Get Updates
Get notified of breaking news, exclusive insights, and must-see stories!

Monsoon: ಧಾರವಾಡ ಜಿಲ್ಲೆಗೆ ಮೂರು ದಿನ ಗುಡುಗು ಸಹಿತ ಭಾರೀ ಮಳೆ ಸಂಭವ: ಹವಾಮಾನ ಮುನ್ಸೂಚನೆ

ಧಾರವಾಡ, ಮೇ 21: ವಿದ್ಯಾಕಾಶಿ ಧಾರವಾಡ ಜಿಲ್ಲೆಯ ವ್ಯಾಪ್ತಿಯಲ್ಲಿ ಕಳೆದ ಕೆಲವು ದಿನಗಳಿಂದ ಮಳೆ ಆಗುತ್ತಿದೆ. ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ಹವಾಮಾನದಲ್ಲಿನ ಬದಲಾವಣೆಗಳಿಂದ ಮುಂದಿನ ಕೆಲವು ದಿನಗಳ ಕಾಲ ಜೋರು ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಹುಬ್ಬಳ್ಳಿ, ಕಲಘಟಗಿ ಸೇರಿದಂತೆ ಧಾರವಾಡ ಜಿಲ್ಲೆ ವ್ಯಾಪ್ತಿಯಲ್ಲಿ ಕಳೆದೊಂದು ವಾರದಿಂದ ಉತ್ತಮ ಮಳೆ ಆಗುತ್ತಿದೆ. ಬಿಸಿಲಿನಿಂದ ರೋಸಿ ಹೋಗಿದ್ದ ಜನರಿಗೆ ಮಳೆರಾಯ ಆಗಾಗ ತಂಪೆರೆಯುತ್ತಿದ್ದಾನೆ. ಇದೀಗ ಮುಂದಿನ ಮೇ 24ರವರೆಗೂ ಇದೇ ರೀತಿಯ ಮಳೆ, ತಂಪು ವಾತಾವರಣ ಮುಂದುವರಿಯಲಿದೆ ಹವಾಮಾನ ಇಲಾಖೆ ತಿಳಿಸಿದೆ.

Dharwad Will Be Receive Heavy Rain with Thunderstorm in Next 4 days Check Forecast

ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮಳೆಯ ವಾತಾವರಣ ಉಂಟಾಗುತ್ತಿದ್ದಂತೆ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲೂ ಮಳೆ ಆವರಿಸಿಕೊಂಡಿದೆ. ಇದಕ್ಕೆ ಅರಬ್ಬಿ ಸಮುದ್ರದಲ್ಲಿ ಉಂಟಾದ ವೈಪರಿತ್ಯಗಳ ಪ್ರಭಾವ, ಏರಿಳಿತ ಕಾರಣ ಎಂದು ತಜ್ಞರು ಹೇಳಿದ್ದಾರೆ.

ಎರಡು ವಾರದಿಂದ ಜಿಲ್ಲೆಯಲ್ಲಿ ತಂಪು ವಾತಾವರಣ

ಧಾರವಾಡದಲ್ಲಿ ವ್ಯಾಪ್ತಿಯಲ್ಲಿ ಇತ್ತೀಚೆಗೆ ಬಿರುಗಾಳಿ, ಗುಡುಗು ಮಿಂಚು ಸಹಿತ ಭಾರಿ ಮಳೆ ಆರ್ಭಟಿಸಿತ್ತು. ತಗ್ಗು ಪ್ರದೇಶಗಳಲ್ಲಿ ನೀರು ನಿಂತು ಜನ ಜೀವನ ಅಸ್ತವ್ಯಸ್ತವಾಗಿತ್ತು. ಬಿರುಗಾಳಿಯ ರಭಸಕ್ಕೆ ಮನೆಯ ತಗಡು, ಮೇಲ್ಛಾವಣಿ ಹಾರಿ ಹೋಗಿದ್ದವು. ಮರಗಳು, ಕೊಂಬೆಗಳು ಮುರಿದು ಬಿದ್ದಿವೆ.

ಅಲ್ಲದೇ ಕೈಗೆ ಬಂದ ಮಾವು ಬೆಳಗೆ, ಬಾಳೆ ಸೇರಿದಂತೆ ಕೆಲವು ತೋಟಗಾರಿಕೆ ಬೆಳೆಗೆ ಹಾನಿ ಉಂಟು ಮಾಡಿತ್ತು. ಇದರಿಂದ ರೈತರಿಗೆ ಆರ್ಥಿಕ ನಷ್ಟ ಉಂಟಾಗಿತ್ತು. ಅದಾದ ನಂತರ ದಿನಗಳಲ್ಲಿ ಹಗುರವಾಗಿ, ಕೆಲವೆಡೆ ಸಾಧಾರಣ, ವ್ಯಾಪಕ ಮಳೆ ಆಗುತ್ತಿದೆ. ವಾತಾವರಣ ತಂಪಿನಿಂದ ಕೂಡಿದೆ.

Dharwad Will Be Receive Heavy Rain with Thunderstorm in Next 4 days Check Forecast

ಹುಬ್ಬಳ್ಳಿಯಲ್ಲೂ ಕೆಲವೇ ನಿಮಿಷಗಳ ವರೆಗೆ ಸುರಿದ ಮಳೆಗೆ ರಸ್ತೆಗಳ ಮೇಲೆ ಕೊಚ್ಚೆ ಬಂದು ನಿಂತಿತ್ತು. ಮಳೆ ನೀರು ಸುಸೂತ್ರವಾಗಿ ಹರಿಯಲು ಆಗದ ಸ್ಥಿತಿ ನಗರದಲ್ಲಿದೆ. ವಾಹನ ಸಂಚಾರಕ್ಕೆ ಸಾಕಷ್ಟು ತೊಂದರೆ ಆಯಿತು.

ಮುಂದಿನ ಮೂರು ದಿನ ಭಾರಿ ಮಳೆ

ಹುಬ್ಬಳ್ಳಿ, ಕಲಘಟಗಿ, ನಲಗುಂದ, ಕುಂದಗೋಳ ತಾಲೂಕುಗಳ ವ್ಯಾಪ್ತಿಯಲ್ಲಿ ತಡಸ, ಸಂಶಿ, ವರೂರು, ವ್ಯಾಪ್ತಿಯಲ್ಲಿ ಭಾರೀ ಮಳೆ ಆಗಲಿದೆ. ಮೇ 24ರವರೆಗೆ ಗುಡುಗು ಸಹಿತ ಮಳೆ ಅಬ್ಬರ ಕಂಡು ಬರಲಿದೆ. ತಾಪಮಾನ ಸದ್ಯದ ಯಥಾ ಸ್ಥಿತಿಯಲ್ಲಿಯೇ ಮುಂದುವರಿಯಲಿದೆ.

ಮತ್ತೊಂದೆಡೆ ಮಳೆಯಿಂದಾಗಿ ಉಂಟಾಗುವ ಹಾನಿ ತಡೆಗೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅಗತ್ಯ ಕ್ರಮ ಕೈಗೊಳ್ಳಬೇಕು. ಜನರಿಗೆ ತೊಂದರೆ ಆದಾಗ ತ್ವರಿತವಾಗಿ ಸ್ಪಂದಿಸಬೇಕು. ವಿಪತ್ತು ನಿರ್ವಹಣಾ ಅಧಿಕಾರಿಗಳ ಜತೆ ನಿರಂತರ ಸಂಪರ್ಕದಲ್ಲಿರಬೇಕು. ಮಳೆ ಬರುವಾಗ ಕೆರೆ, ಕಟ್ಟೆಗಳ ಬಳಿ ಹೋಗದಂತೆ ಜನರಿಗೆ ಅರಿವು ಮೂಡಿಸುವುದ ಸೇರಿದಂತೆ ಹಲವು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+