Dharwad CBT: ನಿಲ್ದಾಣದಲ್ಲಿ ಸಂಚಾರ ಸ್ಥಗಿತ, ಬಸ್ ಸ್ಥಳಾಂತರದ ಮಹತ್ವದ ಮಾಹಿತಿ
ಧಾರವಾಡ, ಫೆಬ್ರವರಿ 11: ವಿದ್ಯಾಕಾಶಿ ಧಾರವಾಡ ನಗರವು ಇತರ ನಗರಗಳಂತೆ ಬೆಳವಣಿಗೆ ಹೊಂದುತ್ತಿದ್ದು, ಜನ ಸಂಖ್ಯೆ ಹೆಚ್ಚಾಗುತ್ತಿದೆ. ಅಗತ್ಯಕ್ಕೆ ತಕ್ಕಂತೆ ಇಲ್ಲಿನ ನಗರ ಸಾರಿಗೆ ಬಸ್ ನಿಲ್ದಾಣ ನಿರ್ಮಾಣದ ಕಾಮಗಾರಿ ನಡೆಯುವ ಪ್ರಯುಕ್ತ ಕೆಲವು ಬದಲಾವಣೆಗಳು ಆಗುತ್ತಿವೆ ಎಂದು ಸಾರಿಗೆ ಅಧಿಕಾರಿಗಳು ತಿಳಿಸಿದೆ.
ಬಸ್ ನಿಲ್ದಾಣ ನಿರ್ಮಾಣ ಪ್ರಯುಕ್ತ ಪ್ರಯುಕ್ತ ಫೆಬ್ರವರಿ 14ರಂದು ಬುಧವಾರ ದಿಂದ ಸಿಬಿಟಿ ಯಿಂದ ಸಂಚರಿಸುವ ನಗರ ಸಾರಿಗೆ ಬಸ್ಸುಗಳನ್ನು ತಾತ್ಕಾಲಿಕವಾಗಿ ಎಲ್.ಇ.ಎ. ಕ್ಯಾಂಟೀನ್ ಹಾಗೂ ಕಿಟೆಲ್ ಕಾಲೇಜು ಹಿಂಭಾಗಕ್ಕೆ ಸ್ಥಳಾಂತರಿಸಲಾಗುತ್ತದೆ. ಈ ಬದಲಾವಣೆ ಗಮನಿಸುವಂತೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ-ಧಾರವಾಡ ನಗರ ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಮಾಹಿತಿ ನೀಡಿದ್ದಾರೆ.

ಧಾರವಾಡ ನಗರ ಸಾರಿಗೆ ವ್ಯವಸ್ಥೆಯನ್ನು ಮತ್ತಷ್ಟು ಉತ್ತಮ ಪಡಿಸಲು ನಿರ್ಧರಿಸಿದ್ದು, ಈಗಾಗಲೇ ಸಚಿವರು ಕಾಮಗಾರಿಗೆ ಚಾಲನೆ ಕೊಟ್ಟಿದೆ. ಈ ನಿಟ್ಟಿನಲ್ಲಿ ಈಗ ಇರುವ ಸಿಬಿಟಿ ಸ್ಥಳದಲ್ಲಿ ಸುಸಜ್ಜಿತ ನೂತನ ನಗರ ಸಾರಿಗೆ ಬಸ್ ನಿಲ್ದಾಣ ನಿರ್ಮಾಣದ ಕಾಮಗಾರಿ ಆರಂಭಿಸಲಾಗುತ್ತಿದೆ.
ಸಿಬಿಟಿಯಲ್ಲಿ ಬಸ್ ಸಂಚಾರ ಸ್ಥಗಿತ
ಈ ಸಂಬಂಧ ಸಿಬಿಟಿಯನ್ನು ತೆರವುಗೊಳಿಸಬೇಕಾಗಿರುತ್ತದೆ. ಆದ್ದರಿಂದ ಸಿಬಿಟಿಯಿಂದ ಬಸ್ಸುಗಳ ಸಂಚಾರವನ್ನು ಫೆಬ್ರವರಿ 14, ಬುಧವಾರದಿಂದ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುವುದು ಎಂದು ನಿಗಮದ ಧಾರವಾಡ ಘಟಕ ಅಧಿಕಾರಿಗಳು ತಿಳಿಸಿದ್ದಾರೆ.
ಈಗಾಗಲೇ ಸಾರಿಗೆ ಸಂಸ್ಥೆ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಜಂಟಿ ಸ್ಥಳ ಸಮೀಕ್ಷೆ ಮಾಡಿ ತಾತ್ಕಾಲಿಕ ಸ್ಥಳಗಳನ್ನು ಗುರುತಿಸಿದ್ದಾರೆ. ಅದರಂತೆ ಪ್ರಸ್ತುತ ಸಿಬಿಟಿ ಯಿಂದ ಸಂಚರಿಸುವ ಬಸ್ಸುಗಳನ್ನು ಫೆಬ್ರವರಿ 14ರಿಂದ ತಾತ್ಕಾಲಿಕವಾಗಿ ಹಾಲಿ ಸ್ಥಳದಿಂದ ಬೇರೆಡೆಗೆ ಸ್ಥಳಾಂತರಿಸುತ್ತಿದ್ದಾರೆ. ಇನ್ನುಮುಂದೆ ಆ ಎಲ್ಲ ಬಸ್‌ಗಳು ಅಲ್ಲಿಂದಲೇ ಸೇವೆ ನೀಡಲಿವೆ.
LEA ಕ್ಯಾಂಟೀನ್ ನಿಂದ ಹೊರಡುವ ಬಸ್ ವಿವರ
ಈ ಮೊದಲು ಸಿಬಿಟಿಯಿಂದ ಹೊರಡುತ್ತಿದ್ದ ಬಸ್‌ಗಳು ಇನ್ಮುಂದೆ ಎಲ್‌ಇಎ ಕ್ಯಾಂಟಿನ್‌ನಿದ ಹೊರಡುವೆ. ಎತ್ತಿನ ಗುಡ್ಡ, ಕೃಷಿ ವಿಶ್ವವಿದ್ಯಾಲಯ, ಪಾವಟೆ ನಗರ, ಬನಶ್ರೀನಗರ, ನ್ಯೂ ಬಾಯ್ಸ್ ಹಾಸ್ಟೆಲ್, ಚೈತನ್ಯ ನಗರ, ವಿನಾಯಕ ನಗರ, ಸಾಯಿ ನಗರ, ಶಿವಗಿರಿ ಸಂಪಿಗೆ ನಗರ, ಕೆಂಗೇರಿ ಆಂಜನೇಯ ನಗರ, ಗುರುನಗರ, ರಾಧಾಕೃಷ್ಣ ನಗರ, ಜೆ.ಎಸ್.ಎಸ್. ಸ್ಕೂಲ್, ಬೇಂದ್ರೆ ನಗರ, ಹೈಕೋರ್ಟ್, ಕಾಯಕ ನಗರ, ಶಿರಡಿ ನಗರ ಹಾಗೂ ಐ.ಐ.ಟಿಗೆ ಇಲ್ಲಿಂದೆ ಹೊರಡಲಿವೆ. ಪ್ರಯಾಣಿಕರು ಇದನ್ನು ಗಮನಿಸಿ ತೆರಳಬೇಕಿದೆ.

ಕಿಟೆಲ್ ಕಾಲೇಜು ಹಿಂದಿಂದ ಹೊರಡುವ ಬಸ್ ವಿವರ
ಸಿಬಿಟಿಯಿಂದ ಹೊರಡುತ್ತಿದ್ದ ಬಸ್‌ಗಳು ಇದೀಗ ಕಿಟೆಲ್ ಕಾಲೇಜು ಹಿಂಭಾಗದಿಂದ ಹೊರಡಲಿವೆ. ಇಲ್ಲಿ ಧಾರವಾಡ ರೈಲು ನಿಲ್ದಾಣ, ಜೋಗ ಯಲ್ಲಾಪುರ, ರಾಜೀವ ಗಾಂಧಿ ನಗರ, ಸಂಗೊಳ್ಳಿ ರಾಯಣ್ಣ ನಗರ, ಮಂಜುನಾಥ ಕಾಲೋನಿ, ತೇಜಸ್ವಿನಿ ನಗರ, ಸರಸ್ವತಿ ಪುರ, ಸೋಮೇಶ್ವರ ದೇವಸ್ಥಾನ, ಚಿನ್ಮಯ ಕಾಲೋನಿ, ಲೋಹಿಯ ನಗರ, ಶ್ರೀರಾಮನಗರ, ಕಲ್ಯಾಣನಗರ, ಹನುಮಂತ ನಗರ, ಜಾದವ ನಗರ, ಗಾಮನಗಟ್ಟಿ, ನವಲೂರು, ತಡಸಿನ ಕೊಪ್ಪ, ಉದಯಗಿರಿ, ವನಶ್ರೀನಗರ ಹಾಗೂ ಐ.ಐ.ಐ.ಟಿಗೆ ಹೊರಡಲಿವೆ.
ಮಾರ್ಗ ಬದಲಾವಣೆ ಇಲ್ಲ: ಪಾಸ್ ವ್ಯವಸ್ಥೆ ಎಲ್ಲಿ?
ಇನ್ನು ಸಿಬಿಟಿಯಿಂದ ಹೊರಡುತ್ತಿದ್ದ ಮದಿಹಾಳ, ಮಾಳಾಪುರ ಹಾಗೂ ಮೆಹಬೂಬ ನಗರ ಕಡೆಗೆ ಹೋಗುವ ಬಸ್‌ಗಳ ಸಂಚಾರ ಸ್ಥಳದಲ್ಲಿ ಬದಲಾವಣೆ ಇಲ್ಲ ಎನ್ನಲಾಗಿದೆ.
ಇನ್ನು ಮಾಸಿಕ ರಿಯಾಯಿತಿ ಪಾಸುಗಳು ನಗರ ಸಾರಿಗೆ ಹಾಗೂ ಉಪನಗರ ಸಾರಿಗೆ ಬಸ್ಸುಗಳ ಮಾಸಿಕ ರಿಯಾಯಿತಿ ಪಾಸುಗಳನ್ನು ಧಾರವಾಡ ಹಳೆ ಬಸ್ ನಿಲ್ದಾಣದಲ್ಲಿರುವ ಪಾಸ್ ವಿತರಣೆ ಕೇಂದ್ರದಿಂದ ವಿತರಣೆ ಮಾಡಲು ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರು ಸಹಕರಿಸುವಂತೆ ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್.ರಾಮನಗೌಡರ ಅವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.












Click it and Unblock the Notifications