ಉಕ್ಕಡಗಾತ್ರಿ ಪವಾಡ ಪುರುಷ ಅಜ್ಜಯನ ಜಾತ್ರೆಗೆ ಬನ್ನಿ!
ದಾವಣಗೆರೆ, ಫೆಬ್ರವರಿ 28: ಹರಿಹರ ತಾಲೂಕಿನ ಮಲೆಬೆನ್ನೂರು ಪಟ್ಟಣದ ಸಮೀಪವಿರುವ ಉಕ್ಕಡಗಾತ್ರಿಯ ಪವಾಡ ಪುರುಷ ಅಜ್ಜಯನ ಮಹಾಶಿವರಾತ್ರಿ ಮಹೋತ್ಸವ ಆರಂಭವಾಗಿದ್ದು, ಒಂದು ವಾರ ಕಾಲಗಳ ವಿಜೃಂಭಣೆಯಿಂದ ಜರುಗಲಿದೆ.
ಗುರು ಕರಿಬಸವೇಶ್ವರ ಗದ್ದಿಗೆಯ ಪೂಜೆ ಹಾಗೂ ನಂದಿ ಧ್ವಜಾರೋಹಣ ಮೂಲಕ ಜಾತ್ರಾ ಮಹೋತ್ಸವಕ್ಕೆ ನಂದಿಗುಡಿ ಬೃಹನ್ಮಠದ ಸಿದ್ದ ರಾಮೇಶ್ವರ ಶಿವಾಚಾರ್ಯ ಸ್ವಾಮೀಜಿಗಳು ಚಾಲನೆ ನೀಡಿದರುಪ್ರತಿದಿನ ರಾತ್ರಿ ಜಾಗರಣೆ, ಭಜನೆ, ಕೀರ್ತನೆ ನಡೆಯಲಿದೆ.
ಸೋಮವಾರದಂದು ಗುರು ಕರಿಬಸವೇಶ್ವರ ಅಜ್ಜಯನ ರಥಕ್ಕೆ ನಂದಿಗುಡಿ ಶ್ರೀಗಳು ಪೂಜೆ ಸಲ್ಲಿಸಿ ಮಹಾರಥೋತ್ಸವಕ್ಕೆ ಚಾಲನೆ ನೀಡಿದರು.
* ಮಂಗಳವಾರ ಫೆ.28: ಜವಳ, ಹರಕೆ ಮತ್ತು ತುಲಾಭಾರ
* ಮಾರ್ಚ್ 1 ಹಾಗೂ 2 ರಂದು ಕಾಣಿಕೆ, ಜವಳ, ತುಲಾಭಾರ, ಬಹಿರಂಗ ಕುಸ್ತಿ ಪಂದ್ಯಗಳು
* ಮಾ. 3ರ ಶುಕ್ರವಾರ ಪೂಜೆ ನಂತರ ಪಳಾರ ಹಾಕಿಸಲಾಗುವುದು.
* ಮಾ.4ರ ಶನಿವಾರ ರಾತ್ರಿ ಅಜ್ಜಯ್ಯನ ಪಾಲಿಕೋತ್ಸವ
* ಮಾ.5ರಂದು ಜಾತ್ರಾ ಮಹೋತ್ಸವಕ್ಕೆ ತೆರೆ.
ಹೊರ ರಾಜ್ಯಗಳಿಂದ ಆಗಮಿಸುವ ಭಕ್ತಾದಿಗಳಿಗೆ ಊಟ ಹಾಗೂ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ.
ತಲುಪುದು ಹೇಗೆ: ದಾವಣಗೆರೆ, ಹರಿಹರ, ರಾಣೆಬೆನ್ನೂರು, ಹೊನ್ನಾಳಿ, ಹಿರೇಕೆರೂರು ಹಾಗೂ ತುಮ್ಮಿನಕಟೆಯಿಂದ ವಿಶೇಷ ಬಸ್ ವ್ಯವಸ್ಥೆ ಇದೆ.
(ಒನ್ಇಂಡಿಯಾ ಸುದ್ದಿ)