ಹುಬ್ಬಳ್ಳಿಗೆ ಹಾರಲಿವೆ ಇನ್ನೂ ಮೂರು ವಿಮಾನ

ಹುಬ್ಬಳ್ಳಿ, ಜುಲೈ 15 : ಏರ್ ಪೆಗಾಸಸ್ ಬೆಂಗಳೂರು-ಹುಬ್ಬಳ್ಳಿ ನಡುವೆ ಮತ್ತೊಂದು ವಿಮಾನ ಸೇವೆ ಆರಂಭಿಸಲು ನಿರ್ಧರಿಸಿದೆ. ಟ್ರೂ ಜೆಟ್ ಮತ್ತು ಸ್ಪೈಸ್ ಜೆಟ್‌ಗಳು ಸಹ ಹುಬ್ಬಳ್ಳಿಗೆ ವಿಮಾನ ಸಂಪರ್ಕ ಕಲ್ಪಿಸಲು ಮುಂದೆ ಬಂದಿದ್ದು, ಜುಲೈ ಅಂತ್ಯಕ್ಕೆ ಅಂತಿಮ ತೀರ್ಮಾನ ಹೊರಬೀಳುವ ಸಾಧ್ಯತೆ ಇದೆ.

2015ರ ಏಪ್ರಿಲ್‌ನಿಂದ ಏರ್ ಪೆಗಾಸಸ್‌ನ ಒಂದು ವಿಮಾನ ಬೆಂಗಳೂರು-ಹುಬ್ಬಳ್ಳಿ ನಡುವೆ ಪ್ರತಿದಿನ ಸಂಚಾರ ನಡೆಸುತ್ತಿದೆ. ಸದ್ಯ, ಮತ್ತೊಂದು ವಿಮಾನದ ಹಾರಾಟವನ್ನು ಆರಂಭಿಸಲು ಸಂಸ್ಥೆ ನಿರ್ಧರಿಸಿದ್ದು, ಮುಂದಿನವಾರ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ.[ಹುಬ್ಬಳ್ಳಿಗೆ ಸ್ಪೈಸ್ ಜೆಟ್ ಹಾರಾಟ ಸ್ಥಗಿತ]

hubballi

ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಶೈಸನ್ ಥಾಮಸ್ ಅವರು ಈ ಕುರಿತು ಮಾಹಿತಿ ನೀಡಿದ್ದು, ಹಿಂದೆ ಸಂಸ್ಥೆ ಹೇಳಿದಂತೆ ಹುಬ್ಬಳ್ಳಿಗೆ ಮತ್ತೊಂದು ವಿಮಾನ ಸಂಚಾರವನ್ನು ಆರಂಭಿಸಲಾಗುತ್ತದೆ. ಮುಂದಿನವಾರ ವಿಮಾನದ ಸಮಯ, ದರ ಮುಂತಾದವುಗಳ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ. [ಟಿಕೆಟ್ ಬುಕ್ ಮಾಡಲು ವಿಳಾಸ]

ಸ್ಪೈಸ್ ಜೆಟ್, ಟ್ರೂ ಜೆಟ್ ಸೇವೆಗಳು ಆರಂಭ : ಮೊದಲು ಹುಬ್ಬಳ್ಳಿಗೆ ಸ್ಪೈಸ್‌ಜೆಟ್ ವಿಮಾನಯಾನ ಸೇವೆ ನೀಡುತ್ತಿತ್ತು. 2015ರ ಮಾ.8ರಂದು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸ್ಪೈಸ್‌ಜೆಟ್ ವಿಮಾನ ಲ್ಯಾಂಡ್ ಆಗುವ ವೇಳೆ ಅಪಘಾತ ಸಂಭವಿಸಿತ್ತು. ಇದರಿಂದಾಗಿ ವಿಮಾನ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು, ಈಗ ಪುನಃ ಸೇವೆ ಆರಂಭಿಸಲು ಸ್ಪೈಸ್ ಜೆಟ್ ಮುಂದಾಗಿದೆ.

ಹೈದರಾಬಾದ್ ಮೂಲದ ಟ್ರೂ ಜೆಟ್ ಸಹ ಹುಬ್ಬಳ್ಳಿಗೆ ವಿಮಾನ ಸೇವೆ ಒದಗಿಸಲು ಮುಂದಾಗಿದೆ. ಸಂಸ್ಥೆಯ ಅಧಿಕಾರಿಗಳು ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ, ಕಚೇರಿ ತೆರೆಯುವ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಕಚೇರಿಯ ನೌಕರರ ನೇಮಕಾತಿಯನ್ನು ಆರಂಭಿಸಿದ್ದಾರೆ. ನಟ ರಾಮ್ ಚರಣ್ ತೇಜ ಮುಂತಾದವರು ಟ್ರೂ ಜೆಟ್ ಸಂಸ್ಥೆಯಲ್ಲಿ ಪಾಲುದಾರರಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+