ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಾವಣಗೆರೆಯ ಹಿಮೊಫಿಲಿಯಾ ಸೊಸೈಟಿಗೆ ಸಹಕಾರ ನೀಡಿದ್ದ ಎಸ್ಪಿಬಿ

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಸೆಪ್ಟೆಂಬರ್ 26: ಸಂಗೀತ ಲೋಕದ ದಿಗ್ಗಜ, ಗಾನ ಕೋಗಿಲೆ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರದ್ದು ಮಾತೃ ಹೃದಯ. ಸಂಕಷ್ಟದಲ್ಲಿರುವ ಜನರ ಬಗ್ಗೆ ಅವರ ಹೃದಯ ಸದಾ ಮಿಡಿಯುತ್ತಿತ್ತು. ಇದಕ್ಕೆ ಶ್ರೇಷ್ಠ ನಿದರ್ಶನ ಅವರು ಕುಸುಮ ರೋಗಿಗಳ ಪರವಾಗಿ ನಾಡಿನಾದ್ಯಂತ ಹಾಡಿದ್ದುದು.

ಹೌದು, ದಾವಣಗೆರೆಯ ಹಿಮೊಫಿಲಿಯಾ ಸೊಸೈಟಿಗೆ ಸಹಕಾರ ನೀಡಿದ್ದ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು ಹಿಮೊಫಿಲಿಯಾ ರೋಗಿಗಳ ಪರವಾಗಿ ರಾಜ್ಯದ ವಿವಿಧೆಡೆ ಸಂಗೀತ ಕಾರ್ಯಕ್ರಮ ನಡೆಸಿ ಹಿಮೊಫಿಲಿಯಾ ರೋಗಿಗಳಿಗೆ ಆತ್ಮಸ್ಥೈರ್ಯ ತುಂಬುವ ಮಾನವೀಯ ಕಾರ್ಯ ಮಾಡಿದ್ದರು. ಹಿಮೊಫಿಲಿಯಾ ರೋಗಿಗಳ ಪರವಾಗಿ ದಾವಣಗೆರೆ, ಚಿತ್ರದುರ್ಗ ಸೇರಿದಂತೆ ರಾಜ್ಯದ ವಿವಿಧ ನಗರಗಳಲ್ಲಿ ಸಂಗೀತ ಕಾರ್ಯಕ್ರಮ ನಡೆಸಿದ್ದ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು ರೋಗಿಗಳ ಸಂಕಷ್ಟಕ್ಕೆ ಸ್ಪಂದಿಸುವಂತೆ ಮನವಿ ಮಾಡಿದ್ದರು.

ಎಸ್‌ಪಿ ಬಾಲಸುಬ್ರಮಣ್ಯಂ ಕುರಿತ ಆಸಕ್ತಿಕರ ಸಂಗತಿಗಳುಎಸ್‌ಪಿ ಬಾಲಸುಬ್ರಮಣ್ಯಂ ಕುರಿತ ಆಸಕ್ತಿಕರ ಸಂಗತಿಗಳು

Davanagere: Veteran Singer SP Balasubrahmanyam Helped Hemophilia Society

Recommended Video

SP Balasubramanyam : ಇದು SPB ಹಾಡಿದ ಕೊನೆಯ ಹಾಡು | Oneindia Kannada

ದಾವಣಗೆರೆಯ ಹಿಮೊಫಿಲಿಯಾ ಸೊಸೈಟಿ ಅಧ್ಯಕ್ಷ ಡಾ.ಸುರೇಶ್ ಹನಗವಾಡಿ ಅವರ ಕಾರ್ಯಕ್ಕೆ ಸಾಥ್ ನೀಡಿದ್ದ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಮುಂದೆ ಹಲವು ಯೋಜನೆಗಳಿದ್ದವು ಎಂದು ಹನಗವಾಡಿ ಸ್ಮರಿಸಿಕೊಂಡಿದ್ದಾರೆ. ನಿನ್ನೆ ಚೆನ್ನೈನ ಆಸ್ಪತ್ರೆಯಲ್ಲಿ ವಿಧಿವಶರಾದ ಎಸ್ಪಿಬಿ ಅವರ ಮಾನವೀಯ ಕಾರ್ಯಗಳನ್ನು ಸ್ಮರಿಸಿಕೊಂಡು, ದಾವಣಗೆರೆಯ ಹಿಮೊಫಿಲಿಯಾ ಸೊಸೈಟಿ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದೆ.

English summary
Veteran singer SP Balasubrahmanyam helped Hemophilia Society of Davanagere and has performed concerts in the state on behalf of hemophilia patients,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X