ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

"ತಪ್ಪಾಗಿದೆ. ಹೊಟ್ಟೆಯಲ್ಲಿ ಹಾಕೊಳ್ಳಿ' ಎಂದ ವಚನಾನಂದ ಶ್ರೀ

|
Google Oneindia Kannada News

ದಾವಣಗೆರೆ, ಜನವರಿ 15: ಶಾಸಕ ಮುರುಗೇಶ ನಿರಾಣಿ ಅವರಿಗೆ ಸಚಿವ ಸ್ಥಾನ ಕೊಡಬೇಕು ಎಂದು ಬೆದರಿಸುವ ದಾಟಿಯಲ್ಲಿ ಸಿಎಂ ಯಡಿಯೂರಪ್ಪಗೆ ಎಚ್ಚರಿಕೆ ನೀಡಿ, ಸಿಎಂ ಕೆಂಗಣ್ಣಿಗೆ ಗುರಿಯಾಗಿದ್ದ ಪಂಚಮಸಾಲಿ ಗುರುಪೀಠದ ವಚನಾನಂದ ಶ್ರೀ ಕ್ಷಮೆ ಕೇಳಿದ್ದಾರೆ.

ಬುಧವಾರ ಹರಿಹರದ ವೀರಶೈವ ಪಂಚಮಸಾಲಿ ಗುರುಪೀಠದಲ್ಲಿ ನಡೆಯುತ್ತಿರುವ ಹರ ಜಾತ್ರೆಯಲ್ಲಿ ವಚನಾನಂದ ಸ್ವಾಮೀಜಿ ಪಂಚಮಸಾಲಿ ಸಮಾಜದ ಎದುರು ಪರೋಕ್ಷವಾಗಿ ಯಡಿಯೂರಪ್ಪ ಅವರ ಕ್ಷಮೆ ಕೇಳಿದ್ದಾರೆ.

ಪಂಚಮಸಾಲಿ ಸ್ವಾಮೀಜಿ ವಿರುದ್ಧ ಕನಲಿದ ಬಿಎಸ್‌ವೈ: ರಾಜೀನಾಮೆ ಕೊಡುವ ಮಾತುಪಂಚಮಸಾಲಿ ಸ್ವಾಮೀಜಿ ವಿರುದ್ಧ ಕನಲಿದ ಬಿಎಸ್‌ವೈ: ರಾಜೀನಾಮೆ ಕೊಡುವ ಮಾತು

"ನನ್ನ ಜತೆ ಸಮಾಜವಿದೆ. ಸಮಾಜಕ್ಕಾಗಿ ನಾನು. ನನ್ನಿಂದ ಯಾವುದಾದರೂ ತಪ್ಪುಗಳಾಗಿದ್ರೆ ಕ್ಷಮಿಸಿ. ‌ನನ್ನಿಂದ ತಪ್ಪಾಗಿದ್ದರೆ ಅದನ್ನು ಹೊಟ್ಟೆಯಲ್ಲಿ ಹಾಕಿಕೊಳ್ಳಿ' ಎಂಬುದಾಗಿ ಅವರು ನೆರೆದಿದ್ದ ಜನರ ಮುಂದೆ ಹೇಳಿದ್ದಾರೆ. "ನಾನು ಇನ್ನೂ ಸಣ್ಣವ. ನಾನು ಮನಸ್ಸು ಮಾಡಿದ್ದರೆ ಯಾವುದೋ ದೇಶದಲ್ಲಿ ವಾಸವಾಗಬಹುದಿತ್ತು. ಆದರೆ ಸಮಾಜಕ್ಕೆ ಒಳ್ಳೆಯದನ್ನು ಮಾಡಬೇಕು ಎಂದು ಬಂದಿದ್ದೇನೆ' ಎಂದು ಹೇಳಿದ್ದಾರೆ.

Vachananand shree Apologies To CM B S Yediyurappa

ವಚನಾನಂದ ಶ್ರಿ ಅವರ ಬಗ್ಗೆ ರಾಜ್ಯದಲ್ಲಿ ಅನೇಕ ಮಠಾಧೀಶರು ಬಹಿರಂಗ ವಿರೋಧ ವ್ಯಕ್ತಪಡಿಸಿದ್ದಾರೆ. ಸ್ವತಃ ಪಂಚಮಸಾಲಿ ಸಮಾಜದ ಮುಖಂಡರೂ ಕೂಡ ಶ್ರೀಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹೀಗಾಗಿ ವಿವಾದಕ್ಕೆ ಸ್ವಾಮೀಜಿ ತೆರೆ ಎಳೆಯಲು ಮುಂದಾಗಿದ್ದಾರೆ.

English summary
Harihara Lingayath Mutt Vachanananda shree Apologies To CM B S Yediyurappa In Davanagere.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X