'ಸುದ್ದಿ ಕೊಡುವ ಆತುರದಲ್ಲಿ ಸಮಾಜದ ಮೇಲಿನ ಪರಿಣಾಮ ಮರೆಯಕೂಡದು'

Posted By:
Subscribe to Oneindia Kannada

ಧಾರವಾಡ, ಸೆಪ್ಟೆಂಬರ್ 16: ಪ್ರಜಾಪ್ರಭುತ್ವದ ಯಶಸ್ಸಿನಲ್ಲಿ ಮಾಧ್ಯಮಗಳ ಪಾತ್ರ ಮಹತ್ವದ್ದು. ಪತ್ರಕರ್ತರು ವೃತ್ತಿ ಪರಿಪೂರ್ಣತೆ ಸಾಧಿಸಲು ನಿರಂತರವಾಗಿ ಅಧ್ಯಯನಶೀಲರಾಗಬೇಕು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಅಭಿಪ್ರಾಯ ಪಟ್ಟರು.

ಎಸ್ಸಿಎಸ್ಟಿ ನೋಂದಾಯಿತ ಪತ್ರಕರ್ತರಿಗೆ ಮೀಡಿಯಾ ಕಿಟ್

ಕರ್ನಾಟಕ ಮಾಧ್ಯಮ ಅಕಾಡೆಮಿ ಮತ್ತು ವಿವಿಧ ಸಂಸ್ಥೆ ಆಶ್ರಯದಲ್ಲಿ ಕರ್ನಾಟಕ ವಿ.ವಿ.ಯಲ್ಲಿ ಶುಕ್ರವಾರದಿಂದ ಆರಂಭವಾದ ಪತ್ರಿಕೋದ್ಯಮ ವಿದ್ಯಾರ್ಥಿಗಳ ಹಾಗೂ ಗ್ರಾಮೀಣ ಪತ್ರಕರ್ತರ ತರಬೇತಿ ಶಿಬಿರದಲ್ಲಿ ಅವರು ಮಾತನಾಡಿದರು.

Journalist should always think about social impact of news

ಪತ್ರಿಕೋದ್ಯಮ ತರಗತಿಗಳಲ್ಲಿ ಸೈದ್ಧಾಂತಿಕ ಆಯಾಮಗಳನ್ನು ಕಲಿಸಿಕೊಡಲಾಗುತ್ತದೆ. ಆದರೆ ವಾಸ್ತವಿಕವಾಗಿ ಅವುಗಳನ್ನು ಅನುಸರಿಸುವ, ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಸಾಮರ್ಥ್ಯ ರೂಪಿಸಿಕೊಳ್ಳುವುದು ಮುಖ್ಯ. ಪ್ರಜಾಪ್ರಭುತ್ವದಲ್ಲಿ ಶಾಸಕಾಂಗ, ನ್ಯಾಯಾಂಗ ಹಾಗೂ ಕಾರ್ಯಾಂಗಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುವಂತೆ,ಎಚ್ಚರ ತಪ್ಪದಂತೆ ಸರಿ ದಾರಿಯಲ್ಲಿ ಮುನ್ನಡೆಯಲು ಮಾಧ್ಯಮರಂಗದ ಜವಾಬ್ದಾರಿ ಮಹತ್ವದ್ದಾಗಿದೆ ಎಂದು ಹೇಳಿದರು.

ಹಿರಿಯ ಪತ್ರಕರ್ತರಾದ ವೆಂಕಟನಾರಾಯಣ, ವೆಂಕಟಸುಬ್ಬುಗೆ ಸನ್ಮಾನ

ಸುದ್ದಿ ಕೊಡುವ ಆತುರವಿದ್ದರೂ ಅವುಗಳು ಸಮಾಜದಲ್ಲಿ ಉಂಟುಮಾಡುವ ಪರಿಣಾಮಗಳ ಬಗ್ಗೆ ಅವಲೋಕನ ಮಾಡಿಕೊಳ್ಳಬೇಕು. ಪತ್ರಕರ್ತರಾಗ ಬಯಸುವವರಿಗೆ ರಾಷ್ಟ್ರೀಯ, ಜಾಗತಿಕ ಇತಿಹಾಸ, ವರ್ತಮಾನದ ಆಗುಹೋಗುಗಳು, ಸಮಾಜದ ವಿವಿಧ ಸ್ತರಗಳ ಆಳವಾದ ಪರಿಚಯ ಇರಬೇಕು. ಪ್ರತಿ ದಿನ ಕನಿಷ್ಠ ಎರಡು ಗಂಟೆಗಳ ಅವಧಿಯನ್ನು ಅಧ್ಯಯನಕ್ಕೆ ಮೀಸಲಿಡಬೇಕು ಎಂದರು.

Journalist should always think about social impact of news

ವರದಿ ಮಾಡುವಾಗ ಘಟನೆಯ ಪೂರ್ವಾಪರದ ಸಮಗ್ರ ತಿಳಿವಳಿಕೆ ಹೊಂದಿರಬೇಕು. ಸರಕಾರದ ಯೋಜನೆ, ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿ,ಜನಸಾಮಾನ್ಯರಿಗೆ ತಲುಪಿಸಲು ಮಾಧ್ಯಮಗಳು ಮಹತ್ವದ ಸಾಧನಗಳಾಗಿವೆ. ಎರಡು ದಿನಗಳ ವಿವಿಧ ಗೋಷ್ಠಿಗಳಲ್ಲಿ ಮಾಧ್ಯಮ ವೃತ್ತಿಗೆ ಅಗತ್ಯವಾಗಿರುವ ಎಲ್ಲ ವಿಷಯಗಳನ್ನು ಅಳವಡಿಸಲಾಗಿದೆ. ವಿದ್ಯಾರ್ಥಿಗಳು,ಪತ್ರಕರ್ತರು ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಎಂ.ಸಿದ್ಧರಾಜು ಮಾತನಾಡಿ, ಅಕಾಡೆಮಿಯು ಪತ್ರಕರ್ತರಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ, ವಿಶೇಷವಾಗಿ ಗ್ರಾಮೀಣ ಮತ್ತು ಯುವ ಪತ್ರಕರ್ತರನ್ನು ಪ್ರೋತ್ಸಾಹಿಸಲು ತರಬೇತಿ ಶಿಬಿರ ಆಯೋಜಿಸಲಾಗಿದೆ ಎಂದರು.

ಕ.ವಿ.ವಿ. ಕುಲಸಚಿವ ಪ್ರೊ.ಮಲ್ಲಿಕಾರ್ಜುನ ಪಾಟೀಲ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಪ್ರೊ.ವಿಜಯಲಕ್ಷ್ಮಿ ಅಮ್ಮಿನಭಾವಿ, ಮಾಧ್ಯಮ ಅಕಾಡೆಮಿ ಸದಸ್ಯರಾದ ಗಣೇಶ ಕದಂ, ಕಾರ್ಯದರ್ಶಿ ಎಸ್.ಶಂಕರಪ್ಪ ಉಪಸ್ಥಿತರಿದ್ದರು. ಡಾ.ನಾಗರಾಜ ಹಳ್ಳಿ ನಿರೂಪಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Journalist should always think about social impact of news, said by Dharwad DC Dr.S.B.Bommanahalli in Karnataka VV at journalists training session.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ