Dahrwad Pedha: ಬಾಯಲ್ಲಿ ಇಟ್ಟರೆ ಕರಗುವ ಧಾರವಾಡ ಪೇಡಾ ಹುಟ್ಟಿದ್ದು ಹೇಗೆ ಗೊತ್ತಾ? ಇದರ ಹಿಂದಿದೆ ನೋವಿನ ಕಥೆ

Dahrwad Pedha: ಧಾರವಾಡ ಪೇಡಾ ಅಂದರೆ ಯಾರಿಗೆ ಇಷ್ಟ ಇರಲ್ಲ ಹೇಳಿ. ಇದನ್ನು ಬೇರೆ ಊರು, ರಾಜ್ಯ, ವಿದೇಶಗಳಿಂದಲೂ ಆರ್ಡರ್‌ ಮಾಡಿ ತರಿಸಿಕೊಳ್ಳುವಷ್ಟರ ಮಟ್ಟಿಗೆ ಪ್ರಸಿದ್ಧಿ ಪಡೆದಿದೆ. ಹಾಗಾದರೆ ಈ ಪೇಡಾ ಆರಂಭಕ್ಕೆ ಪ್ರಮುಖ ಕಾರಣ ಏನು ಎನ್ನುವ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ ಗಮನಿಸಿ.

ಧಾರವಾಡ ಪೇಡ ಭಾರತದ ವಿಶಿಷ್ಟವಾದ ಸಿಹಿತಿಂಡಿಗಳಲ್ಲೊಂದಾಗಿದೆ. ಈ ಸಿಹಿತಿಂಡಿಯ ಇತಿಹಾಸವು ಸುಮಾರು 175 ವರ್ಷಗಳಷ್ಟು ಹಳೆಯದಾಗಿದೆ. ಇನ್ನು ಈ ಧಾರವಾಡ ಪೇಡಾ ಆರಂಭಕ್ಕೆ ಪ್ಲೇಗ್‌ ರೋಗ ಆಗಿದೆಯಂತೆ. ಇದು ಹೇಗೆ ಅಂತೀರಾ? ಇಲ್ಲಿದೆ ನೋಡಿ ಮಾಹಿತಿ.

How did Dharwad Pedha get world famous -Know details

19ನೇ ಶತಮಾನ ಅಂದರೆ 1896-1897ರ ವೇಳೆ ಪ್ಲೇಗ್‌ ಖಾಯಿಲೆ ಉತ್ತರ ಪ್ರದೇಶ ಜನರನ್ನು ಬಿಟ್ಟುಬಿಡದೇ ಕಾಡಿತ್ತು. ಈ ಖಾಯಿಲೆಯಿಂದ ತಪ್ಪಿಸಿಕೊಳ್ಳಲು ಉತ್ತರ ಪ್ರದೇಶದ ಬಹುತೇಕ ಮಂದಿ ಜೀವನ ಉಳಿಸಿಕೊಳ್ಳಲು ಬೇರೆ ರಾಜ್ಯಗಳಿಗೆ ಪಲಾಯನ ಮಾಡಿದ್ದರು. ಈ ಪೈಕಿ ರಾಮ್‌ ರತನ್ ಸಿಂಗ್ ಠಾಕೂರ್ ಎಂಬ ವ್ಯಕ್ತಿಯ ಕುಟುಂಬ ಮಾತ್ರ ಧಾರವಾಡಕ್ಕೆ ಆಗಮಿಸಿದ್ದು, ಬಳಿಕ ಈ ಕುಟುಂಬ ಜೀವನಕ್ಕಾಗಿ ಏನಾದರೂ ಮಡಲೇಬೇಕು ಎಂದು ಪಣತೊಟ್ಟು ನಿಂತಿತ್ತು. ಆಗ ಇವರ ಮನಸ್ಸಲ್ಲಿ ಒಳೆದಿದ್ದೇ ಸಿಹಿತಿಂಡಿ ತಯಾರಿಸಿ ಮಾರಾಟ ಮಾಡುವುದು.

ಆಗ ರಾಮ್‌ ರತನ್ ಸಿಂಗ್ ಠಾಕೂರ್ ಹಾಲು ಮತ್ತು ಸಕ್ಕರೆಯನ್ನು ಬಳಸಿ ಸ್ವಂತ ರೆಸಿಪಿಯನ್ನು ಕಂಡುಹಿಡಿದು ಇದಕ್ಕೆ ಪೇಡಾ ಅಂತಾ ಹೆಸರಿಡುತ್ತಾರೆ. ಮಾರಾಟಕ್ಕೆ ಇಟ್ಟ ಕೆಲವೇ ದಿನಗಳಲ್ಲಿ ಈ ಸಿಹಿತಿಂಡಿ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುವುದಲ್ಲದೆ, ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತದೆ. ಹೀಗೆ ಠಾಕೂರ್‌ ಕುಟುಂಬ ತಯಾರಿಸಿದ ಈ ಪೇಡಾಕ್ಕೆ ದಿನೇ ದಿನೇ ಬೇಡಿಕೆ ಹೆಚ್ಚಾಗುತ್ತಾ ಹೋಗುತ್ತದೆ.

ಆಗ ಏನಿಲ್ಲ ಅಂದರೂ ಪ್ರತಿದಿನವೂ 700ರಿಂದ-800 ಕೆ.ಜಿ ಪೇಡಾವನ್ನು ತಯಾರಿ ಮಾಡಬೇಕಾಗುತ್ತದೆ. ಆಗಿನಿಂದ ಈ ಸಿಹಿತಿಂಡಿ ಧಾರವಾಡ ಪೇಡಾ ಅಂತಲೇ ವಿಶ್ವಮಟ್ಟದಲ್ಲಿ ಪ್ರಸಿದ್ಧಿ ಪಡೆಯುತ್ತಾ ಹೋಗುತ್ತದೆ. ಈ ಮೂಲಕ ಪ್ಲೇಗ್‌ ರೋಗ ಧಾರವಾಡ ಪೇಡಾ ಹುಟ್ಟಿಗೆ ಕಾರಣ ಆಯ್ತು ಅಂದರೆ ತಪ್ಪಾಗಲಾರದು.

ಈಗಲೂ ಕೂಡ ಧಾರವಾಡ ಪೇಡಾ ಅಂದರೆ ಸಾಕು ಎಂಥವರ ಬಾಯಲು ನಿರು ತರಿಸುತ್ತದೆ. ಸಾಮಾನ್ಯವಾಗಿ ಬೇರೆ ಊರಿನಿಂದ ಧಾರವಾಡದ ಕಡೆಗೆ ಪ್ರಯಾಣ ಬೆಳೆಸಿದರೆ, ಅವರ ಮನೆಯವರು, ಸ್ನೇಹಿತರು ಹೇಳುವುದು ಒಂದೇ, ಅದೇನೆಂದರೆ ನೀನು ಧಾರವಾಡಕ್ಕೇ ಹೋಗಿ ಏನ್‌ ಮಾಡ್ತಿಯೋ ಗೊತ್ತಿಲ್ಲ, ನಮಗೆ ಮಾತ್ರ ಅಲ್ಲಿನ ಪೇಡಾ ತರುವುದನ್ನು ಮರೆಯಬೇಡ ಅಂತಾ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+