ಪೊಲೀಸರ ದೌರ್ಜನ್ಯ ಖಂಡಿಸಿ ಜೆಡಿಎಸ್ ನಿಂದ ಪ್ರತಿಭಟನೆ

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಧಾರವಾಡ, ಜುಲೈ 31: ಯಮನೂರಿನಲ್ಲಿ ಪೊಲೀಸರ ದೌರ್ಜನ್ಯದಿಂದ ಗ್ರಾಮಸ್ಥರು ಭಯಭೀತಗೊಂಡು ಊರು ಬಿಟ್ಟಿದ್ದಾರೆ. ಅಳಿದುಳಿದವರು ಶಾಸಕರು, ಸಚಿವರ ಎದುರು ತಮ್ಮ ಗೋಳು ತೋಡಿಕೊಂಡಿದ್ದಾರೆ. ಪೊಲೀಸರ ದೌರ್ಜನ್ಯ ಖಂಡಿಸಿ ಜೆಡಿಎಸ್ ಪ್ರತಿಭಟನೆಗೆ ಮುಂದಾಗಿದೆ.

ಮಳೆ ಬಂದು ಹೊಲದಲ್ಲಿ ಕೆಲಸ ಮಾಡಬೇಕಾದ ರೈತರು ಬಂಧನ ಭೀತಿಯಿಂದ ತಲೆ ಮರೆಸಿಕೊಂಡಿದ್ದಾರೆ. ಕೆಲವರು ಹೋದವರು ಇದುವರೆಗೂ ಮನೆಗೆ ಬಂದಿಲ್ಲ ಎಂದು ಗ್ರಾಮದ ಮಹಿಳೆಯರು ಆರೋಪಿಸಿದ್ದಾರೆ. ಬಂಧಿತ ರೈತರನ್ನು ಬಳ್ಳಾರಿ ಜೈಲಿಗೆ ರವಾನಿಸಲಾಗಿದೆ.

ಘಟನೆಯ ಹಿನ್ನೆಲೆಯಲ್ಲಿ ಶನಿವಾರ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಯಮನೂರು ಮತ್ತು ಸುತ್ತಮುತ್ತಲಿನ ಗ್ರಾಮಕ್ಕೆ ಭೇಟಿ ನೀಡಿದ್ದರು. [ಯಮನೂರಿನಲ್ಲಿ ಪೊಲೀಸ್ ದೌರ್ಜನ್ಯ: ಎಡಿಜಿಪಿ ಪಂತ್ ರಿಂದ ತನಿಖೆ]

ಕನ್ನಡ ಪರ ಸಂಘಟನೆಗಳ ಕರ್ನಾಟಕ ಬಂದ್ ಕರೆ ಹಿನ್ನೆಲೆಯಲ್ಲಿ ಮತ್ತು ಉತ್ತರ ಕರ್ನಾಟಕ ಬಂದ್ ಸಂದರ್ಭದಲ್ಲಿ ನವಲಗುಂದ ಪಟ್ಟಣದ ಸರಕಾರಿ ಕಚೇರಿಗಳಿಗೆ ಬೆಂಕಿ ಹಚ್ಚಲಾಗಿತ್ತು. ಜೊತೆಗೆ ಒಂದು ಸರಕಾರಿ ಬಸ್ ಸುಡಲಾಗಿತ್ತು. ಪೊಲೀಸರ ಜೀಪ್ ಗೂ ಬೆಂಕಿ ಹಚ್ಚಲಾಗಿತ್ತು.
ಈ ಹಿನ್ನೆಲೆಯಲ್ಲಿ ಗುರುವಾರ ರಾತ್ರೋ ರಾತ್ರಿ ಪೊಲೀಸರು ಯಮನೂರ ಮತ್ತು ಅಳಗವಾಡಿ ಗ್ರಾಮಕ್ಕೆ ಧಾವಿಸಿ ಜನರಲ್ಲಿ ಬಂಧಿಸಿ ಕರೆದೊಯ್ದಿದ್ದರು. [ಇದೇನು ಸದ್ದಾಂ ಹುಸೇನ್ ರಾಜ್ಯವೇ? : ಎಚ್ಡಿಕೆ ಪ್ರಶ್ನೆ]

ಮನೆ ಬಾಗಿಲು ಮುರಿದು ಒಳಗಡೆ ಬಂದ ಪೊಲೀಸರು ಮೊದಲು ಮಾಡುವ ಕೆಲಸವೇ ಟಿವಿ ಒಡೆಯುವುದು, ನಂತರ ಸಿಕ್ಕ ಸಿಕ್ಕವರಿಗೆ ಲಾಠಿಯಿಂದ ಬಡಿಯುತ್ತಿದ್ದರು ಎಂದು ಹೊಡೆತ ಮಲ್ಲಮ್ಮ ಹೇಳುತ್ತಾರೆ. ಹೆಣ್ಣು ಮಕ್ಕಳ ತೊಡೆಗೆ, ಎದೆಗೆ, ಬೆನ್ನಿಗೆ ಬಾಲಕಿಯರು, ಗರ್ಭಿಣಿಯರು ವೃದ್ಧರೆಂಬುದನ್ನು ನೋಡದೇ ಎಲ್ಲರನ್ನೂ ಥಳಿಸಿದ್ದರು.

ಸಂತ್ರಸ್ತರಿಗೆ ಕುಮಾರಸ್ವಾಮಿಯಿಂದ ಭರವಸೆ

ಸಂತ್ರಸ್ತರಿಗೆ ಕುಮಾರಸ್ವಾಮಿಯಿಂದ ಭರವಸೆ

ಯಮನೂರಿನಲ್ಲಿ ಪೊಲೀಸರ ದೌರ್ಜನ್ಯದಿಂದ ಗ್ರಾಮಸ್ಥರು ಭಯಭೀತಗೊಂಡು ಊರು ಬಿಟ್ಟಿದ್ದಾರೆ. ಅಳಿದುಳಿದವರು ಶಾಸಕರು, ಸಚಿವರ ಎದುರು ತಮ್ಮ ಗೋಳು ತೋಡಿಕೊಂಡಿದ್ದಾರೆ. ಪೊಲೀಸರ ದೌರ್ಜನ್ಯ ಖಂಡಿಸಿ ಜೆಡಿಎಸ್ ಪ್ರತಿಭಟನೆಗೆ ಮುಂದಾಗಿದೆ.

ಬಸವರಾಜ ಹೊರಟ್ಟಿ ಸಾಂತ್ವನ

ಬಸವರಾಜ ಹೊರಟ್ಟಿ ಸಾಂತ್ವನ

ರವಿವಾರ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಸಾಂತ್ವನ ಹೇಳಲು ಯಮನೂರು ಗ್ರಾಮಕ್ಕೆ ಭೇಟಿ ನೀಡಿದಾಗ ಅವರ ಕಾರನ್ನು ಮುತ್ತಿಗೆ ಪ್ರತಿಭಟಿಸಲಾಯಿತು. ಆಗಸ್ಟ್ 4ರ ನಂತರ ಕುಮಾರಸ್ವಾಮಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಹೊರಟ್ಟಿ ಹೇಳಿದರು.

ಬೂದಿ ಮುಚ್ಚಿದ ಕೆಂಡದಂತಹ ವಾತಾವರಣ

ಬೂದಿ ಮುಚ್ಚಿದ ಕೆಂಡದಂತಹ ವಾತಾವರಣ

ಗ್ರಾಮದಲ್ಲಿ ಬೂದಿ ಮುಚ್ಚಿದ ಕೆಂಡದಂತಹ ವಾತಾವರಣ ಸೃಷ್ಟಿಯಾಗಿದ್ದು ಇಡೀ ಊರೇ ಬಿಕೋ ಎನ್ನುತ್ತಿದೆ. ಗ್ರಾಮದಲ್ಲಿ ಕೆಲವು ಮನೆಗಳಲ್ಲಿ ಪುರುಷರಿದ್ದಾರೆ. ಮಕ್ಕಳು, ವೃದ್ಧರಾದಿಯಾಗಿ ಎಲ್ಲರೂ ಪೊಲೀಸರ ಭಯದಿಂದ ಊರು ಬಿಟ್ಟು ಹೊಲಗಳಲ್ಲಿ ಬೀಡು ಬಿಟ್ಟಿದ್ದಾರೆ.

ರೈತರನ್ನು ಬಳ್ಳಾರಿ ಜೈಲಿಗೆ ರವಾನಿಸಲಾಗಿದೆ

ರೈತರನ್ನು ಬಳ್ಳಾರಿ ಜೈಲಿಗೆ ರವಾನಿಸಲಾಗಿದೆ

ಮಳೆ ಬಂದು ಹೊಲದಲ್ಲಿ ಕೆಲಸ ಮಾಡಬೇಕಾದ ರೈತರು ಬಂಧನ ಭೀತಿಯಿಂದ ತಲೆ ಮರೆಸಿಕೊಂಡಿದ್ದಾರೆ. ಕೆಲವರು ಹೋದವರು ಇದುವರೆಗೂ ಮನೆಗೆ ಬಂದಿಲ್ಲ ಎಂದು ಗ್ರಾಮದ ಮಹಿಳೆಯರು ಆರೋಪಿಸಿದ್ದಾರೆ. ಬಂಧಿತ ರೈತರನ್ನು ಬಳ್ಳಾರಿ ಜೈಲಿಗೆ ರವಾನಿಸಲಾಗಿದೆ.

ಕಮಲಪಂತ್ ನೇತೃತ್ವದಲ್ಲಿ ತನಿಖೆ

ಕಮಲಪಂತ್ ನೇತೃತ್ವದಲ್ಲಿ ತನಿಖೆ

ಗೃಹ ಸಚಿವ ಪಿ.ಪರಮೇಶ್ವರ ಅವರು ಡಿವೈಎಸ್ಪಿ ನೆಹರು ಓಲೇಕಾರ ಅವರನ್ನು ವರ್ಗಾಯಿಸಿ, ಪೊಲೀಸ್ ಇನ್ಸಪೆಕ್ಟರ್ ಶಿವಯೋಗಿ ಲೋಹಾರ ಅವರಿಗೆ ಅಮಾನತು ಶಿಕ್ಷೆ ನೀಡಿದ್ದಾರೆ.

ಎಡಿಜಿಪಿ ಕಮಲಪಂತ್ ನೇತೃತ್ವದಲ್ಲಿ ತನಿಖೆ ನಡೆಸಲು ಗೃಹ ಸಚಿವರು ಆದೇಶಿಸಿ ಒಂದು ವಾರದಲ್ಲಿ ವರದಿ ನೀಡಲು ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
JDS state president, former CM HD Kumaraswamy condemned police atrocity at Yamanur in Dharwad district and said JDS will protest against state government from August 4. MLC Basavaraj Horatti visited the village and had talk with the victims
Please Wait while comments are loading...