ಧಾರವಾಡ-ಬೆಳಗಾವಿ ನೇರ ರೈಲು ಮಾರ್ಗ; ಅಪ್‌ಡೇಟ್‌

ಧಾರವಾಡ, ಡಿಸೆಂಬರ್ 17; ಉತ್ತರ ಕರ್ನಾಟಕ ಭಾಗದ ಜನರ ಬಹುದಿನಗಳ ಬೇಡಿಕೆ ಧಾರವಾಡ-ಬೆಳಗಾವಿ ನೇರ ರೈಲು ಮಾರ್ಗ. ಸುಮಾರು 73 ಕಿ. ಮೀ. ಉದ್ದದ ಹೊಸ ರೈಲು ಮಾರ್ಗ ಯೋಜನೆಯನ್ನು 2020-21ರ ಕೇಂದ್ರ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ. ಈಗಾಗಲೇ ಆರಂಭಿಕ ಹಂತದ ಕಾಮಗಾರಿಗಳಿಗೆ ಚಾಲನೆ ಸಿಕ್ಕಿದೆ.

ಈ ಕಾಮಗಾರಿಯ ಕುರಿತು ಬೆಳಗಾವಿಯ ಸಂಸದೆ ಮಂಗಲ ಸುರೇಶ್ ಅಂಗಡಿ ಕೇಳಿರುವ ಪ್ರಶ್ನೆಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಉತ್ತರ ನೀಡಿದ್ದಾರೆ. ಬೆಳಗಾವಿ-ಕಿತ್ತೂರು-ಧಾರವಾಡ ನೇರ ನೂತನ ರೈಲು ಮಾರ್ಗಕ್ಕೆ 888 ಎಕರೆ ಭೂಸ್ವಾಧೀನ ಮಾಡಲು ತೀರ್ಮಾನಿಸಲಾಗಿದೆ ಎಂದು ಲೋಕಸಭೆಯಲ್ಲಿ ಉತ್ತರ ನೀಡಿದ್ದಾರೆ.

Land Acquisition Update Dharwad Belagavi Direct Railway Project

ಯೋಜನೆಯ ಭೂ ಸ್ವಾಧೀನ ಪ್ರಕ್ರಿಯೆ ಇನ್ನೂ ಆರಂಭಿಕ ಹಂತದಲ್ಲಿದೆ. ಭೂ ಸ್ವಾಧೀನದ ಹೊಣೆಯನ್ನು ಕೆಐಎಡಿಬಿಗೆ ವಹಿಸಲಾಗಿದೆ. ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗುತ್ತಿದೆ. ಬೇಡಿಕೆಯ ಪ್ರಕಾರ ಭೂ ಸ್ವಾಧೀನಕ್ಕಾಗಿ 18 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಶೇ 50ರಷ್ಟು ವೆಚ್ಚ ಹಂಚಿಕೆ; ಧಾರವಾಡ-ಬೆಳಗಾವಿ ನೇರ ರೈಲು ಮಾರ್ಗ ಯೋಜನೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶೇ 50:50ರಷ್ಟು ಅನುದಾನ ಹಂಚಿಕೆಯ ಮೇಲೆ ಕೈಗೊಂಡಿವೆ. ರಾಜ್ಯ ಸರ್ಕಾರ 2021ರ ಡಿಸೆಂಬರ್‌ನಲ್ಲಿ ಯೋಜನೆಗೆ ಉಚಿತವಾಗಿ ಭೂಮಿಯನ್ನು ನೀಡಲು ಒಪ್ಪಿಗೆ ನೀಡಿದೆ.

2020-21ರ ಕೇಂದ್ರ ಬಜೆಟ್‌ನಲ್ಲಿ 73 ಕಿ. ಮೀ. ಉದ್ದದ ಈ ನೂತನ ರೈಲು ಮಾರ್ಗವನ್ನು ಘೋಷಣೆ ಮಾಡಲಾಗಿತ್ತು. ಈ ಮಾರ್ಗ ನಿರ್ಮಾಣಕ್ಕೆ 927.42 ಕೋಟಿ ರೂ. ಅನುದಾನ ಬೇಕು ಎಂದು ತೀರ್ಮಾನಿಸಲಾಗಿದೆ. 2022-23ನೇ ಸಾಲಿನಲ್ಲಿ ಯೋಜನೆಗಾಗಿ 10 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ.

ಧಾರವಾಡ-ಬೆಳಗಾವಿ ನೇರ ರೈಲು ಮಾರ್ಗ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ, ಬೆಳಗಾವಿಯ ಸಂಸದರೂ ಆಗಿದ್ದ ದಿ. ಸುರೇಶ್ ಅಂಗಡಿ ಅವರ ಕನಸು. ವ್ಯಾಪಾರ, ವಾಣಿಜ್ಯ ಮತ್ತು ಪ್ರಯಾಣಿಕರಿಗೂ ಅನುಕೂಲವಾಗುವ ನೇರ ರೈಲು ಮಾರ್ಗ ನಿರ್ಮಾಣಕ್ಕೆ ಹಲವಾರು ಬಾರಿ ಒತ್ತಾಯಿಸಲಾಗಿತ್ತು. ಸುರೇಶ್ ಅಂಗಡಿ ಅವರು ಸಚಿವರಾಗಿದ್ದಾಗ ಎಲ್ಲಾ ತೊಡಕು ನಿವಾರಿಸಿ ಯೋಜನೆಗೆ ಜೀವ ತುಂಬಿದ್ದರು.

ಮೊದಲ ಹಂತದಲ್ಲಿ ಕ್ಯಾರಕೊಪ್ಪ-ಮಮ್ಮಿಗಟ್ಟಿ ನಡುವೆ ಹಳಿಯನ್ನು ನಿರ್ಮಾಣ ಮಾಡಲಾಗುತ್ತದೆ. ಕ್ಯಾರಕೊಪ್ಪ ತನಕ ಈಗಾಗಲೇ ಬ್ರಾಡ್‌ಗೇಜ್ ಮಾರ್ಗವಿದೆ. ಅಲ್ಲಿಂದ ಮಮ್ಮಿಗಟ್ಟಿ ತನಕ 11.70 ಕಿ. ಮೀ. ತನಕ ಹೊಸ ಮಾರ್ಗ ನಿರ್ಮಾಣ ಮಾಡಲಾಗುತ್ತದೆ. ಕರ್ನಾಟಕ ಸರ್ಕಾರ 2021-22ರ ಬಜೆಟ್‌ನಲ್ಲಿ ಯೋಜನೆಗೆ 463 ಕೋಟಿ ರೂ. ಅನುದಾನ ಘೋಷಣೆ ಮಾಡಿತ್ತು.

ಯೋಜನೆಯ ಭಾಗವಾಗಿ ಕ್ಯಾರಕೊಪ್ಪ, ಮಮ್ಮಿಗಟ್ಟಿ, ತೇಗೂರು, ಕಿತ್ತೂರು, ಹುಲಿಕಟ್ಟಿ, ಎಂ. ಕೆ. ಹುಬ್ಬಳ್ಳಿ, ಬಾಗೇವಾಡಿ, ಕಣವಿ ಕರವಿನಕೊಪ್ಪ ಮತ್ತು ದೇಸೂರು ಗ್ರಾಮದಲ್ಲಿ ನಿಲ್ದಾಣ ನಿರ್ಮಾಣವಾಗಲಿದೆ. ಕ್ಯಾರಕೊಪ್ಪ ಮತ್ತು ದೇಸೂರದಲ್ಲಿ ಜಂಕ್ಷನ್ ನಿರ್ಮಾಣಗೊಳ್ಳಲಿದೆ.

2022ರಲ್ಲಿಯೇ ಈ ಯೋಜನೆಯ ಭೂಸ್ವಾಧೀನ ಕಾರ್ಯ ನಿರೀಕ್ಷಿತ ವೇಗದಲ್ಲಿ ಸಾಗುತ್ತಿಲ್ಲ. ಯೋಜನೆ ವಿಳಂಬವಾಗುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ಯೋಜನೆಗೆ ಬೇಕಾದ ಭೂಮಿಯನ್ನು ನೀಡುವುದು ರಾಜ್ಯ ಸರ್ಕಾರದ ಜವಾಬ್ದಾರಿ ಭೂಮಿ ಹಂಚಿಕೆಯಾದರೆ ಕೇಂದ್ರ ಸರ್ಕಾರ ತನ್ನ ಪಾಲಿನ ಕಾಮಗಾರಿಯನ್ನು ಆರಂಭಿಸುತ್ತದೆ.

ಈ ಯೋಜನೆಗೆ ಧಾರವಾಡ ಜಿಲ್ಲೆಯಲ್ಲಿ 225 ಎಕರೆ ಮತ್ತು ಬೆಳಗಾವಿ ಜಿಲ್ಲೆಯಲ್ಲಿ 602 ಎಕರೆ ಭೂಮಿ ಬೇಕು ಎಂದು ಅಂದಾಜಿಸಲಾಗಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಯೋಜನೆಗೆ ಹಸಿರು ನಿಶಾನೆ ಸಿಕ್ಕಿದರೂ ಸಹ ಕೋವಿಡ್ ಪರಿಸ್ಥಿತಿಯ ಕಾರಣ ಯೋಜನೆಗೆ ನಿರೀಕ್ಷಿತ ವೇಗ ಸಿಗಲಿಲ್ಲ.

ಈ ನೂತನ ನೇರ ರೈಲು ಮಾರ್ಗದಿಂದ ಧಾರವಾಡ-ಬೆಳಗಾವಿ ನಗರದ ನಡುವಿನ ರೈಲು ಪ್ರಯಾಣದ ಅವಧಿ 31 ಕಿ. ಮೀ. ಕಡಿಮೆಯಾಗಲಿದೆ. ಈಗ ಧಾರವಾಡದಿಂದ ಲೋಂಡಾ ಮೂಲಕ ಬೆಳಗಾವಿ ತಲುಪಬೇಕು. ಪ್ರಯಾಣದ ಅವಧಿ ಸುಮಾರು 4 ಗಂಟೆ. ನೇರ ರೈಲು ಮಾರ್ಗದಿಂದ ಸುಮಾರು 45 ನಿಮಿಷದಲ್ಲಿ ಸಂಚಾರ ನಡೆಸಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+