ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾರ್ಮಿಕನ ಕಾಡಿಸಿ ಬಸ್ ಕಳೆದುಕೊಂಡ ಕೆಎಸ್ಆರ್‌ಟಿಸಿ!

By ಶಂಭು ಹುಬ್ಬಳ್ಳಿ
|
Google Oneindia Kannada News

ಹುಬ್ಬಳ್ಳಿ, ಜೂನ್, 23: ಇದು ಹಳೆಯ ಪ್ರಕರಣ ಆದರೆ ಪರಿಹಾರ ಹೊಸದು, ತನ್ನ ಸಂಸ್ಥೆಯ ನೌಕರನಿಗೆ ಸರಿಯಾಗಿ ಸ್ಪಂದಿಸದ ಸಾರಿಗೆ ಇಲಾಖೆ ಜಪ್ತಿ ಶಿಕ್ಷೆ ಅನುಭವಿಸಿದ್ದು ತನ್ನ ಬಸ್ ಅನ್ನೇ ಕಳೆದುಕೊಂಡಿದೆ.

ಕೆಲಸಗಾರನಿಗೆ ಸೂಕ್ತ ಪರಿಹಾರ ನೀಡದ್ದಕ್ಕೆ ಸಾರಿಗೆ ಇಲಾಖೆಯ ಬಸ್ ಜಪ್ತಿ ಮಾಡಲು ಪ್ರಧಾನ ಕಾರ್ಮಿಕರ ನ್ಯಾಯಾಲಯ ಆದೇಶಿಸಿದ್ದರ ಪರಿಣಾಮ ಗುರುವಾರ ನಗರದ ಹಳೇ ಬಸ್ ನಿಲ್ದಾಣದಲ್ಲಿ ನಿಂತಿದ್ದ ಬಸ್ ವೊಂದನ್ನು ಜಪ್ತಿ ಮಾಡಲಾಗಿದ್ದು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಕಾರ್ಮಿಕ ನ್ಯಾಯಾಲಯದ ಬೇಲೀಫ್ ಹಾಗೂ ದೂರುದಾರನ ಪರ ವಕೀಲರಾದ ಬಸವರಾಜ್ ಅಸುಂಡಿ ಬಸ್ ಜಪ್ತಿ ಮಾಡುವ ಕಾರ್ಯದಲ್ಲಿ ಇದ್ದರು.[ಹುಬ್ಬಳ್ಳಿ: ರಸ್ತೆ ತಗ್ಗಿಗೆ ಉರುಳಿದ ಕೆಎಸ್ಸಾರ್ಟಿಸಿ ಬಸ್]

ksrtc

ಬಸ್ ಜಪ್ತಿ ಮಾಡಿದ್ದು ಏಕೆ ?:

ಇದು 28 ವರ್ಷ ಹಳೆಯ ಘಟನೆ. ಸಾರಿಗೆ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಗುರಪಾದಪ್ಪ ಕಣವಿ ಎಂಬುವವರು ಅನಾರೋಗ್ಯದ ಹಿನ್ನೆಲೆಯಲ್ಲಿ ಕೆಲಸಕ್ಕೆ ಹಾಜರಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಸಾರಿಗೆ ಅಧಿಕಾರಿಗಳು ಗುರಪಾದಪ್ಪನವರಿಗೆ ಹೀಗಾದಲ್ಲಿ ನೀನು ಕಡ್ಡಾಯ ನಿವೃತ್ತಿ ತೆಗೆದುಕೊಂಡು ಕೆಲಸ ಬಿಡು ಎಂದು ಹೇಳಿದ್ದರು.[ಹುಬ್ಬಳ್ಳಿ ಮೇಯರ್ ಮಂಜುಳಾರನ್ನೇ ಬಸ್ ಹತ್ತಿಸಿದ ಪಾಲಿಕೆ!]

ಇದಕ್ಕೆ ಪ್ರತಿಕ್ರಿಯಿಸಿದ ಗುರಪಾದಪ್ಪ ತಾವು ಸಾರಿಗೆ ಇಲಾಖೆಯ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತೇನೆ. ಅಲ್ಲಿಯೇ ಯಾವುದಾದರೂ ಬದಲಿ ಕೆಲಸ ವಹಿಸಿಕೊಡಿ ಎಂದು ಕೇಳಿಕೊಂಡಿದ್ದರು. ಇದಕ್ಕೆ ಅಧಿಕಾರಿಗಳು ಗಮನ ನೀಡದೇ ಮನವಿಯನ್ನು ತಿರಸ್ಕರಿಸಿದ್ದರು.

ksrtc

ಈ ಕುರಿತು 1987 ರಲ್ಲಿ ಗುರಪಾದಪ್ಪ ಕಾರ್ಮಿಕ ಇಲಾಖೆಯ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದನು. ವಿಚಾರಣೆ ಮುಕ್ತಾಯಗೊಂಡು ಸಾರಿಗೆ ಇಲಾಖೆಯು ಗುರುಪಾದಪ್ಪನಿಗೆ 13 ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂಬ ಆದೇಶ ಬಂದಿತ್ತು.

ಆದರೆ ಇದುವರೆಗೂ ಸಾರಿಗೆ ಯಾವುದೇ ಪರಿಹಾರವನ್ನು ನೀಡಿರಲಿಲ್ಲ. ಪರಿಣಾಮಮ ಇದೀಗ ಬಸ್ ವೊಂದನ್ನು ಕಳೆದುಕೊಂಡಿದೆ.

English summary
Hubballi: After the Court verdict labour department officers seized KSRTC bus regarding a labour compensation case. This bizarre incident happened at Huballi old bus stand on 23, June 2016.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X