ಭಾಷಣದ ನಡುವೆ ಬಾಯಿತಪ್ಪಿದ ಕುಮಾರಸ್ವಾಮಿ, ಕಂಬಾರರು ತಬ್ಬಿಬ್ಬು!

ಧಾರವಾಡ, ಜನವರಿ 04: ಕುಮಾರಸ್ವಾಮಿ ಅವರು ಧಾರವಾಡ ಸಾಹಿತ್ಯ ಸಮ್ಮೇಳನದಲ್ಲಿ ಭಾಷಣ ಮಾಡುವ ವೇಳೆ ಒಮ್ಮೆ ಬಾಯಿತಪ್ಪಿ 'ಖಾಸಗೀಕರಣ' ಎಂದರು, ರಾಷ್ಟ್ರೀಕರಣದ ಆಗಷ್ಟೆ ಮಾತನಾಡಿದ್ದ ಸಮ್ಮೇಳನಾಧ್ಯಕ್ಷ ಚಂದ್ರಶೇಖರ ಕಂಬಾರ ಅವರನ್ನು ತಬ್ಬಿಬ್ಬುಗೊಳಿಸಿತು.

ಚಂದ್ರಶೇಖರ ಕಂಬಾರರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಪ್ರಾಥಮಿಕ ಶಿಕ್ಷಣವನ್ನು ರಾಷ್ಟ್ರೀಕರಣಗೊಳಿಸಬೇಕು, ಪ್ರಾಥಮಿಕ ಶಿಕ್ಷಣವನ್ನು ಸರ್ಕಾರವೇ ತಮ್ಮದೇ ಶಾಲೆಗಳಲ್ಲಿ ನೀಡಬೇಕು ಎಂದು ಒತ್ತಿ ಹೇಳಿದ್ದರು. ಕನ್ನಡವನ್ನು, ಸ್ಥಳೀಯ ಭಾಷೆಗಳನ್ನು ಉಳಿಸಲು ಇದು ಪರಿಣಾಮಕಾರಿ ಹೆಜ್ಜೆ ಎಂಬುದು ಅವರ ಅಭಿಪ್ರಾಯವಾಗಿತ್ತು.

ಕುಮಾರಸ್ವಾಮಿ ಅವರಿಗೂ ಕಂಬಾರರ ಮಾತುಗಳು ಸರಿ ಎನಿಸಿತು, ಆದರೆ ಅದನ್ನು ಹೇಳುವಾಗ ಮಾತ್ರ ಕಂಬಾರರ ಮಾತಿನ ಆಶಯಕ್ಕೆ ಪೂರ್ಣ ವಿರುದ್ಧವಾದ ಪದವನ್ನು ಬಳಸಿ ವೇದಿಕೆ ಮೇಲಿದ್ದವರು ದಂಗಾಗುವಂತೆ ಮಾಡಿದರು. ವಿಶೇಷವೆಂದರೆ ಕುಮಾರಸ್ವಾಮಿ ಅವರಿಗೆ ತಾವು ಮಾಡಿದ ತಪ್ಪಿನ ಅರಿವೂ ಆಗಲಿಲ್ಲ!

ಚಿತ್ರಗಳು : ಧಾರವಾಡದಲ್ಲಿ ಕನ್ನಡ ಸಾಹಿತ್ಯ ಜಾತ್ರೆಗೆ ಚಾಲನೆ

Kumaraswamy did mistake while giving speech in literature fest

ಸಮ್ಮೇಳನದಲ್ಲಿ ನಿರ್ಣಯ ಕೈಗೊಂಡರೆ ಪ್ರಾಥಮಿಕ ಶಿಕ್ಷಣ 'ಖಾಸಗೀಕರಣ' ನಾನು ಬದ್ಧ ಎಂದು ಕುಮಾರಸ್ವಾಮಿ ಅವರು ಮಾತಿನ ಭರದಲ್ಲಿ ಹೇಳಿಬಿಟ್ಟರು. ಆದರೆ ಅವರ ಮಾತಿನ ಭಾವ ಇದ್ದದ್ದು 'ರಾಷ್ಟ್ರೀಕರಣ' ಮಾಡಬೇಕು ಎಂದೇ ಆಗಿತ್ತಾದರೂ ಭಾವಕ್ಕೆ ಪೂರ್ಣ ವಿರುದ್ಧವಾದ ಪದವನ್ನು ಆಯ್ಕೆ ಮಾಡಿಕೊಂಡಿದ್ದು, ವೇದಿಕೆ ಮೇಲಿದ್ದವರನ್ನು ಪೇಚಿಗೆ ಸಿಲುಕಿಸಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+