Get Updates
Get notified of breaking news, exclusive insights, and must-see stories!

ಉಕ್ಕಡಗಾತ್ರಿಯ ಕರಿಬಸವೇಶ್ವರ ಸನ್ನಿಧಾನದಲ್ಲಿ ನೆರೆದ ಭಕ್ತಸಾಗರ: ಉಕ್ಕಡಗಾತ್ರಿ ಎಂದು ಹೆಸರು ಬಂದಿದ್ದೇಗೆ?, ಇಲ್ಲಿದೆ ವಿವರ

ಹರಿಹರ ತಾಲೂಕಿನ ಉಕ್ಕಡಗಾತ್ರಿಯಲ್ಲಿ ಇಂದಿನಿಂದ ಫೆಬ್ರವರಿ 27ರವರೆಗೆ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ನೆರವೇರಲಿದೆ.

ದಾವಣಗೆರೆ, ಫೆಬ್ರವರಿ, 20: ಹರಿಹರ ತಾಲೂಕಿನ ಸುಕ್ಷೇತ್ರ ಉಕ್ಕಡಗಾತ್ರಿಯಲ್ಲಿ ಇಂದಿನಿಂದ ಫೆಬ್ರವರಿ 27ರವರೆಗೆ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ನೆರವೇರಲಿದೆ. ಧ್ವಜಾರೋಹಣ ನೆರವೇರಿಸುವ ಮೂಲಕ ಜಾತ್ರೆಗೆ ಅದ್ಧೂರಿ ಚಾಲನೆ ಸಿಕ್ಕಿದೆ. ರಾಜ್ಯ ಮಾತ್ರವಲ್ಲ, ಬೇರೆ ರಾಜ್ಯಗಳಿಂದಲೂ ಸಮಾರೋಪಾದಿಯಲ್ಲಿ ಭಕ್ತಸಾಗರವೇ ಉಕ್ಕಡಗಾತ್ರಿಯತ್ತ ಹರಿದು ಬರುತ್ತಿದೆ.

ಇನ್ನು ಭಕ್ತರು ಸ್ನಾನಘಟ್ಟದಲ್ಲಿ ಮಿಂದು ಪವಾಡ ಪುರುಷ ಅಂತಾನೇ ಕರೆಯಲ್ಪಡುವ ಕರಿಬಸವೇಶ್ವರ ಸ್ವಾಮಿಯ ದರ್ಶನ ಪಡೆದು ಪುನೀತರಾದರು. ಕರಿಬಸವೇಶ್ವರ ಗದ್ದುಗೆ ಮಹಾಪೂಜೆ ನೆರವೇರಿದ ನಂತರ ನಂದಿ ಧ್ವಜಾರೋಹಣ ನೆರವೇರಿತು. ಭಜನೆ ಹಾಗೂ ಕೀರ್ತನ ಕಾರ್ಯಕ್ರಮಗಳು ಜರುಗುತ್ತಿವೆ. ಫೆಬ್ರವರಿ 21ಕ್ಕೆ ಕರಿಸಬಸವೇಶ್ವರ ಸ್ವಾಮಿಯ ಮಹಾ ರಥೋತ್ಸವ ನಡೆಯಲಿದ್ದು, ನಂದಿಗುಡಿ ವೃಷಭಪುರಿ ಸಂಸ್ಥಾನದ ಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ರಥೋತ್ಸವಕ್ಕೆ ಅಧಿಕೃತವಾಗಿ ಚಾಲನೆ ನೀಡಿದ ಬಳಿಕ ಜಾತ್ರೆ ಮತ್ತಷ್ಟು ಕಳೆಗಟ್ಟಲಿದೆ.

ಜಾತ್ರೆಗೆ ಕರ್ನಾಟಕ ರಾಜ್ಯದಿಂದ ಮಾತ್ರವಲ್ಲದೇ ಬೇರೆ ಬೇರೆ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಹಾಗಾಗಿ ದೇವಸ್ಥಾನದ ಸುತ್ತಮುತ್ತ ಭಕ್ತಸಾಗರವೇ ಕಾಣುತ್ತದೆ. ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ತಡೆಯಲು ಮುನ್ನೆಚ್ಚರಿಕಾ ಕ್ರಮವಾಗಿ ಆಯಾ ಪ್ರದೇಶಗಳಲ್ಲಿ ಸಿಸಿಟಿವಿ ಅಳವಡಿಕೆ ಮಾಡಲಾಗಿದೆ. ಜೊತೆಗೆ ಶುದ್ಧ ಕುಡಿಯುವ ನೀರು, ವಸತಿ ಸೌಲಭ್ಯ, ಸ್ನಾನಘಟ್ಟದಲ್ಲಿ ಭಕ್ತರಿಗೆ ಸ್ನಾನ ಮಾಡಲು ಎಲ್ಲಾ ರೀತಿಯ ವ್ಯವಸ್ಥೆ ಕಲ್ಪಿಸಲಾಗಿದೆ.

 ಆಡಳಿತ ಮಂಡಳಿಯಿಂಂದ ಕ್ರಮ

ಆಡಳಿತ ಮಂಡಳಿಯಿಂಂದ ಕ್ರಮ

ಸುಮಾರು ನಾಲ್ಕು ಕೋಟಿ ರೂಪಾಯಿ ವೆಚ್ಚದಲ್ಲಿ 28 ಅಡಿಯ ಸಾಮೂಹಿಕ ವಸತಿ ಶಾಲೆ, 3 ಕೋಟಿ ರೂಪಾಯಿ ವೆಚ್ಚದಲ್ಲಿ ರಾಜಗೋಪುರ ನಿರ್ಮಾಣವೂ ಬಹುತೇಕ ಮುಗಿದಿದೆ. ವಾಹನ ನಿಲುಗಡೆಗಾಗಿ ಸುಮಾರು 20 ಹೆಕ್ಟೇರ್‌ ಪ್ರದೇಶದಲ್ಲಿ ಸ್ಥಳ ನಿಗದಿ ಮಾಡಲಾಗಿದ್ದು, ಯಾವುದೇ ತೊಂದರೆಯಾಗದಂತೆ ದೇವಸ್ಥಾನದ ಆಡಳಿತ ಮಂಡಳಿ ಎಚ್ಚರ ವಹಿಸಿದೆ.

 ಸ್ವಯಂ ಸೇವಕರ ನಿಯೋಜನೆ

ಸ್ವಯಂ ಸೇವಕರ ನಿಯೋಜನೆ

ವೈದ್ಯಕೀಯ ಸೌಲಭ್ಯವೂ ಇರಲಿದೆ. ಭಕ್ತರಿಗೆ ಸೌಲಭ್ಯಗಳು ಸುಲಭವಾಗಿ ಸಿಗುವಂತೆ ಎಲ್ಲಾ ರೀತಿಯ ಕ್ರಮ ತೆಗೆದುಕೊಳ್ಳಲಾಗಿದೆ. ಈ ಕಾರ್ಯಕ್ಕೆ ಸ್ವಯಂಸೇವಕರನ್ನು ನಿಯೋಜಿಸಲಾಗಿದ್ದು,ಇದನ್ನು ನೋಡಿಕೊಳ್ಳಲಿದ್ದಾರೆ.

 ಗಡಿ ದಾಟಲು ದೋಣಿಗಳ ವ್ಯವಸ್ಥೆ

ಗಡಿ ದಾಟಲು ದೋಣಿಗಳ ವ್ಯವಸ್ಥೆ

ಉಕ್ಕಡ ಎಂದರೆ ಗಡಿ. ಹಿಂದಿನ ಕಾಲದಲ್ಲಿ ಇಲ್ಲಿ ವೀಳೈದೆಲೆ ಬೆಳೆ ವಿಶೇಷವಾಗಿತ್ತು. ಈ ಎಲೆಗಳನ್ನು ಇಲ್ಲಿಂದ ಬೇರೆ ಕಡೆಗಳಿಗೆ ರಫ್ತು ಮಾಡಲಾಗುತಿತ್ತು. ಹಾಗಾಗಿ ಈ ಹೆಸರು ಬಂದಿರಬಹುದು ಎಂದು ಇತಿಹಾಸದಲ್ಲಿ ಪ್ರಸ್ತಾಪವಾಗಿದೆ. ಇಲ್ಲಿನ ನದಿಯ ಎಡಭಾಗ ಬೊಂಬಾಯಿ ಪ್ರಾಂತ್ಯಕ್ಕೂ ಬಲಭಾಗ ಮೈಸೂರು ವಿಭಾಗಕ್ಕೂ ಸೇರಿತ್ತು. ಗಡಿ ದಾಟಲು ದೋಣಿ ವ್ಯವಸ್ಥೆ ಮಾಡಿದ್ದರಿಂದ ಉಕ್ಕಡ ಕತ್ತರಿ ಎಂದು ಕರೆಯಲಾಗುತಿತ್ತು. ನಂತರ ಬರಬರುತ್ತಾ ಉಕ್ಕಡಗಾತ್ರಿಯಾಗಿದೆ ಎಂಬುದು ಮತ್ತೊಂದು ವಾದವಿದೆ.

 ಉಕ್ಕಡಗಾತ್ರಿ ಪುಣ್ಯಕ್ಷೇತ್ರವಾಗಿದ್ದು ಹೇಗೆ?

ಉಕ್ಕಡಗಾತ್ರಿ ಪುಣ್ಯಕ್ಷೇತ್ರವಾಗಿದ್ದು ಹೇಗೆ?

ತುಂಗಾಭದ್ರಾ ನದಿಯ ದಡದ ಮೇಲಿರುವ ಸುಂದರ ಪ್ರಶಾಂತವಾದ ಊರು ಇದಾಗಿದೆ. ಕರ್ನಾಟಕದಲ್ಲಿ ಪ್ರಸಿದ್ಧವಾದ ಶ್ರೀ ಕರಿಬಸವೇಶ್ವರ ಸ್ವಾಮಿಯ ದೇಗುಲವಿದೆ. ಶ್ರೀ ವೃಷಭಾಪುರಿ ಸೂರ್ಯಸಿಂಹಾಸನಾಧೀಶ ಪರಂಪರೆಯ ಆರನೇ ಪಟ್ಟಾಧ್ಯಕ್ಷರಾಗಿ, ಪವಾಡಪುರುಷರಾಗಿ, ಶಿವಯೋಗಿಗಳಾಗಿ ತಮ್ಮ ಕೊನೆಗಾಲದಲ್ಲಿ ಶ್ರೀ ಕರಿಬಸವೇಶ್ವರರು ಉಕ್ಕಡಗಾತ್ರಿಗೆ ಬಂದಿದ್ದರು. ಅಲ್ಲಿಯೇ ಸಜೀವ ಸಮಾಧಿ ಆಗಿದ್ದರಿಂದ ಈ ಸ್ಥಳವನ್ನು ಪುಣ್ಯಕ್ಷೇತ್ರವಾಗಿಸಿದರು ಎಂಬ ಪ್ರತೀತಿ ಇದೆ.

 ಭಕ್ತಿಯಿಂದ ನಡೆದುಕೊಂಡರೆ ಸಮಸ್ಯೆಗಳು ಮಾಯ

ಭಕ್ತಿಯಿಂದ ನಡೆದುಕೊಂಡರೆ ಸಮಸ್ಯೆಗಳು ಮಾಯ

ಇನ್ನು ಕರಿಬಸವೇಶ್ವರ ಸ್ವಾಮಿಯ ಗದ್ದುಗೆಗೆ ತ್ರಿಕಾಲ ಪೂಜೆ ನೆರವೇರುತ್ತದೆ. ಭಕ್ತಿಯಿಂದ ನಡೆದುಕೊಂಡರೆ ದೆವ್ವ, ಪಿಶಾಚಿ, ಭೂತಗಳು ಹೋಗುತ್ತವೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಈ ತಾಣಪ್ರಖ್ಯಾತಿಗೊಂಡಿದೆ. ಈ ಗದ್ದುಗೆಯ ಮೇಲೆ ಭಕ್ತರ ನೆರವಿನಿಂದ ದೊಡ್ಡ ಸುಂದರ ದೇವಾಲಯ ನಿರ್ಮಾಣ ಮಾಡಲಾಗಿದೆ. ಬಂದ ಭಕ್ತರು, ಯಾತ್ರಿಕರಿಗೆ ವಾಸ್ತವ್ಯ ಮಾಡಲು ವಸತಿ ಸೌಲಭ್ಯವೂ ಇದೆ.

 ನೈವೇದ್ಯದ ವಿವರ ಇಲ್ಲಿದೆ

ನೈವೇದ್ಯದ ವಿವರ ಇಲ್ಲಿದೆ

ಶಿವರಾತ್ರಿಯಲ್ಲಿ ಸುಮಾರು 9 ದಿನಗಳ ಕಾಲ ಶ್ರೀ ಕರಿಬಸವೇಶ್ವರ ದೊಡ್ಡ ಜಾತ್ರೆ ನಡೆಯುತ್ತದೆ. ನೈವೇದ್ಯಕ್ಕೆ ಪಲಾರ ಎಂದು ಕರೆಯುವ ಕಾರಮಂಡಕ್ಕಿ ರಾಶಿಯನ್ನೇ ಹಾಕಲಾಗಿರುತ್ತದೆ. 9 ದಿನಗಳ ಬಳಿಕ ಈ ಪಲಾರದ ರಾಶಿಯನ್ನು ಒಡೆಯಲಾಗುತ್ತದೆ. ಆಗ ಸ್ವಾಮಿಯ ತೇರು ನಡೆಯುತ್ತದೆ. ಪಲಾರ ಮಂಡಕ್ಕಿಯನ್ನೇ ಭಕ್ತರಿಗೆ ವಿತರಿಸಲಾಗುತ್ತದೆ. ಇದು ಈ ಕ್ಷೇತ್ರದ ಮತ್ತೊಂದು ವಿಶೇಷವಾಗಿದೆ. ಪ್ರತಿ ಅಮವಾಸ್ಯೆ, ಸೋಮವಾರದ ದಿನಗಳಲ್ಲಿ ಎಲ್ಲೆಲ್ಲಿಂದಲೋ ಭಕ್ತರು ಆಗಮಿಸಿ ದೆವ್ವ, ಭೂತಗಳಿಂದ ತೊಂದರೆ ಇದ್ದರೆ ಪರಿಹರಿಸಿಕೊಂಡು ಹೋಗುತ್ತಾರೆ. ವಿಚಿತ್ರವೆಂದರೆ ದೆವ್ವ, ಪಿಶಾಚಿಗಳನ್ನು ಬಿಡಿಸಲು ಮೂರನೇಯವರು ಇಲ್ಲಿ ಇರುವುದಿಲ್ಲ ಎನ್ನುವುದು ಮತ್ತೊಂದು ವಿಶೇಷತೆಯಾಗಿದೆ.

ಇಲ್ಲಿ ಈಶ್ವರ ಹಾಗೂ ನಂದಿವಿಗ್ರಹಗಳು ನೋಡಲು ತುಂಬಾನೇ ಸುಂದರವಾಗಿವೆ. ಪವಾಡ ಪುರುಷ ತುಕ್ಕಪ್ಪಜ್ಜನ ಗುಡಿ ಇದೆ. ಊರ ಬಾಗಿಲ ದಿಬ್ಬದ ಮೇಲೆ ಪುರಾತನ ಆಂಜನೇಯ ಸ್ವಾಮಿಯ ದೇಗುಲವೂ ಇದೆ. ಶ್ರೀ ಕರಿಬಸವೇಶ್ವರ ಸ್ವಾಮಿ ಅಜ್ಜನವರು ತಮ್ಮ ಕೊನೆಗಾಲದಲ್ಲಿ ಇಲ್ಲಿಗೆ ಬಂದಾಗ ಈ ಗುಡಿಯಲ್ಲೇ ಬಂದು ತಂಗಿದ್ದನ್ನು ಜನರು ಈಗಲೂ ಮರೆತಿಲ್ಲ. ಅಗಸೆ ಬಾಗಿಲಲ್ಲಿ ಎರಡೂ ಬದಿಗೆ ಆಂಜನೇಯ ಹಾಗೂ ಬಸವಣ್ಣನ ಗುಡಿಗಳಿವೆ. ಒಟ್ಟಿನಲ್ಲಿ ಒಂದು ವಾರಗಳ ಕಾಲ ಇಲ್ಲಿ ಜಾತ್ರಾ ಮಹೋತ್ಸವದ ಸಡಗರ, ಸಂಭ್ರಮ ಜೋರಾಗಿಯೇ ಇರುತ್ತದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+