ಬಿರುಕಿದೆ ಎಂದು ಕಟ್ಟಡದೊಳಗೆ ಪಿಲ್ಲರ್ ನಿರ್ಮಿಸಿದ್ದೇ ದುರಂತಕ್ಕೆ ಕಾರಣವಾಯ್ತಾ?

ಧಾರವಾಡ, ಮಾರ್ಚ್ 21: ಧಾರವಾಡದಲ್ಲಿ ನಿರ್ಮಾಣ ಹಂತದಲ್ಲಿದ್ದ ಐದು ಅಂತಸ್ತಿನ ಕಟ್ಟಡ ಕುಸಿದು ಈಗಾಗಲೇ 10 ಮಂದಿಯ ಬಲಿ ಪಡೆದಿದೆ. ಹಾಗಾದರೆ ಈ ದುರಂತಕ್ಕೆ ಕಾರಣವೇನು ಎಂಬುದನ್ನು ಗಮನಿಸಬೇಕಿದೆ.

ಏಕಾ ಏಕಿ 5 ಅಂತಸ್ತಿನ ಕಟ್ಟಡ ಹಾಗೆಯೇ ಕುಸಿಯುತ್ತದೆ ಎಂದರೆ ಆಶ್ಚರ್ಯವಾಗುವುದು ಹೌದು, ಈ ಮೊದಲೇ ತಿಳಿಸಿದಂತೆ ಒಂದು ಕಳಪೆ ಕಾಮಗಾರಿ ಮತ್ತೊಂದು ಕಟ್ಟಡದಲ್ಲಿ ಬಿರುಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪಿಲ್ಲರ್ ನಿರ್ಮಾಣ ಮಾಡಿದ್ದೇ ಈ ಅವಘಡಕ್ಕೆ ಕಾರಣವಾಯಿತು ಎನ್ನುವುದು ಸ್ಥಳೀಯರ ಅಭಿಪ್ರಾಯವಾಗಿದೆ.

ಕಟ್ಟಡ ಬಿದ್ದ ಬಳಿಕ ಅಲ್ಲಿದ್ದ ಸ್ಥಳೀಯರು ಮೊದಲು ಹೇಳಿದ್ದೇ ಇದು ಯಾವತ್ತೋ ಬಿದ್ದು ಹೋಗುತ್ತೆ ಅಂತ ಅಂದುಕೊಂಡಿದ್ವಿ, ಅನುಮತಿ ತೆಗೆದುಕೊಂಡಿದ್ದೇ ಒಂದು ಇವರು ನಿರ್ಮಿಸಿದ್ದೇ ಇನ್ನೊಂದು, ಕಟ್ಟಡದೊಳಗೆ ಪಿಲ್ಲರ್ ನಿರ್ಮಾಣ ಮಾಡಿದ್ದೇ ಈ ಅನಾಹುತಗಳಿಗೆ ಕಾರಣವಾಗಿದೆ ಎಂದು ದೂರಿದ್ದಾರೆ.

Here is the reason behind Dharwad building collapse

ಈ ಕಟ್ಟಡವನ್ನು ನಿರ್ಮಿಸುವಾಗ ಪಿಲ್ಲರ್​ಗಳನ್ನು ಸದೃಢವಾಗಿ ಹಾಕಿರಲಿಲ್ಲ. ಪಿಲ್ಲರ್​ಗಳ ಸಾಮರ್ಥ್ಯ ಕಡಿಮೆ ಇದ್ದ ಕಾರಣ ಕಟ್ಟಡ ಕುಸಿಯುವ ಒಂದು ವಾರ ಹಿಂದಿನಿಂದ ಪಿಲ್ಲರ್​ ಸುತ್ತ ಗುಂಡಿ ತೆಗೆದು ಪಿಲ್ಲರ್​ಗೆ ಹೆಚ್ಚುವರಿ ಸ್ಟೀಲ್​ ಜೋಡಿಸಿ ಅದರ ಸಾಮರ್ಥ್ಯ ಹೆಚ್ಚಿಸುವ ಕಾಮಗಾರಿ ನಡೆಯುತ್ತಿತ್ತು. ಈ ಕಾಮಗಾರಿ ನಡೆಯುತ್ತಿದ್ದ ಸಂದರ್ಭದಲ್ಲೆ ಕಟ್ಟಡ ಕುಸಿದು ಬಿದ್ದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+