ಹುಬ್ಬಳ್ಳಿ ಮಂದಿಗೆ ಖರ್ಗೆಯಿಂದ ಡಬಲ್ ಸಿಹಿ ಸುದ್ದಿ

ಹುಬ್ಬಳ್ಳಿ, ಅ.3: ಕೇಂದ್ರ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಹುಬ್ಬಳ್ಳಿ ಕಡೆಗೆ ಎರಡು ರೈಲುಗಳನ್ನು ಚಾಲನೆ ನೀಡಿದ್ದಾರೆ. ಸಿಕಂದರಾದ್ ಹಾಗೂ ಹುಬ್ಬಳ್ಳಿ ನಡುವಿನ ಎಕ್ಸ್ ಪ್ರೆಸ್ ಹಾಗೂ ಮುಂಬೈ-ಹುಬ್ಬಳ್ಳಿ ಎಕ್ಸ್ ಪ್ರೆಸ್ ರೈಲುಗಳಿಗೆ ಮಲ್ಲಿಕಾರ್ಜುನ ಖರ್ಗೆ ಅವರು ಹಸಿರು ನಿಶಾನೆ ತೋರಿಸಿದರು.

ಹುಬ್ಬಳ್ಳಿ-ಗುಲ್ಬರ್ಗಾ ಹಾಗೂ ಸಿಕಂದರಾಬಾದಿಗೆ ನೇರ ಸಂಪರ್ಕ ಒದಗಿಸುವ 17319/17320 ಹುಬ್ಬಳ್ಳಿ- ಸಿಕಂದರಾಬಾದ್-ಹುಬ್ಬಳ್ಳಿ ಎಕ್ಸ್ ಪ್ರೆಸ್ ವಾರದಲ್ಲಿ ಮೂರುಸಲ ಸಂಚರಿಸಲಿದೆ. ಈ ಹೆಚ್ಚುವರಿ ರೈಲು ಸಂಚಾರದ ಮೂಲಕ ಈ ಭಾಗದ ಜನರ ಬಹುದಿನಗಳ ಬೇಡಿಕೆ ಈಡೇರಿದೆ.

ಹುಬ್ಬಳ್ಳಿ- ಸಿಕಂದರಾಬಾದ್-ಹುಬ್ಬಳ್ಳಿ ಎಕ್ಸ್ ಪ್ರೆಸ್ -ಗದಗ, ಬಾಗಲಕೋಟೆ, ಬಿಜಾಪುರ, ವಾಡಿ ಹಾಗೂ ಗುಲ್ಬರ್ಗಾ ಮಾರ್ಗವಾಗಿ ಸಂಚರಿಸಲಿದೆ.

ಈ ಮುಂಚೆ ಹುಬ್ಬಳ್ಳಿಯಿಂದ ಗುಲ್ಬರ್ಗಾಕ್ಕೆ ತೆರಳಬೇಕಾದರೆ ಪ್ರಯಾಣಿಕರಿಗೆ ಭಾರಿ ಕಷ್ಟವಾಗುತ್ತಿತ್ತು. ಪ್ರಯಾಣಿಕರು ಹುಬ್ಬಳ್ಳಿಯಿಂದ ಆಂಧ್ರಪ್ರದೇಶದ ಗುಂತಕಲ್ ಮಾರ್ಗ ವಾಗಿ ಯಾದಗಿರಿಗೆ ತೆರಳಿ ಅಲ್ಲಿ ರೈಲು ಬದಲಾಯಿಸಿ ಗುಲ್ಬರ್ಗಕ್ಕೆ ತೆರಳ ಬೇಕಿತ್ತು. ಇನ್ನು ಸೋಲಾಪುರ ಮಾರ್ಗದಲ್ಲಿ ಗುಲ್ಬರ್ಗಕ್ಕೆ ತೆರಳಲು ಹುಟಗಿಯಲ್ಲಿ ಇಳಿದು, ಅಲ್ಲಿ ಬೇರೆ ರೈಲು ಏರಬೇಕಿತ್ತು ಈ ಹೊಸ ಮಾರ್ಗದಿಂದ ಈ ಸಮಸ್ಯೆ ಬಗೆಹರಿದಿದೆ.

Khagre flags off 2 new train services

2013ರ ರೈಲ್ವೆ ಬಜೆಟ್ ನಲ್ಲಿ ಹುಬ್ಬಳ್ಳಿ-ಮುಂಬೈ ವಾರಕ್ಕೊಮ್ಮೆ ಎಕ್ಸ್ ಪ್ರೆಸ್ ರೈಲು ಘೋಷಿಸಲಾಗಿದ್ದು, ರಾತ್ರಿ ವೇಳೆ ಹುಬ್ಬಳ್ಳಿಯಿಂದ ಮುಂಬೈ ಕಡೆಗೆ ಎಕ್ಸ್ ಪ್ರೆಸ್ ಓಡಿಸುವಂತೆ ಬೇಡಿಕೆ ಸಲ್ಲಿಸಲಾಗಿತ್ತು. ಈಗ 17317/17318 ಹುಬ್ಬಳ್ಳಿ-ಮುಂಬೈನ ಲೋಕಮಾನ್ಯ ತಿಲಕ್ ಟರ್ಮಿನಸ್-ಹುಬ್ಬಳ್ಳಿ ನಡುವೆ ವಾರಕ್ಕೊಮ್ಮೆ ಎಕ್ಸ್ ಪ್ರೆಸ್ ಸಂಚಾರಕ್ಕೆ ಹಸಿರು ಬಾವುಟ ತೋರಲಾಗಿದೆ.

ಕರ್ನಾಟಕ ರಾಜ್ಯ ಸರ್ಕಾರದಿಂದ ರೈಲ್ವೆ ಇಲಾಖೆ ಸುಮಾರು 650 ಕೋಟಿ ರು ಹಾಗೂ 14,659 ಎಕರೆ ವ್ಯಾಪ್ತಿಯ ಭೂಮಿಯನ್ನು ಬಯಸಿದೆ. ವಿವಿಧ ರೈಲ್ವೆ ಯೋಜನೆಗಳ ಅನುಷ್ಠಾನ ಹಾಗೂ ಕಾಮಗಾರಿಗೆ ರಾಜ್ಯ ಸರ್ಕಾರ ಈವರೆಗೂ 92 ಕೋಟಿ ರು ನೀಡಿದ್ದು, ಒಟ್ಟಾರೆ 3,899 ಕೋಟಿ ರು ಮಂಜೂರು ಮಾಡಲಾಗಿದೆ ಎಂದು ಕೇಂದ್ರ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ವಿವರಿಸಿದರು.

ರಾಜ್ಯದ ರೈಲು ಯೋಜನೆ, ಹೊಸ ರೈಲು ಮಾರ್ಗದ ಬಗ್ಗೆ:

* ರಾಜ್ಯದಲ್ಲಿ 14 ಹೊಸ ರೈಲು ಮಾರ್ಗಗಳ ಸಮೀಕ್ಷೆ ನಡೆಯುತ್ತಿದೆ. ವಾಡಿ-ಗದಗ, ಗದಗ-ಹಾವೇರಿ, ಧಾರವಾಡ-ಬೈಲಹೊಂಗಲ-ಬೆಳಗಾವಿ, ಕೊಪ್ಪಳ-ಸಿಂದನೂರು, ಹಾವೇರಿ-ಶಿರಸಿ, ಬಿಜಾಪುರ-ಅಥಣಿ ಇದರಲ್ಲಿ ಪ್ರಮುಖವಾಗಿದೆ.
* ದೇಶದಲ್ಲಿ ಸುಮಾರು 19,000 ರೈಲು ಸೇವೆ ಒದಗಿಸಲಾಗುತ್ತಿದ್ದು ರೈಲ್ವೆ ಇಲಾಖೆ 25,000 ಕೋಟಿ ವಿತ್ತೀಯ ಕೊರತೆ ಎದುರಿಸುತ್ತಿದೆ. ಹೊಸ ರೈಲು ಸಂಚಾರಕ್ಕೆ ಕನಿಷ್ಠ 35 ರಿಂದ 40 ಕೋಟಿ ರು ಬೇಕಾಗುತ್ತದೆ.
* ಹುಬ್ಬಳ್ಳಿ-ಸಿಕಂದರಾಬಾದ್ ರೈಲು (ಸಂಖ್ಯೆ 17319) ರಾತ್ರಿ 8.50ಕ್ಕೆ ಹುಬ್ಬಳ್ಳಿ ಬಿಟ್ಟು, ಗದಗ, ಬಾಗಲಕೋಟೆ, ವಿಜಾ ಪುರ, ಹುಟಗಿ ಮಾರ್ಗವಾಗಿ ಬೆಳಿಗ್ಗೆ 7.10ಕ್ಕೆ ಗುಲ್ಬರ್ಗ ತಲುಪಲಿದೆ.
* ವಾರದಲ್ಲಿ ಮೂರು ದಿನ (ಬುಧವಾರ, ಶುಕ್ರವಾರ, ಭಾನು ವಾರ) ಹುಬ್ಬಳ್ಳಿಯಿಂದ ಸಂಚರಿಸುವ ಈ ರೈಲು, ಗುರುವಾರ, ಶನಿವಾರ ಹಾಗೂ ಸೋಮವಾರ (ಸಂಖ್ಯೆ-17300) ಗುಲ್ಬರ್ಗ ರೈಲು ನಿಲ್ದಾಣ ವನ್ನು ರಾತ್ರಿ 8.15ಕ್ಕೆ ಬಿಟ್ಟು, ಮುಂಜಾನೆ 7.50ಕ್ಕೆ ಹುಬ್ಬಳ್ಳಿಗೆ ಬರಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+