5 ತಿಂಗಳು ಪೂರೈಸಿದ ಶಕ್ತಿ ಯೋಜನೆ: ಈವರೆಗಿನ ಉಚಿತ ಪ್ರಯಾಣದ ಟಿಕೆಟ್‌ ಮೊತ್ತದ ಸಂಪೂರ್ಣ ವಿವರ

ಹುಬ್ಬಳ್ಳಿ, ನವೆಂಬರ್‌ 12: ಮಹಿಳೆಯರಿಗೆ ಸರ್ಕಾರಿ ಬಸ್ಸುಗಳಲ್ಲಿ ಉಚಿತ ಪ್ರಯಾಣದ ಶಕ್ತಿ ಯೋಜನೆ ಐದು ತಿಂಗಳು ಪೂರೈಸಿದೆ. ವಾ.ಕ.ರ.ಸಾ.ಸಂಸ್ಥೆಯ ಬಸ್ಸುಗಳಲ್ಲಿ ಒಟ್ಟು 21.76 ಕೋಟಿ ಮಹಿಳೆಯರು ಉಚಿತ ಸಂಚಾರ ಮಾಡಿದ್ದು, ಪ್ರಯಾಣದ ಟಿಕೆಟ್ ಮೌಲ್ಯ ರೂ.556.41 ಕೋಟಿ ಗಳಾಗಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ಭರತ್‌.ಎಸ್ ತಿಳಿಸಿದ್ದಾರೆ.

ಮಹಿಳಾ ಸಬಲೀಕರಣದ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರದಿಂದ ಆರಂಭಿಸಲಾಗಿರುವ ಕರ್ನಾಟಕದ ಮಹಿಳೆಯರಿಗೆ ಸರ್ಕಾರಿ ಬಸ್ಸಿನಲ್ಲಿ ರಾಜ್ಯದೊಳಗೆ ಉಚಿತ ಪ್ರಯಾಣದ ಶಕ್ತಿ ಯೋಜನೆಗೆ ನಿರೀಕ್ಷೆಗೂ ಮೀರಿ ಭಾರಿ ಸ್ಪಂದನೆ ವ್ಯಕ್ತವಾಗಿದೆ. ಸಾರ್ವಜನಿಕರ ಸಹಭಾಗಿತ್ವ ಹಾಗೂ ಸಹಕಾರದಿಂದ ಯಶಸ್ವಿಯಾಗಿ ಮುಂದುವರೆದಿದೆ.

Karnataka Government Shakti Scheme Completed 5 Months

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯಾಪ್ತಿಯ ಆರು ಜಿಲ್ಲೆಗಳ 9 ಸಾರಿಗೆ ವಿಭಾಗಗಳ ಬಸ್ಸುಗಳಲ್ಲಿ ಜೂನ್ 11ರಿಂದ ನವೆಂಬರ್ 10 ರವರೆಗೆ ಐದು ತಿಂಗಳ ಅವಧಿಯಲ್ಲಿ ಒಟ್ಟು 21,76,17,297 ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ. ಪ್ರಯಾಣದ ಟಿಕೆಟ್‌ಗಳ ಮೌಲ್ಯ ರೂ.556,41,82,443 ಗಳಾಗಿದೆ.

ಸಂಸ್ಥೆಯ ವ್ಯಾಪ್ತಿಯ ಧಾರವಾಡ, ಬೆಳಗಾವಿ, ಬಾಗಲಕೋಟೆ, ಗದಗ, ಹಾವೇರಿ ಹಾಗೂ ಉತ್ತರ ಕನ್ನಡ ವ್ಯಾಪ್ತಿಯ ಆರು ಜಿಲ್ಲೆಗಳಲ್ಲಿನ 9 ಸಾರಿಗೆ ವಿಭಾಗಗಳ ಬಸ್ಸುಗಳಲ್ಲಿ ಶಕ್ತಿ ಯೋಜನೆಯಲ್ಲಿ ಇಲ್ಲಿಯವರೆಗೆ ಉಚಿತ ಪ್ರಯಾಣ ಮಾಡಿದ ಮಹಿಳೆಯರು ಹಾಗೂ ಪ್ರಯಾಣದ ಟಿಕೆಟ್ ಮೌಲ್ಯದ ಮಾಹಿತಿ.

ಹುಬ್ಬಳ್ಳಿ-ಧಾರವಾಡ ನಗರ ಸಾರಿಗೆಯಲ್ಲಿ ಒಟ್ಟು 2.91 ಕೋಟಿ ಮಹಿಳೆಯರು ಪ್ರಯಾಣಿಸಿದ್ದು, ಟಿಕೆಟ್ ಮೌಲ್ಯ 35.53 ಕೋಟಿ ರೂಪಾಯಿಗಳಾಗಿವೆ.

ಹುಬ್ಬಳ್ಳಿ ಗ್ರಾಮಾಂತರದಲ್ಲಿ 1.46 ಕೋಟಿ ಮಹಿಳೆಯರು ಪ್ರಯಾಣಿಸಿದ್ದು, ಟಿಕೆಟ್ ಮೌಲ್ಯ 53.19 ಕೋಟಿ ರೂಪಾಯಿಗಳಾಗಿವೆ.

ಧಾರವಾಡ ಗ್ರಾಮಾಂತರದಲ್ಲಿ 1.73 ಕೋಟಿ ಮಹಿಳೆಯರು ಪ್ರಯಾಣಿಸಿದ್ದು, ಟಿಕೆಟ್ ಮೌಲ್ಯ 47.45 ಕೋಟಿ ರೂಪಾಯಿಗಳಾಗಿವೆ.

ಬೆಳಗಾವಿಯಲ್ಲಿ 3.37 ಕೋಟಿ ಮಹಿಳೆಯರು ಪ್ರಯಾಣಿಸಿದ್ದು, ಟಿಕೆಟ್ ಮೌಲ್ಯ 69.76 ಕೋಟಿ ರೂಪಾಯಿಗಳಾಗಿವೆ.

ಚಿಕ್ಕೋಡಿಯಲ್ಲಿ 2.98 ಕೋಟಿ ಮಹಿಳೆಯರು ಪ್ರಯಾಣಿಸಿದ್ದು, ಟಿಕೆಟ್ ಮೌಲ್ಯ 75.61 ಕೋಟಿ ರೂಪಾಯಿಗಳಾಗಿವೆ.

ಬಾಗಲಕೋಟೆಯಲ್ಲಿ 2.73 ಕೋಟಿ ಮಹಿಳೆಯರು ಪ್ರಯಾಣಿಸಿದ್ದು, ಟಿಕೆಟ್ ಮೌಲ್ಯ 86.37 ಕೋಟಿ ರೂಪಾಯಿಗಳಾಗಿವೆ.

ಗದಗದಲ್ಲಿ 2.16 ಕೋಟಿ ಮಹಿಳೆಯರು ಪ್ರಯಾಣಿಸಿದ್ದು, ಟಿಕೆಟ್ ಮೌಲ್ಯ 66.22 ಕೋಟಿ ರೂಪಾಯಿಗಳಾಗಿವೆ.

ಹಾವೇರಿಯಲ್ಲಿ 2.41 ಕೋಟಿ ಮಹಿಳೆಯರು ಪ್ರಯಾಣಿಸಿದ್ದು, ಟಿಕೆಟ್ ಮೌಲ್ಯ 67.16 ಕೋಟಿ ರೂಪಾಯಿಗಳಾಗಿವೆ.

ಉತ್ತರ ಕನ್ನಡದಲ್ಲಿ 1.99 ಕೋಟಿ ಮಹಿಳೆಯರು ಪ್ರಯಾಣಿಸಿದ್ದು, ಟಿಕೆಟ್ ಮೌಲ್ಯ 55.13 ಕೋಟಿ ರೂಪಾಯಿಗಳಾಗಿವೆ.

ಜೂನ್ 11ರಂದು ಶಕ್ತಿ ಯೋಜನೆ ಜಾರಿಯಾಗಿದ್ದು, ಸಾರ್ವಜನಿಕರ ಸಹಭಾಗಿತ್ವ ಹಾಗೂ ಸಹಕಾರದಿಂದ ಐದು ತಿಂಗಳು ಪೂರೈಸಿದ್ದು ಯಶಸ್ವಿಯಾಗಿ ಮುಂದುವರೆದಿದೆ ಎಂದು ವಾ.ಕ.ರ.ಸಾ.ಸಂಸ್ಥೆಯ ವ್ಯವಸ್ಥಾಪಕ ಭರತ್. ಎಸ್ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+