• search
  • Live TV
ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹುಬ್ಬಳ್ಳಿ ಬಸ್ ನಲ್ಲೇ ಹಿಗ್ಗಾಮುಗ್ಗ ಹೊಡೆದಾಟ; ಕಾರಣ ಮಾತ್ರ ಗೊತ್ತಿಲ್ಲ

By ಧಾರವಾಡ ಪ್ರತಿನಿಧಿ
|

ಧಾರವಾಡ, ಡಿಸೆಂಬರ್ 23: ಸಣ್ಣದೊಂದು ಕಾರಣಕ್ಕೆ ಬಸ್ ನಲ್ಲಿ ಆರಂಭಗೊಂಡ ಜಗಳ ಕೈಕೈ ಮಿಲಾಯಿಸುವ ಹಂತಕ್ಕೂ ಹೋಗಿ, ಸಾರಿಗೆ ಬಸ್ ಸಿಬ್ಬಂದಿ ಪ್ರಯಾಣಿಕನಿಗೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಧಾರವಾಡದಲ್ಲಿ ನಡೆದಿದೆ.

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಲ್ಲಿ ಕಳೆದ ರಾತ್ರಿ ಈ ಘಟನೆ ನಡೆದಿದೆ. ಹುಬ್ಬಳ್ಳಿಯಿಂದ ಧಾರವಾಡಕ್ಕೆ ಬರುತ್ತಿದ್ದ ಬಸ್ ನಲ್ಲಿ ಬಸ್ ಚಾಲಕ, ನಿರ್ವಾಹಕ ಇಬ್ಬರೂ ಸೇರಿ ಪ್ರಯಾಣಿಕನಿಗೆ ಚೆನ್ನಾಗಿ ಹೊಡೆದಿದ್ದಾರೆ. ಈ ಪ್ರಯಾಣಿಕ ಬಸ್ ಚಾಲಕನಿಗೆ ಏನೋ ಮಾತನಾಡಿದ್ದು, ಇದರಿಂದ ಆಕ್ರೋಶಗೊಂಡ ಚಾಲಕ ರಾಯಾಪುರ ಬಸ್ ನಿಲ್ದಾಣದ ಬಳಿ ರಸ್ತೆ ಪಕ್ಕಕ್ಕೆ ಬಸ್ ನಿಲ್ಲಿಸಿ ಪ್ರಯಾಣಿಕನಿಗೆ ಥಳಿಸಲು ಆರಂಭಿಸಿದ್ದಾರೆ. ಚಾಲಕನಿಗೆ ಬಸ್ ನಿರ್ವಾಹಕ ಕೂಡ ಜೊತೆಯಾಗಿದ್ದು, ಇಬ್ಬರೂ ಸೇರಿ ಹೊಡೆದಿದ್ದಾರೆ.

ಲಾಡ್ಜ್ ಗೆ ಬಂದ ಯುವಕನಿಗೆ ಹಿಗ್ಗಾಮುಗ್ಗ ಥಳಿಸಿದ ಹುಬ್ಬಳ್ಳಿ ಮಹಿಳೆಯರು

ಪ್ರಯಾಣಿಕ ಮೇಲಿನ ಹಲ್ಲೆಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ಅದೇ ಬಸ್ ನ ಇತರೆ ಪ್ರಯಾಣಿಕರು ಈ ದೃಶ್ಯ ಸೆರೆ ಹಿಡಿದಿದ್ದಾರೆ. ಥಳಿತಕ್ಕೊಳಗಾದ ಪ್ರಯಾಣಿಕನ ವಿವರ ಕೂಡ ತಿಳಿದು ಬಂದಿಲ್ಲ.

English summary
A bus driver and conductor assualt on a passenger in bus. This incident happened in dharwad,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X