ಧಾರವಾಡ: ಕಟ್ಟಡದ ಅಡಿ ಸಿಲುಕಿ ಸಾವನ್ನಪ್ಪಿದವರ ಸಂಖ್ಯೆ 7ಕ್ಕೆ ಏರಿಕೆ
ಧಾರವಾಡ, ಮಾರ್ಚ್ 20: ನಗರದಲ್ಲಿ ನಿನ್ನೆ ಕುಸಿದ ನಿರ್ಮಾಣದ ಹಂತದ ಬಹುಮಹಡಿ ಕಟ್ಟಡದ ಅಡಿ ಸಿಲುಕಿ ಸಾವನ್ನಪ್ಪಿದವರ ಸಂಖ್ಯೆ 7ಕ್ಕೆ ಏರಿದೆ.
ಮೃತಪಟ್ಟ ನಾಲ್ವರ ಗುರುತು ಪತ್ತೆಯಾಗಿದೆ. ಸಲೀಂ ಮಕಾಂದರ್, (35) ಹುಬ್ಬಳ್ಳಿ ಆನಂದನಗರ ನಿವಾಸಿ, ಅಶೀತ್ ಹಿರೇಮಠ (32) ಧಾರವಾಡ ಮರಾಠಾ ಕಾಲನಿ ನಿವಾಸಿ, ಮಾಬುಸಾಬ್ ರಾಯಚೂರ (48) ಹುಬ್ಬಳ್ಳಿಯ ಶಿವಶಕ್ತಿ ನಗರ ನಿವಾಸಿ, ಮೆಹಬೂಬ್ ಸಾಬ್ ದೇಸಾಯಿ (55) ಹುಬ್ಬಳ್ಳಿಯ ಆನಂದನಗರ ನಿವಾಸಿ ಎಂದು ಗುರುತಿಸಲಾಗಿದೆ.
ಕಟ್ಟಡದ ಅಡಿ ಸಿಲುಕಿದ್ದ 55 ಜನರನ್ನು ರಕ್ಷಿಸಲಾಗಿದೆ ಎಂದು ಜಿಲ್ಲಾಡಳಿತ ಹೇಳಿದೆ. ಮೃತರ ಶವಪರೀಕ್ಷೆ ನಂತರ ಸಂಬಂಧಿಗಳಿಗೆ ಹಸ್ತಾಂತರ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವವರನ್ನು ಇಂದು ಸಚಿವ ಆರ್.ವಿ.ದೇಶಪಾಂಡೆ ಅವರು ಭೇಟಿ ಆಗಿ ಆರೋಗ್ಯ ವಿಚಾರಿಸಿದರು. ಈ ಸಮಯ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಪ್ಪಿತಸ್ತರು ಯಾರೇ ಇರಲಿ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.












Click it and Unblock the Notifications