ಧಾರವಾಡ: ವಾಹನ ನಿಲುಗಡೆ, ಬೀದಿ ಬದಿಯ ವ್ಯಾಪಾರಿ ಕೇಂದ್ರಗಳಾದ ಪುಟ್‌ ಪಾತ್

ಧಾರವಾಡ, ನವೆಂಬರ್ 15: ಅವಳಿ ನಗರಗಳಾದ ಹುಬ್ಬಳ್ಳಿ- ಧಾರವಾಡ ಸೌಂದರ್ಯ ಹೆಚ್ಚಿಸಲು ಮಹಾನಗರ ಪಾಲಿಕೆ ಸ್ಥಳೀಯ ಶಾಸಕರು ಹಾಗೂ ಸಂಸದರು ಹೆಚ್ಚಿನ ಪ್ರಯತ್ನ ಮಾಡುತ್ತಿದ್ದಾರೆ. ರಸ್ತೆಗಳನ್ನು ಕಾಂಕ್ರೀಟ್ ರಸ್ತೆಗಳನ್ನಾಗಿ ಪರಿವರ್ತಿಸಿ ಅಗಲೀಕರಣ ಮಾಡುವ ಮೂಲಕ ನಗರಕ್ಕೆ ಹೊಸ ರೂಪ ಕೊಡಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ಹೊಸದಾಗಿ ನಿರ್ಮಾಣವಾದ ಫುಟ್ ಪಾತ್‌ಗಳು ವಾಹನ ನಿಲುಗಡೆ ಹಾಗೂ ಬೀದಿ ಬದಿಯ ವ್ಯಾಪಾರಿ ಸ್ಥಳಗಳಾಗಿ ಮಾರ್ಪಟ್ಟಿದ್ದು, ಪಾದಚಾರಿಗಳು ಆತಂಕದಲ್ಲಿ ನಡೆದಾಡುವ ಸ್ಥಿತಿ ಎದುರಾಗಿದೆ.

ಕೆಲವೆಡೆ ಫುಟ್‌ಪಾತ್‌ಗಳನ್ನು ಬೀದಿ ಬದಿ ವ್ಯಾಪಾರಿಗಳು ಒತ್ತುವರಿ ಮಾಡಿಕೊಂಡಿದ್ದು, ಅಂಗಡಿಕಾರರು ಒತ್ತುವರಿ ಮಾಡಿಕೊಂಡು ಅಂಗಡಿಗಳನ್ನು ವಿಸ್ತರಿಸಿಕೊಂಡಿದ್ದಾರೆ. ಮಾರಾಟಗಾರರು ಮತ್ತು ಬೀದಿ ಬದಿ ವ್ಯಾಪಾರಿಗಳಿಗೆ ಪ್ರತ್ಯೇಕ ಸ್ಥಳವನ್ನು ರಚಿಸಿ ಅಲ್ಲಿಗೆ ಸ್ಥಳಾಂತರಿಸಲು ನ್ಯಾಯಾಲಯದ ನೀಡಿರುವ ನಿರ್ದೇಶನವನ್ನು ಅಧಿಕಾರಿಗಳು ಕೂಡ ಪಾಲಿಸುತ್ತಿಲ್ಲ.

ರಸ್ತೆಬದಿಯಲ್ಲಿ ವ್ಯಾಪಾರ ಮಾಡುವವರಿಗೆ ರೈಲ್ವೆ ನಿಲ್ದಾಣದ ಬಳಿ ಜಾಗವನ್ನು ನೀಡಲಾಗಿದೆ. ಆದರೆ ಯಾವುದೇ ಮಾರಾಟಗಾರರು ಅಲ್ಲಿಗೆ ಹೋಗಿ ವ್ಯಾಪಾರ ಮಾಡಲು ಸಿದ್ಧರಿಲ್ಲ. ಇದರಿಂದಾಗಿ ವನವಾಸಿ ರಾಮ ಮಂದಿರದ ಬಳಿಯ ಜಂಕ್ಷನ್‌ನಲ್ಲಿ ವ್ಯಾಪಾರಸ್ಥರಿಂದ ತುಂಬಿ ತುಳುಕುತ್ತಿದೆ. ದೇವಸ್ಥಾನದ ಬಳಿ ಬಸ್ ನಿಲ್ದಾಣವಿದ್ದು, ಶಾಲಾ ಮಕ್ಕಳು ಸುರಕ್ಷಿತವಾಗಿ ಹತ್ತಲು ಮತ್ತು ಇಳಿಯಲು ಕಷ್ಟಪಡುತ್ತಿದ್ದಾರೆ.

ಟ್ರಾಫಿಕ್ ಜಾಮ್‌ಗೂ ಕಾರಣ

ಟ್ರಾಫಿಕ್ ಜಾಮ್‌ಗೂ ಕಾರಣ

ಪಾದಚಾರಿಗಳು ರಸ್ತೆಗಳಲ್ಲಿ ನಡೆದುಕೊಂಡು ಹೋಗುವುದು ಮತ್ತು ವಾಹನಗಳು ಮತ್ತು ವ್ಯಾಪಾರಿಗಳು ಫುಟ್‌ಪಾತ್‌ಗಳನ್ನು ಆಕ್ರಮಿಸಿಕೊಳ್ಳುವುದು ಸುಭಾಶ್ ರಸ್ತೆಗೆ ಭೇಟಿ ನೀಡುವವರಿಗೆ ಸಾಮಾನ್ಯ ದೃಶ್ಯವಾಗಿದೆ. ಪಾದಚಾರಿಗಳು ಅನಿವಾರ್ಯವಾಗಿ ರಸ್ತೆಯಲ್ಲಿ ನಡೆಯುವುದರಿಂದ ಸಂಚಾರಕ್ಕೆ ಅಡ್ಡಿಯಾಗುತ್ತದೆ. ಹೂವಿನ ಮಾರಾಟಗಾರರು ತಮ್ಮ ಸರಕುಗಳನ್ನು ಸಂಗ್ರಹಿಸಲು ಸಂಪೂರ್ಣ ಫುಟ್‌ಫಾತ್‌ಗಳನ್ನು ಮತ್ತು ಅವುಗಳನ್ನು ಮಾರಾಟ ಮಾಡಲು ರಸ್ತೆಯ ಪ್ರಮುಖ ಭಾಗವನ್ನು ಆಕ್ರಮಿಸಿಕೊಂಡಿರುವುದನ್ನು ಸಹ ನೋಡಬಹುದು. ಇದರಿಂದ ಮಾರುಕಟ್ಟೆ ಬಳಿ ಕೂಡ ಟ್ರಾಫಿಕ್ ಜಾಮ್ ಉಂಟಾಗಿ ಜನರು ಪರದಾಡುವ ಸ್ಥಿತಿ‌ ನಿರ್ಮಾಣವಾಗಿದೆ.

ವ್ಯಾಪಾರಿಗಳು ಫುಟ್‌ಪಾತ್‌ ಆಕ್ರಮಣ

ವ್ಯಾಪಾರಿಗಳು ಫುಟ್‌ಪಾತ್‌ ಆಕ್ರಮಣ

ಕರ್ನಾಟಕ ಕಾಲೇಜು ರಸ್ತೆ, ಸುಭಾಸ್ ರಸ್ತೆ, ಜುಬಿಲಿ ವೃತ್ತದಿಂದ ಡಾ ಅನ್ನಿ ಬೆಸೆಂಟ್ ರಸ್ತೆಯಿಂದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಕಟ್ಟಡ, ಕರ್ನಾಟಕ ವಿದ್ಯಾವರ್ಧಕ ಸಂಘದ ಮುಂಭಾಗ ಮತ್ತು ಆಜಾದ್ ಪಾರ್ಕ್ ರಸ್ತೆಯಲ್ಲಿನ ಫುಟ್‌ಪಾತ್‌ಗಳು ಆಕ್ರಮಿಸಿಕೊಂಡಿರುವುದರಿಂದ ಪಾದಚಾರಿಗಳು, ಬಸ್‌ ಹತ್ತುವವರು ಕಷ್ಟಪಡುವಂತಾಗಿದೆ. ಕೆಲವು ಪ್ರದೇಶಗಳು ತುಂಬಾ ಕಿರಿದಾಗಿದ್ದು, ಇಬ್ಬರು ವ್ಯಕ್ತಿಗಳು ಸಹ ಅಕ್ಕಪಕ್ಕದಲ್ಲಿ ನಡೆಯಲು ಸಾಧ್ಯವಾಗದ ಸ್ಥಿತಿ ತಲುಪಿದೆ.

ತಲೆಕೆಡಿಸಿಕೊಳ್ಳದ ಅಧಿಕಾರಿಗಳು

ತಲೆಕೆಡಿಸಿಕೊಳ್ಳದ ಅಧಿಕಾರಿಗಳು

ಆಲೂರು ವೆಂಕಟರಾವ್ ವೃತ್ತದಿಂದ ಜ್ಯುಬಿಲಿ ವೃತ್ತ ಹುಬ್ಬಳ್ಳಿ ಟೋಲ್ ನಾಕಾ ನಡುವಿನ ಮಾರ್ಗವು ತುಂಬಾ ಕಿರಿದಾಗಿದ್ದು, ಪಾದಚಾರಿಗಳು ಅವುಗಳ ಮೇಲೆ ನಡೆಯಲು ಭಯಪಡುತ್ತಾರೆ. ಇಲ್ಲಿನ ಫುಟ್‌ಪಾತ್‌ನಲ್ಲಿ ವ್ಯಾಪಾರಸ್ಥರು ವ್ಯಾಪಾರ ನಡೆಸುತ್ತಾರೆ. ಪಾದಚಾರಿಗಳು ಕೂಡ ತಮ್ಮ ಅನನುಕೂಲತೆಯ ಬಗ್ಗೆ ದೂರು ನೀಡಲು ತಲೆಕೆಡಿಸಿಕೊಳ್ಳದಿದ್ದರೂ, ಅತಿಕ್ರಮಣಗಳನ್ನು ತಡೆಗಟ್ಟುವ ಮತ್ತು ತೆರವುಗೊಳಿಸಬೇಕಾದ ಅಧಿಕಾರಿಗಳು ಈ ಕಡೆಗೆ ಗಮನಹರಿಸದೇ ನಿರ್ಲಕ್ಷಿಸುತ್ತಿದ್ದಾರೆ. ಅಲ್ಲದೇ ಅತಿಕ್ರಮಣದಾರರೊಂದಿಗೆ ಕೈಜೋಡಿಸಿದ್ದಾರೆ ಎಂದು ನಗರ ವಾಸಿಗಳು ಆರೋಪಿಸುತ್ತಿದ್ದಾರೆ.

ಪಾದಚಾರಿ ಮಾರ್ಗ ಅಗತ್ಯ

ಪಾದಚಾರಿ ಮಾರ್ಗ ಅಗತ್ಯ

ಐಸ್‌ ಫ್ಯಾಕ್ಟರಿಯಿಂದ ಬೆಳಗಾವಿ ರಸ್ತೆಗೆ ಸಂಪರ್ಕ ಕಲ್ಪಿಸುವ ಕಿತ್ತೂರು ಚನ್ನಮ್ಮ ಪಾರ್ಕ್‌ನ ಕಾಂಪೌಂಡ್ ಗೋಡೆಯ ಉದ್ದಕ್ಕೂ ಶೆಡ್‌ಗಳನ್ನು ಹಾಕಿಕೊಂಡಿದ್ದವರು ಎಚ್‌ಡಿಎಂಸಿ ನೋಟಿಸ್ ನೀಡಿದ ನಂತರ ಸ್ವಯಂಪ್ರೇರಿತವಾಗಿ ತಮ್ಮ ಶೆಡ್‌ಗಳನ್ನು ತೆಗೆದಿದ್ದಾರೆ. ರಸ್ತೆ ಕಿರಿದಾಗಿದ್ದು, ಪಾದಚಾರಿಗಳಿಗೆ ಹಾಗೂ ವಾಹನ ಸವಾರರಿಗೆ ಅಪಾಯಕಾರಿಯಾಗಿದೆ. ಈಗ ಅದನ್ನು ಅಗಲೀಕರಣಗೊಳಿಸಿ ಎರಡೂ ಕಡೆ ಪಾದಚಾರಿ ಮಾರ್ಗ ನಿರ್ಮಿಸಬೇಕೆಂಬ ಆಗ್ರಹ ವ್ಯಕ್ತವಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+