ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಬ್ಬಳ್ಳಿಯಲ್ಲಿ ಕದ್ದ ಮಗುವನ್ನು ಮಂಗಳೂರಲ್ಲಿ ಮಾರಿದ್ದರು!

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ,ಜೂನ್. 16: ನಗರದಲ್ಲಿ ಮೇ. 8 ರಂದು ಅಪಹರಣವಾಗಿದ್ದ ಮಗುವನ್ನು ಪತ್ತೆ ಹಚ್ಚಿದ ನಗರದ ಪೊಲೀಸರು ಗುರುವಾರ ಓರ್ವ ಮಹಿಳೆ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ. ಬಂಧಿತರಿಂದ 20 ಸಾವಿರ ರೂ. ನಗದು ವಶಪಡಿಸಿಕೊಂಡಿರುವ ಪೊಲೀಸರು ಮಗುವನ್ನು ಮಂಗಳೂರಿನಿಂದ ಕರೆತಂದು ಅವರ ತಂದೆ-ತಾಯಿಗೆ ಒಪ್ಪಿಸಿದ್ದಾರೆ.

ಹಳೇಹುಬ್ಬಳ್ಳಿ ಆನಂದ ನಗರದ ನಿವಾಸಿ ದಾವಲಸಾಬ ಇಮಾಮಸಾಬ ಬೆಟಗೇರಿ (60), ಹಳೇಹುಬ್ಬಳ್ಳಿ ಕೃಷ್ಣಾಪುರ ನಿವಾಸಿ ಅನ್ವರ ಅಬ್ದುಲ್ ರೌಫ್ ಬ್ಯಾಹಟ್ಟಿ (23), ದಾವಲಸಾಬ್ ಅವರ ಮನೆಯಲ್ಲಿ ಕೆಲಸಕ್ಕಿದ್ದ ಫರ್ಜಾನಾ ಅಬ್ದುಲ ಹಮೀದ್ ಬಸರಿ (28) ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.[ಬುರ್ಖಾ ಧರಿಸಿ ಬಂದವಳು ಗಂಡು ಮಗು ಹೊತ್ತೊಯ್ದಳು!]

hubballi

ಘಟನೆಯ ವಿವರ : ಮೇ. 8 ರಂದು ಹಳೇಹುಬ್ಬಳ್ಳಿ ನೂರಾನಿ ಪ್ಲಾಟ್ ನ ನಿವಾಸಿ ಸಲ್ಮಾಬಾನು ನಜೀರಸಾಬ ಕೋಳೂರು ಎಂಬವರ ಒಂದೂವರೆ ವರ್ಷದ ಅಫ್ತಾಬ್ ಎಂಬ ಗಂಡು ಮಗುವನ್ನು ಮನೆಯ ಹಾಲ್ ನಿಂದ ಅಪಹರಿಸಿದ್ದರು. [ಕಳ್ಳತನ ಬಯಲು ಮಾಡಿದ ಕಳ್ಳಿಯ ಸೆಲ್ಫಿ ಹುಚ್ಚು]

ಅಪಹರಿಸಿದ ಮಗುವನ್ನು ಆರೋಪಿಗಳು ಮಂಗಳೂರಿನ ಬಂಟ್ವಾಳ ರಸ್ತೆಯಲ್ಲಿರುವ ಮಂಚಿ ಗ್ರಾಮದಲ್ಲಿ ಇಟ್ಟಿದ್ದರು. ಅಲ್ಲಿಯ ವ್ಯಕ್ತಿಯೊಬ್ಬರಿಗೆ 70 ಸಾವಿರ ರೂ.ಗಳಿಗೆ ಮಗುವನ್ನು ಮಾರಿದ್ದ ಆರೋಪಿಗಳು ನಂತರ ಏನೂ ಗೊತ್ತಿಲ್ಲದವರಂತೆ ತಮ್ಮಷ್ಟಕ್ಕೆ ತಾವಿದ್ದರು.

English summary
Hubballi: Hubballi police traced a child kidnap case and arrested 3 people. One and half year old baby boy has been stolen from Hubballi house on May 2016.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X