ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಧಾರವಾಡ : ಹಾಸ್ಟೆಲ್ ಊಟ ಸೇವಿಸಿ 30 ವಿದ್ಯಾರ್ಥಿಗಳು ಅಸ್ವಸ್ಥ

By ನಮ್ಮ ಪ್ರತಿನಿಧಿ
|
Google Oneindia Kannada News

ಧಾರವಾಡ, ಅಕ್ಟೋಬರ್ 27 : ಹಾಸ್ಟೆಲ್ ಊಟ ಸೇವಿಸಿ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥರಾದ ಘಟನೆ ಧಾರವಾಡದಲ್ಲಿ ನಡೆದಿದೆ. ಅಸ್ವಸ್ಥಗೊಂಡವರು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಹಾಸ್ಟೆಲ್‌ನಲ್ಲಿದ್ದ ವಿದ್ಯಾರ್ಥಿಗಳು.

ಗುರುವಾರ ರಾತ್ರಿ ಹಾಸ್ಟೆಲ್‌ನಲ್ಲಿ ಊಟ ಸೇವಿಸಿದ 30ಕ್ಕೂ ಹೆಚ್ಚು ಬಿಎಸ್‌ಸಿ ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ. ಎಲ್ಲಾ ವಿದ್ಯಾರ್ಥಿಗಳಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಕುಡಿಯುವ ನೀರು ಮತ್ತು ಹಾಸ್ಟೆಲ್ ಸ್ವಚ್ಛತೆ ಬಗ್ಗೆ ವಿದ್ಯಾರ್ಥಿಗಳು ಆರೋಪ ಮಾಡುತ್ತಿದ್ದಾರೆ.

ಆನ್ ಲೈನ್ ಫುಡ್ ಡೆಲಿವರಿ, ಸ್ವಿಗ್ಗಿನಲ್ಲಿ ಕ್ಯಾಶ್ ಬ್ಯಾಕ್ ಆಫರ್ಆನ್ ಲೈನ್ ಫುಡ್ ಡೆಲಿವರಿ, ಸ್ವಿಗ್ಗಿನಲ್ಲಿ ಕ್ಯಾಶ್ ಬ್ಯಾಕ್ ಆಫರ್

30 students fall ill after eating hostel food

ಶುಕ್ರವಾರ ಬೆಳಗ್ಗೆ ಕೆಲವು ವಿದ್ಯಾರ್ಥಿಗಳಿಗೆ ವಾಂತಿಯಾಯಿತು. ಕೆಲವು ವಿದ್ಯಾರ್ಥಿಗಳಿಗೆ ಹೊಟ್ಟೆ ನೋವು ಕಾಣಿಸಿಕೊಂಡಿತು. ನಂತರ 30ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತು.

ಇಂದಿರಾ ಕ್ಯಾಂಟೀನ್‌ ಉಪಹಾರದಲ್ಲಿ ಜಿರಳೆ, ದೂರು ದಾಖಲುಇಂದಿರಾ ಕ್ಯಾಂಟೀನ್‌ ಉಪಹಾರದಲ್ಲಿ ಜಿರಳೆ, ದೂರು ದಾಖಲು

ಹಾಸ್ಟೆಲ್‌ನಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಸರಿ ಇಲ್ಲ. ಈ ಬಗ್ಗೆ ಹಲವು ಬಾರಿ ದೂರು ನೀಡಿದರೂ ಯಾವುದೇ ಕ್ರಮ ಗಳನ್ನು ಕೈಗೊಂಡಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸುತ್ತಿದ್ದಾರೆ. ಹಾಸ್ಟೆಲ್‌ ಸ್ವಚ್ಛತೆ ಬಗ್ಗೆಯೂ ವಿದ್ಯಾರ್ಥಿಗಳು ಆರೋಪಿಸುತ್ತಿದ್ದಾರೆ.

ತೇಜಸ್ ರೈಲಿನಲ್ಲಿ ಆಹಾರ ಸೇವಿಸಿದ 24 ಪ್ರಯಾಣಿಕರು ಅಸ್ವಸ್ಥತೇಜಸ್ ರೈಲಿನಲ್ಲಿ ಆಹಾರ ಸೇವಿಸಿದ 24 ಪ್ರಯಾಣಿಕರು ಅಸ್ವಸ್ಥ

English summary
As many as 30 students of Dharwad agricultural university hostel fell ill after eating food on October 26, 2017 night. It is an suspected food poisoning case, students admitted to government hospital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X