BREAKING: ವಿನಯ್ ಕುಲಕರ್ಣಿಗೆ ಹೈಕೋರ್ಟ್ ನಿಂದ ಗ್ರೀನ್ ಸಿಗ್ನಲ್
ಬೆಂಗಳೂರು, ಮೇ 07: ಬಿಜೆಪಿ ಮುಖಂಡ ಮತ್ತು ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡದಿಂದ ದೂರು ಉಳಿದಿದ್ದ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಕರ್ನಾಟಕ ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ.
ಹೌದು, ಕಳೆದ ವಿಧಾನಸಭಾ ಚುನಾವಣೆಯಿಂದಲೂ ಮತದಾನಕ್ಕೆ ಅವಕಾಶ ಸಿಗದ ವಿನಯ್ ಕುಲಕರ್ಣಿಗೆ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಧಾರವಾಡದಲ್ಲಿ ಮತದಾನ ಮಾಡಲು ಹೈಕೋರ್ಟ್ ಅನುಮತಿ ನೀಡಿದೆ. ಮತದಾನ ಮಾಡಿ ಹೊರ ಬರುವಂತೆ ಷರತ್ತಿನ ಮೇರೆಗೆ ನ್ಯಾಯಪೀಠ ಅನುಮತಿ ನೀಡಿದೆ.

ಕೊಲೆ ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಧಾರವಾಡ ಪ್ರವೇಶ ಮಾಡದಂತೆ ಷರತ್ತು ಬದ್ಧ ಜಾಮೀನು ನೀಡಿ ಆದೇಶಿಸಿತ್ತು. ಇದಾದ ಬಳಿಕ ನಡೆದ ವಿಧಾನಸಭಾ ಚುನಾವಣೆಗೆ ಅವರಿಗೆ ಮತದಾನಕ್ಕೆ ಅವಕಾಶ ಸಿಗಲಿಲ್ಲ. ಕೆಲವು ಭಾರಿ ಧಾರವಾಡ ಪ್ರವೇಶಕ್ಕೆ ಅನುಮತಿ ಕೇಳಿದರೂ ಸಿಕ್ಕಿರಲಿಲ್ಲ.
ಜನಪ್ರತಿನಿಧಿಗಳ ಕೋರ್ಟ್ ನಕಾರ
ಇದೀಗ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಅವರು ಮತದಾನಕ್ಕೆ ಅನುಮತಿ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ ನ್ಯಾಯಾಲಯ ಅವರ ಮನವಿಯನ್ನು ತಿರಸ್ಕರಿಸಿತ್ತು. ಈಗಾಗಲೇ ಇಂತಹ ಮನವಿಯನ್ನು ನ್ಯಾಯಾಲಗಳು ತಿರಸ್ಕರಿಸಿವೆ. ಈಗಲೂ ಅವರಿಗೂ ಪ್ರವೇಶ ನೀಡದಂತೆ ವಾದ ಮಾಡಲಾಗಿತ್ತು.
ಬಳಿಕ ಅವರು ಹೈಕೋರ್ಟ್ ಮೊರೆ ಹೋಗಿದ್ದರು. ಇದೀಗ ಹೈಕೋರ್ಟ್ ಅವರು ಅರ್ಜಿಯನ್ನು ಪುರಸ್ಕರಿಸಿದ್ದು, ಧಾರವಾಡ ಪ್ರವೇಶಿಸಿ ಮತದಾನದ ಹಕ್ಕು ಚಲಾಯಿಸಲಷ್ಟೇ ಅನುಮತಿ ನೀಡಿ ಆದೇಶಿಸಿದೆ. ಇದರಿಂದಾಗಿ ವರ್ಷಗಳಿಂದ ಧಾರವಾಡಕ್ಕೆ ಹೆಜ್ಜ ಇಡದ ವಿನಯ್ ಕುಲಕರ್ಣಿಗೆ ಇಂದು ಧಾರವಾಡ ಪ್ರವೇಶಿಸಿ ಮತದಾನ ಮಾಡುವ ಅವಕಾಶ ಸಿಕ್ಕಿದೆ.
2016ರಲ್ಲಿ ಧಾರವಾಡದ ಸಪ್ತಾಪುರ ಲೇಔಟ್‌ನಲ್ಲಿ ಜಿಮ್‌ನಲ್ಲಿ ಬಿಜೆಪಿ ಮುಖಂಡ ಹಾಗೂ ಜಿಪಂ ಸದಸ್ಯ ಯೋಗೇಶ್ ಗೌಡ ಅವರ ಕೊಲೆ ನಡೆದಿತ್ತು. ಈ ಹತ್ಯೆ ಆರೋಪ ಎದುರಿಸುತ್ತಿರುವ ವಿನಯ್ ಕುಲಕರ್ಣಿ ಅವರು ಪ್ರಕರಣದಿಂದ ಹೊರ ಬರಲು ಸಾಕಷ್ಟು ಪ್ರಯತ್ನ ನಡೆಸುತ್ತಿದ್ದಾರೆ.
ಒಂದು ಬಕಡೆ ಖುಷಿ: ಇನ್ನೊಂದೆಡೆ ದುಖ: ವಿನಯ್ ಕುಲಕರ್ಣಿ
ಕೋರ್ಟ್ ಅನುಮತಿ ಬಳಿಕ ಧಾರವಾಡ ಪ್ರವೇಶಿಸಿ ಮತದಾನ ಮಾಡಿ ಪ್ರತಿಕ್ರಿಯಿಸಿದ ವಿನಯ್ ಕುಲಕರ್ಣಿ, ನನಗೆ ನಾಲ್ಕು ವರ್ಷಗಳ ಬಳಿಕ ನ್ಯಾಯಾಲಯ ಮತ ಹಾಕಲು ಅನುಮತಿ ಕೊಟ್ಟಿದೆ. ನನಗೆ ಒಂದು ಕಡೆ ಖುಷಿ ಇದೆ, ಇನ್ನೊಂದು ಕಡೆ ದುಖ: ಆಗಿದೆ ಎಂದು ಅವರು ಹೇಳಿದರು.
ನ್ಯಾಯಾಲಯಕ್ಕೆ ನಾನು ಧನ್ಯವಾದ ತಿಳಿಸುತ್ತೆನೆ. ವಿನೋದ್ ಅಸೂಟಿಗೆ ಮತ ಹಾಕಲು ನನಗೆ ಅವಕಾಶ ಸಿಕ್ಕಿದ್ದಕ್ಕೆ ಕಾರ್ಯಕರ್ತರು ಮಾದ್ಯಮಗಳಿಗೆ ಧನ್ಯವಾದ ತಿಳಿಸುವೆ. ಕೋರ್ಟ ಮತದಾನಕ್ಕೆ ಅವಕಾಶ ಕೊಟ್ಟಿದೆ. ಸಹಜವಾಗಿ ನಾನು 25 ವರ್ಷದ ಹಿಂದೆ ಆಯ್ಕೆ ಆಗಿದ್ದೇನೆ. ಸಾರ್ವಜನಿಕರಿಗೋಸ್ಕರ ಕೆಲಸ ಮಾಡಿದ್ದೇನೆ. ಕರ್ನಾಟಕದಲ್ಲಿ ನಾನು ಕ್ಷೆತ್ರಕ್ಕೆಬರದೆ ಇದ್ದರೂ ಜನರು ನನಗೆ ಆಯ್ಕೆ ಮಾಡಿದ್ದಾರೆ. ಈ ಭಾರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುತ್ತಾರೆ ಎಂದರು.
ನನಗೆ ಇವತ್ತು ಕೊಟ್ಟ ಅವಕಾಶ ಬಹಳ ಖುಷಿ ತಂದಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತ ಹಾಕಲು ಅವಕಾಶ ಕೊಟ್ಟಿದೆ. ನಾನು ಎಲ್ಲೂ ಬೇಟಿ ಕೊಡಲ್ಲ ಮತ ಹಾಕಿ ಮತ್ತೆ ಧಾರವಾಡದಿಂದ ಹೋಗುತ್ತೆನೆ ಎಂದು ತಿಳಿಸಿದರು.












Click it and Unblock the Notifications