ಧಾರವಾಡ ಡಿವೈಎಸ್ ಪಿ ಶ್ರವಣ ಗಾಂವಕರ್ ನಿಧನ
ಧಾರವಾಡ, ಆಗಸ್ಟ್ 28: ಧಾರವಾಡ ಜಿಲ್ಲೆಯ ಡಿಸಿಆರ್ ಬಿಯ ಡಿವೈಎಸ್ಪಿ ಆಗಿದ್ದ ಶ್ರವಣ ಗಾಂವಕರ್ (42) ಮಂಗಳವಾರ ಬೆಳಗಿನ ಜಾವ ನಿಧನ ಹೊಂದಿದ್ದಾರೆ.
ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು. ತಕ್ಷಣ ಅವರನ್ನು ಆಸ್ಪತ್ರೆ ಗೆ ಕರೆದುಕೊಂಡು ಹೋಗಲಾಯಿತು ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ಅವರು ಪತ್ನಿ ಹಾಗೂ ಇಬ್ಬರು ಚಿಕ್ಕ ಮಕ್ಕಳನ್ನು ಅಗಲಿದ್ದಾರೆ. ಅವರ ಅಕಾಲಿಕ ನಿಧನಕ್ಕೆ ಜಿಲ್ಲೆಯ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಕಂಬನಿ ಮಿಡಿದಿದ್ದಾರೆ.












Click it and Unblock the Notifications