3 ತಿಂಗಳು ಪೂರೈಸಿದ ಶಕ್ತಿ ಯೋಜನೆ: ಈವರೆಗಿನ ಉಚಿತ ಪ್ರಯಾಣದ ಟಿಕೆಟ್ ಮೊತ್ತದ ಸಂಪೂರ್ಣ ವಿವರ
ಧಾರವಾಡ, ಸೆಪ್ಟೆಂಬರ್ 11: ಮಹಿಳೆಯರಿಗೆ ಸರ್ಕಾರಿ ಬಸ್ಸುಗಳಲ್ಲಿ ಉಚಿತ ಪ್ರಯಾಣದ ಶಕ್ತಿ ಯೋಜನೆ ಮೂರು ತಿಂಗಳು ಪೂರೈಸಿದೆ. ಇದುವರೆಗೆ ಮಹಿಳೆಯರು 13.20 ಕೋಟಿ ಶೂನ್ಯ ಟಿಕೆಟ್‌ಗಳನ್ನು ಪಡೆದುಕೊಂಡು ಉಚಿತ ಸಂಚಾರ ಮಾಡಿದ್ದು ಶೂನ್ಯ ಟಿಕೆಟ್ ಪ್ರಯಾಣದ ಮೊತ್ತ ರೂ. 332.77 ಕೋಟಿಗಳಾಗಿದೆ.
ಮಹಿಳಾ ಸಬಲೀಕರಣದ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರದಿಂದ ಆರಂಭಿಸಲಾಗಿರುವ ಕರ್ನಾಟಕದ ಮಹಿಳೆಯರಿಗೆ ಸರ್ಕಾರಿ ಬಸ್ಸಿನಲ್ಲಿ ರಾಜ್ಯದೊಳಗೆ ಉಚಿತ ಪ್ರಯಾಣದ ಶಕ್ತಿ ಯೋಜನೆಗೆ ನಿರೀಕ್ಷೆಗೂ ಮೀರಿ ಭಾರಿ ಸ್ಪಂದನೆ ವ್ಯಕ್ತವಾಗಿದೆ. ಯೋಜನೆ ಜಾರಿಯಾಗಿ ಸಪ್ಟೆಂಬರ್ 10ಕ್ಕೆ ಮೂರು ತಿಂಗಳು ಪೂರೈಸಿದ್ದು, ಸಾರ್ವಜನಿಕರ ಸಹಭಾಗಿತ್ವ ಹಾಗೂ ಸಹಕಾರದಿಂದ ಯಶಸ್ವಿಯಾಗಿ ಮುಂದುವರೆದಿದೆ.

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯಾಪ್ತಿಯ ಧಾರವಾಡ, ಬೆಳಗಾವಿ, ಬಾಗಲಕೋಟೆ, ಗದಗ, ಹಾವೇರಿ ಹಾಗೂ ಉತ್ತರ ಕನ್ನಡ ಆರು ಜಿಲ್ಲೆಗಳ 9 ಸಾರಿಗೆ ವಿಭಾಗಗಳ ಬಸ್ಸುಗಳಲ್ಲಿ ಮೂರು ತಿಂಗಳ ಅವಧಿಯಲ್ಲಿ ಮಹಿಳೆಯರು ಉಚಿತ ಪ್ರಯಾಣ ಮಾಡಿದ ಶೂನ್ಯ ಟಿಕೆಟ್‌ಗಳ ಸಂಖ್ಯೆ 13,20,53,266 ಗಳಾಗಿದೆ. ಉಚಿತ ಪ್ರಯಾಣದ ಟಿಕೆಟ್ ಮೊತ್ತ ರೂ. 332,77,03,789 ಗಳಾಗಿದೆ.
ಜೂನ್ 11 ರಿಂದ 30 ರವೆರೆಗೆ 2.55 ಕೋಟಿ ಶೂನ್ಯ ಟಿಕೆಟ್‌ಗಳನ್ನು ಪಡೆದು ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ. ಪ್ರಯಾಣದ ಟಿಕೆಟ್ ಮೊತ್ತ ರೂ. 65.15 ಕೋಟಿಗಳಾಗಿದೆ.
ಜುಲೈ ತಿಂಗಳಲ್ಲಿ 4.48 ಕೋಟಿ ಶೂನ್ಯ ಟಿಕೆಟ್‌ಗಳನ್ನು ಪಡೆದು ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ. ಪ್ರಯಾಣದ ಟಿಕೆಟ್ ಮೊತ್ತ ರೂ. 111.78 ಕೋಟಿಗಳಾಗಿದೆ.
ಆಗಸ್ಟ್ ತಿಂಗಳಲ್ಲಿ 4.61 ಕೋಟಿ ಶೂನ್ಯ ಟಿಕೆಟ್‌ಗಳನ್ನು ಪಡೆದು ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ. ಪ್ರಯಾಣದ ಟಿಕೆಟ್ ಮೊತ್ತ ರೂ. 115.42 ಕೋಟಿಗಳಾಗಿದೆ.
ಸಪ್ಟೆಂಬರ್ 1ರಿಂದ 10 ರವೆರೆಗೆ 1.56 ಕೋಟಿ ಶೂನ್ಯ ಟಿಕೆಟ್‌ಗಳನ್ನು ಪಡೆದು ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ. ಪ್ರಯಾಣದ ಟಿಕೆಟ್ ಮೊತ್ತ ರೂ. 40.42 ಕೋಟಿಗಳಾಗಿದೆ.

ವಿಭಾಗವಾರು ಮೂರು ತಿಂಗಳಲ್ಲಿ ಉಚಿತ ಪ್ರಯಾಣ ಮಾಡಿದ ಮಹಿಳೆಯರಿಗೆ ವಿತರಣೆಯಾದ ಶೂನ್ಯ ಟಿಕೆಟ್‌ಗಳು ಹಾಗೂ ಪ್ರಯಾಣದ ಮೊತ್ತದ ಮಾಹಿತಿ ಇಲ್ಲಿದೆ.
| ಕ್ರಮ ಸಂಖ್ಯೆ | ವಿಭಾಗ | ಶೂನ್ಯ ಟಿಕೆಟ್ ಗಳು (ಕೋಟಿ ಗಳಲ್ಲಿ) | ಪ್ರಯಾಣದ ಟಿಕೆಟ್ ಮೌಲ್ಯ (ಕೋಟಿ ಗಳಲ್ಲಿ) |
| 1 | ಹು-ಧಾ ನಗರ ಸಾರಿಗೆ | 1.76 | 21.46 |
| 2 | ಹುಬ್ಬಳ್ಳಿ ಗ್ರಾಮಾಂತರ | 0.88 | 31.42 |
| 3 | ಧಾರವಾಡ | 1.06 | 28.4 |
| 4 | ಬೆಳಗಾವಿ | 2.04 | 41.89 |
| 5 | ಚಿಕ್ಕೋಡಿ | 1.81 | 45.23 |
| 6 | ಬಾಗಲಕೋಟೆ | 1.66 | 51.65 |
| 7 | ಗದಗ | 1.32 | 40.02 |
| 8 | ಹಾವೇರಿ | 1.46 | 39.87 |
| 9 | ಉತ್ತರ ಕನ್ನಡ | 1.22 | 32.84 |












Click it and Unblock the Notifications