ಹುಬ್ಬಳ್ಳಿಯ 3 ವರ್ಷದ ಪುಟಾಣಿಯಿಂದ 'ಇಂಡಿಯಾ ಬುಕ್ ಆಫ್ ರೆಕಾರ್ಡ್'

ಧಾರವಾಡ, ಮೇ 11: ವಿದ್ಯಾಕಾಶಿ ಎಂದೇ ಖ್ಯಾತಿ ಪಡೆದ ಧಾರವಾಡದ ಮಲ್ಟಿ ಟ್ಯಾಲೆಂಟೆಡ್ ಪುಟಾಣಿ ಅನೋಶ್ ಎಂಬ ಬಾಲಕನಿಗೆ ಐಬಿಆರ್ ಕಿರೀಟ ದೊರೆತಿದೆ. ಆಡುವ ವಯಸ್ಸಲ್ಲೇ 'ಇಂಡಿಯಾ ಬುಕ್ ಆಫ್ ರೆಕಾರ್ಡ್' (ಐಬಿಆರ್)ನಲ್ಲಿ ಇವರು ಸಾಧನೆ ಮಾಡಿ ಸೈ ಎನಿಸಿಕೊಂಡಿದ್ದಾರೆ.

ಮೂರು ವರ್ಷ ಅನೋಶ್ ರೋಹಿತ್ ಸ್ವಾಮಿ ಎಂಬ ಪುಟಾಣಿಯು ರೋಹಿತ್ ಸ್ವಾಮಿ ಹಾಗೂ ಮರ್ಲಿನ್ ರೋಹಿತ್ ಸ್ವಾಮಿ ದಂಪತಿಗಳ ಮಗ. ಇವರು ಮೂಲತಃ ದಾಂಡೇಲಿ ನಿವಾಸಿಗಳಾಗಿದ್ದು, ರೋಹಿತ್, ಮರ್ಲಿನ್ ಹುಬ್ಬಳ್ಳಿಯ ವಿದ್ಯಾನಗರದ ನೆಲೆಸಿದ್ದಾರೆ.

Hubballi 3 year Old Child Anoosh Made India Book of Records

ರೋಹಿತ್, ಮರ್ಲಿನ್ ದಂಪತಿಯು ತಮ್ಮ ಮಗ 2 ವರ್ಷ ವಯಸ್ಸಿನಿಂದಲೇ ಅನೋಶ್ ತರಬೇತಿ ಆರಂಭಸಿದ್ದಾರೆ. ಅನೋಶ್ ತಾಯಿ ಅವರು ಸತತ ತರಬೇತಿಯಿಂದ ಹಲವು ವಿಷಯಗಳ ಬಗ್ಗೆ ಅನೋಶ್ ಜ್ಞಾನ ಹೊಂದುವತಾಯಿತು.

ಐಬಿಆರ್‌ಗೆ ಅನೋಷ್ ವಿಡಿಯೋ ಮೇಲ್

ಮನೆಯಲ್ಲೇ ತಾಯಿಯಿಂದ ತರಬೇತಿ ಜತೆಗೆ ಸಾಧನೆಗೆ ಹೆಚ್ಚಿನ ಪ್ರೋತ್ಸಾಹ ಸಹ ಸಿಕ್ಕಿದೆ. ಮನೆಯಲ್ಲಿ ಅನೋಶ್ ನ ಪ್ರತಿಭೆಯನ್ನು ದಂಪತಿಗಳು ವಿಡಿಯೋ ಮಾಡಿಟ್ಟಿದ್ದಾರೆ. ಈ ಎಲ್ಲ ವಿಡಿಯೋಗಳನ್ನು 'ಇಂಡಿಯಾ ಬುಕ್ ಆಫ್ ರೆಕಾರ್ಡ್' (ಐಬಿಆರ್) ನ ಮೇಲ್ ಐಡಿ ಗೆ ವಿಡಿಯೋಗಳನ್ನು ಪಾಲಕರು ಕಳುಹಿಸಿದ್ದರು.

ವಿಡಿಯೋಗಳನ್ನು ಪರಿಶೀಲಿಸಿದ ಸಂಬಂಧಿಸಿದ ಅಧಿಕಾರಿಗಳ ಅನೋಶ್ ಪುಟಾಣಿಗೆ 'ಐಬಿಆರ್ ಕಿರೀಟ' ತೊಡಿಸಿದ್ದಾರೆ. ಹಲವು ವಿಷಯಗಳ ಕುರಿತು ಅಪಾರ ಪ್ರತಿಭೆ, ಜ್ಞಾನ ಹೊಂದಿರುವ ಕಾರಣ ಈ ಐಬಿಆರ್ ನಲ್ಲಿ ಬಾಲಕ ಸಾಧನೆ ಮಾಡಿದ್ದಾರೆ.

Hubballi 3 year Old Child Anoosh Made India Book of Records

ಪಟಪಟ ಎಂದು ಉತ್ತರಿಸುವ ಅನೋಶ್

ಅನೋಶ್ ಇಷ್ಟು ಚಿಕ್ಕವಯಸ್ಸಿನಲ್ಲಿಯೇ, ಭಾರತದ ಪ್ರಧಾನ ಮಂತ್ರಿ ಹೆಸರು, ಪ್ರಾಸಗಳು, ಪ್ರಾರ್ಥನೆ, ವಾರಗಳು, ರಾಷ್ಟ್ರೀಯ ಚಿಹ್ನೆಗಳನ್ನು ಬಗ್ಗೆ ಮಾತನಾಡುತ್ತಾರೆ. ಕೇಳಿದ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ. ಇಂದ್ರಿಯ ಅಂಗಗಳು, ಸಂಚಾರಿ ಸೂಚನೆಗಳು, ಹಣ್ಣುಗಳ ಹೆಸರು, ವಿರುದ್ದಾರ್ಥಕ ಪದ, ಬೆರೆಳೆಣಿಕೆ, 14 ಪ್ರಾಣಿಗಳ 10 ಪಕ್ಷಿಗಳ ಹೆಸರು ಗುರುತಿಸುತ್ತಾರೆ.

ಇಷ್ಟೇ ಅಲ್ಲದೇ 8 ವೃತ್ತಿಪರಗಳನ್ನು ಗುರುತಿಸುವೇಕೆ ಸೇರಿ ಹಲವು ವಿಷಯಗಳ ಬಗ್ಗೆ ಜ್ಞಾನ ಹೊಂದಿರುವ ಅನೋಶ್ ಅವರ ಸಾಧನೆ ಕಂಡು ಅವರ ತಂದೆ-ತಾಯಿ ಹಾಗೂ ಕುಟುಂಬಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ. ಭವಿಷ್ಯದಲ್ಲಿ ಮಗ ಇಷ್ಟಪಟ್ಟಿದ್ದನ್ನು ಕಳಿಸಲು, ಇಷ್ಟದ ವಯಲದಲ್ಲಿ ಬೆಳೆಸಲು ಸಿದ್ಧರಿಸಿದ್ದಾರೆ. ಇನ್ನಷ್ಟ ವಿಶೇಷ ವಿಷಯಗಳ ಕುರಿತು ಮಗುವಿಗೆ ನಿರಂತರ ಜ್ಞಾನ ತರಬೇತಿ ನೀಡಲಾಗುವುದು ಎಂದು ಪೋಷಕರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+