕಾಂಗ್ರೆಸ್ ವಿಶ್ವಾಸಕ್ಕೆ ಯೋಗ್ಯವಾಗಿರುವ ಪಕ್ಷ ಅಲ್ಲ ಎನ್ನುವುದು ಜೆಡಿಎಸ್ ನವರಿಗೆ ಈಗ ತಿಳಿದಿದೆ"ಎಂದು ಕಾರಜೋಳ ವ್ಯಂಗ್ಯವಾಡಿದ್ದಾರೆ.

"ಯಡಿಯೂರಪ್ಪನವರು ನಮ್ಮ ಪ್ರಶ್ನಾತೀತ ನಾಯಕ. ಮುಖ್ಯಮಂತ್ರಿ ಬದಲಾವಣೆ ವಿಚಾರ ವರಿಷ್ಠರ ಮುಂದೆ ಇಲ್ಲವೇ ಇಲ್ಲ, ಪೂರ್ಣಾವಧಿಗೆ ಅವರೇ ನಮ್ಮ ಸಿಎಂ"ಕಾರಜೋಳ, ನಾಯಕತ್ವ ಬದಲಾವಣೆಯ ವಿಚಾರದಲ್ಲಿ ಸ್ಪಷ್ಟನೆಯನ್ನು ನೀಡಿದ್ದಾರೆ.

Recommended Video

      9 ತಿಂಗಳ ಬಳಿಕ ದರ್ಶನ ನೀಡಿದ ಪುರಿ ಜಗನ್ನಾಥ ! | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+