ಹುಬ್ಬಳ್ಳಿ: ಕೊಪ್ಪೀಕರ ರಸ್ತೆಯಲ್ಲಿ ಭಾರತ್ ಬ್ಯಾಂಕ್ ಶಾಖೆ ಆರಂಭ

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ಜುಲೈ, 14: ಭಾರತ್ ಬ್ಯಾಂಕ್ ನ 97ನೇ ಶಾಖೆ ಹುಬ್ಬಳ್ಳಿಯಲ್ಲಿ ಆರಂಭವಾಗಿದ್ದು ಜನರಿಗೆ ಸಕಲ ಸೇವೆ ಒದಗಿಸುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ಬ್ಯಾಂಕ್ ನ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ ತಿಳಿಸಿದರು. ಅವರು ಗುರುವಾರ ನಗರದ ಕೊಪ್ಪೀಕರ ರಸ್ತೆಯಲ್ಲಿ ಭಾರತ ಬ್ಯಾಂಕ್ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು

ಮುಂಬೈಯ ಬಿಲ್ಲವರ ಅಸೋಸಿಯೇಶನ್ ನಡೆಸುತ್ತಿರುವ ನಮ್ಮ ಬ್ಯಾಂಕ್ ಮಹಾರಾಷ್ಟ್ರದಲ್ಲಿ 73, ಕರ್ನಾಟಕದಲ್ಲಿ 18 ಮತ್ತು ಗುಜರಾತ್ ರಾಜ್ಯದಲ್ಲಿ 4 ಶಾಖೆಗಳನ್ನು ಹೊಂದಿದೆ. ಭಾರತೀಯರ ಮಿತವ್ಯಯ ಮತ್ತು ಹಣಕಾಸು ನಿರ್ವಹಣೆ ಬಗ್ಗೆ ಅರಿತಿರುವ ನಮ್ಮ ಸಂಸ್ಥೆಯು ಗ್ರಾಹಕರ ಸೇವೆಯಲ್ಲಿ ಸದಾ ಸನ್ನದ್ಧವಾಗಿರುತ್ತದೆ. ಹೀಗಾಗಿಯೇ ಹುಬ್ಬಳ್ಳಿಯಲ್ಲಿ ಬೆಳಗಿನ ಹೊತ್ತು ಮತ್ತು ಸಂಜೆಯ ನಂತರವೂ ಬ್ಯಾಂಕ್ ಕಾರ್ಯಾರಂಭ ಮಾಡಲಾಗಿದೆ ಎಂದರು.[ಹುಬ್ಬಳ್ಳಿ ಬಸ್ ನಿಲ್ದಾಣದಲ್ಲಿ ವೈಫೈ: ಧಾರವಾಡಕ್ಕೂ ಶೀಘ್ರ]

Bharat Bank opens 94th branch at Hubballi

ಕಳೆದ ವರ್ಷದಲ್ಲಿ ಶೇ. 16.45 ರಷ್ಟು ಲಾಭ ಪಡೆದುಕೊಂಡು 20 ಹೊಸ ಶಾಖೆಗಳನ್ನು ಆರಂಭಿಸಲಾಗಿದೆ. ನಮ್ಮ ಗ್ರಾಹಕರಿಗೆ ಶೇ. 15 ರಷ್ಟು ಡಿವಿಡೆಂಡ್ ನೀಡಲು ಈ ವರ್ಷ ನಿರ್ಧರಿಸಲಾಗಿದೆ ಎಂದರು.

Bharat Bank opens 94th branch at Hubballi

ಬ್ಯಾಂಕ್ ಸಾಧನೆಯ ವಿವರ ನೀಡಿ, ಒಟ್ಟು ಬಂಡವಾಳ 181.66 ಕೋ.ರೂ. ಕಾಯ್ದಿರಿಸಿದ ನಿಧಿ 720.77 ಕೋ.ರೂ. ಪಿಕ್ಸ ಡಿಪಾಜಿಟ್ 7,277.45 ಕೋ.ರೂ. ಸೇವಿಂಗ್ ಖಾತೆಯಲ್ಲಿ 1,124.82 ಕೋ.ರೂ ಇದೆ ಎಂದು ಇತರೆ ಲೆಕ್ಕಪತ್ರಗಳನ್ನು ವಿವರಿಸಿದರು.[ಪ್ರತಿದಿನ ಧೂಳಿನಲ್ಲಿ ಜಳಕ ಮಾಡುತ್ತಿರುವ ಹುಬ್ಬಳ್ಳಿ ಮಂದಿ]

Bharat Bank opens 94th branch at Hubballi

ಬ್ಯಾಂಕ್ ಆಡಳಿತ ನಿರ್ದೇಶಕ ಸಿ.ಆರ್.ಮೂಲ್ಕಿ, ಮುಖ್ಯ ಪ್ರಧಾನ ಪ್ರಬಂಧಕ ಅನಿಲಕುಮಾರ್ ಆರ್ ಆಮೀನ್, ಮಹಾಪ್ರಬಂಧಕ ನಿತ್ಯಾನಂದ ಡಿ.ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bharat Cooperative Bank inaugurated their 97th branch at Hbballi , Koppikar road on 14 July, 2016. Bank's executive president Jaya C Suvarna untied the ribbon and inaugurated the branch.
Please Wait while comments are loading...