ಧಾರವಾಡ: ಎಫ್‌ಎಮ್‌ಸಿಜಿ ಕ್ಲಸ್ಟರ್‌ಗೆ ಚಾಲನೆ: 17 ಕಂಪನಿಗಳಿಂದ 1,275 ಕೋಟಿ ರೂ ಬಂಡವಾಳ ಹೂಡಿಕೆ
ಧಾರವಾಡ, ಅಕ್ಟೋಬರ್ 28 : ಭಾರತ ಬಲಿಷ್ಠ ಆಗಬೇಕು, ಪ್ರಧಾನಿಗಳ ಐದು ಟ್ರಿಲಿಯನ್ ಎಕಾನಮಿ ಕನಸು ನನಸಾಗಬೇಕು. 2025ರ ವೇಳೆಗೆ ಕರ್ನಾಟಕದಿಂದಲೂ ಒಂದು ಟ್ರಿಲಿಯನ್ ಎಕಾನಮಿ ಕಾಂಟ್ರಿಬ್ಯೂಷನ್ ನೀಡಲು ಪ್ರಯತ್ನಿಸುತ್ತಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಧಾರವಾಡದಲ್ಲಿ ಎಫ್‌ಎಮ್‌ಸಿಜಿ ಕ್ಲಸ್ಟರ್, ಬಂಡವಾಳ ಹೂಡಿಕೆದಾರರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಸಿಎಂ, ಹಲವಾರು ಕ್ಷೇತ್ರಗಳಲ್ಲಿ ನಮ್ಮ ರಾಜ್ಯ ಮುಂಚೂಣಿಯಲ್ಲಿದೆ. ನಮ್ಮ ಸ್ಪರ್ಧೆ ಇರುವುದು ಸಿಲಿಕಾನ್ ವ್ಯಾಲಿ ಜೊತೆಗೆ ಹೊರತು ದೇಶದ ಇತರ ರಾಜ್ಯಗಳ ಜೊತೆಗಲ್ಲ. ಎಷ್ಟು ಹೂಡಿಕೆ ಮಾಡುತ್ತೇವೆ ಎನ್ನುವುದಕ್ಕಿಂತ, ಎಷ್ಟು ಜನರಿಗೆ ಕೆಲಸ ಕೊಟ್ಟಿದ್ದೇವೆ ಎನ್ನುವುದು ಮುಖ್ಯ. ಆರ್ಥಿಕತೆ ಅಂದರೆ ಕೇವಲ ದುಡ್ಡಲ್ಲ, ದುಡಿಮೆಯೇ ನಿಜವಾದ ಆರ್ಥಿಕತೆ ದುಡಿಮೆಯೇ ದೊಡ್ಡಪ್ಪ, ದುಡಿಮೆ ಇರುವ ದೇಶಕ್ಕೆ ಬಡತನ ಇರಲ್ಲ. ಎಫ್‌ಎಮ್‌ಸಿಜಿಯ ಯಶಸ್ಸು ದೇಶದ ಆರ್ಥಿಕತೆಯನ್ನೇ ಬದಲಾಯಿಸಬಲ್ಲದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಎಫ್ಎಂಸಿಜಿ ಕ್ಲಸ್ಟರ್ ತ್ವರಿತಗತಿಯಲ್ಲಿ ಮಾರಾಟವಾಗುವ ವಸ್ತುಗಳ ಉತ್ಪಾದನೆಯ ಘಟಕವಾಗಿದ್ದು, ಧಾರವಾಡದ ಮುಮ್ಮಿಗಟ್ಟಿ ಬಳಿ ಈ ಕಾರ್ಖಾನೆ ನಿರ್ಮಾಣವಾಗಲಿದೆ. ಇದು ಉತ್ತರ ಕರ್ನಾಟಕದ ಭಾಗದ ಲಕ್ಷಾಂತರ ಜನರಿಗೆ ಉದ್ಯೋಗ ನೀಡಲಿದೆ. ಈಗಾಗಲೆಎಫ್ಎಂಸಿಜಿ ಘಟಕದಲ್ಲಿ ಕೈಗಾರಿಕೆ ಸ್ಥಾಪಿಸಲು 17 ಕಂಪನಿಗಳು ಮುಂದೆ ಬಂದಿದ್ದು ಐದು ವರ್ಷಗಳೊಗೆ 1,275 ಕೋಟಿ ರೂ. ಕೋಟಿ ಬಂಡವಾಳ ಹೂಡಿಕೆಗೆ ಮಾಡಲು ನಿರ್ಧರಿಸಿವೆ. ಯುಪ್ಲೆಕ್ಸ್ ಲಿ, ಘೋದಾವತ್ ಫುಡ್ ಪ್ರೋ ಪ್ರೈ.ಲಿ. ಅಲ್ಪಾ ಇಂಡಿಯಾ ಪ್ರೈ.ಲಿ., ಜ್ಯೋತಿ ಲ್ಯಾಬ್, ನ್ಯಾಚುರಲ್ ಫುಡ್ಸ್, ಹಾಂಗ್ಯೋ ಸೇರಿದಂತೆ ಮುಂಬೈ, ಬೆಂಗಳೂರು, ಧಾರವಾಡ ಮೂಲದ ಕಂಪನಿಗಳ ಮುಖ್ಯಸ್ಥರು ಒಡಂಬಡಿಕೆ ಪತ್ರಗಳಿಗೆ ಸಹಿ ಹಾಕಿವೆ ಎಂದರು. ತಿಳಿಸಿದರು.

ಕರ್ನಾಟಕ ಕೇಂದ್ರದಿಂದ ಸಾಕಷ್ಟು ಪ್ರೋತ್ಸಾಹ ಸಿಕ್ಕಿದ್ದು ಈ ನಿಟ್ಟಿನಲ್ಲಿ ರೈಲ್ವೆ, ಭೂ ಸಾರಿಗೆ ಹಾಗೂ ಇತರ ಯೋಜನೆಗಳಲ್ಲಿ ಕರ್ನಾಟಕಕ್ಕೆ ಅಗ್ರಸ್ಥಾನ ಸಿಕ್ಕಿದೆ. ವಂದೇ ಮಾತರಂ ರೈಲ್ವೆ ಸಂಪರ್ಕ, ಹುಬ್ಬಳ್ಳಿ- ಕಾರವಾರ ರೈಲ್ವೆ ಸಂಪರ್ಕ, ಹುಬ್ಬಳ್ಳಿ -ನವದೆಹಲಿ ವಿಮಾನ ನಿಲ್ದಾಣ ಸಂಪರ್ಕ ಸೇವೆ ಸಿಕ್ಕಿದೆ. ಇದೀಗೆ ಇಂತಹ ಹೊಸ ಯೋಜನೆಗಳನ್ನು ಜಾರಿ ಮೂಲಕ ಕರ್ನಾಟಕ ಎಂದು ಕಾಣದಂತ ಅಭಿವೃದ್ಧಿಯಲ್ಲಿ ಮುನ್ನುಗ್ಗುತ್ತಿದೆ ಎಂದರು.
ಅಭಿವೃದ್ಧಿ ಅನ್ನೋದು ನಿರಂತರವಾಗಿ ನಡೆಯುವ ಪ್ರಕ್ರಿಯೆಯಾಗಿದೆ. ಅಭಿವೃದ್ಧಿ ನಿರಂತರವಾಗಿ ಮುಂದುವರಿಯಲು ಕೈಗಾರಿಕೆ ಇಲಾಖೆಯಿಂದ ಎಲ್ಲಾ ಕ್ರಮ ಕೈಗೊಂಡಿದ್ದೇವೆ. ಜಗದೀಶ್ ಶೆಟ್ಟರ್, ಪ್ರಲ್ಹಾದ್ ಜೋಶಿ, ನಿರಾಣಿಯವರ ಪರಿಶ್ರಮದಿಂದ ಹುಬ್ಬಳ್ಳಿ- ಧಾರವಾಡಕ್ಕೆ ಎಫ್‌ಎಮ್‌ಸಿಜಿ ಬಂದಿದೆ ಎಂದು ಬೊಮ್ಮಾಯಿ ಹಿರಿಯ ನಾಯಕರನ್ನು ಶ್ಲಾಘಿಸಿದರು.
ಎಫ್‌ಎಂಸಿಜಿ ಎಂದರೇನು?
ಪೇಸ್ಟ್, ಸೋಪ್, ಶಾಂಪೂ, ಹೇರ್ ಆಯಿಲ್ ಸೇರಿದಂತೆ ನಿತ್ಯ ಬಳಸಬಹುದಾದ ಅಗತ್ಯ ವಸ್ತುಗಳನ್ನು ಎಫ್‌ಎಂಸಿಜಿ ಉತ್ಪನ್ನಗಳೆಂದು ಕರೆಯಲಾಗುತ್ತಿದೆ. ಇದಕ್ಕೆ ಮಿತಿ ಎನ್ನುವುದಿರುವುದಿಲ್ಲ. ಜನರ ಅಗತ್ಯಕ್ಕೆ ತಕ್ಕಂತೆ ಹೊಸ ಹೊಸ ವಸ್ತುಗಳು ಇದರಡಿ ಸೇರ್ಪಡೆಯಾಗುತ್ತಲೇ ಹೋಗುತ್ತವೆ.












Click it and Unblock the Notifications