• search
  • Live TV
ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಹಿಳೆ ವಶೀಕರಣಕ್ಕೆ ಬಂದಿದ್ದ ಯುವಕರಿಗೆ ಉಚ್ಚಂಗಿಪುರ ಗ್ರಾಮಸ್ಥರಿಂದ ಗೂಸಾ

By ದಾವಣಗೆರೆ ಪ್ರತಿನಿಧಿ
|

ದಾವಣಗೆರೆ, ಸೆಪ್ಟೆಂಬರ್ 13: ಮಹಿಳೆಯನ್ನು ವಶೀಕರಣ ಮಾಡಲು ಬಂದ ಇಬ್ಬರಿಗೆ ಗ್ರಾಮಸ್ಥರು ಹಿಗ್ಗಾ ಮುಗ್ಗಾ ಗೂಸಾ ಕೊಟ್ಟ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನ ಉಚ್ವಂಗಿಪುರ ಗ್ರಾಮದಲ್ಲಿ ನಡೆದಿದೆ. ಉಚ್ವಂಗಿಪುರ ಗ್ರಾಮದ ದೇವಕ್ಕ ಎನ್ನುವರನ್ನು ವಶೀಕರಣ ಮಾಡಲು ಬಂದಿದ್ದೇವೆ ಎಂದು ಯುವಕರು ಹೇಳಿದ್ದಾರೆ.

ಅರಕಲಗೂಡಿನ ಅಂಗನವಾಡಿ ಬಳಿ ವಾಮಾಚಾರ; ಮಕ್ಕಳನ್ನು ಕಳಿಸಲು ಹಿಂದೇಟು

ಗ್ರಾಮಕ್ಕೆ ಶುಕ್ರವಾರ ಬಂದ ಇಬ್ಬರು, ಮಹಿಳೆಯನ್ನು ವಶೀಕರಣ ಮಾಡಲು ಮುಂದಾಗಿದ್ದಾರೆ. ವಿಷಯ ತಿಳಿದ ಗ್ರಾಮಸ್ಥರು ಯುವಕರನ್ನು ಹಿಡಿದು, ಹಿಗ್ಗಾ ಮುಗ್ಗಾ ಥಳಿಸಿದ್ದಾರೆ. ಗಾಮದಲ್ಲೇ ವ್ಯಕ್ತಿಯೊಬ್ಬರಿಂದ 70 ಸಾವಿರ ರುಪಾಯಿ ಪಡೆದು, ಮಹಿಳೆಯನ್ನು ವಶೀಕರಣ ‌ಮಾಡಲು ಬಂದಿದ್ದಾಗಿ ಹೇಳಿದ್ದಾರೆ. ಆದರೆ ವಶೀಕರಣ ಮಾಡಲು ಹಣ ನೀಡಿದ್ದ ವ್ಯಕ್ತಿಯ ಹೆಸರನ್ನು ಮಾತ್ರ ಬಾಯಿ ಬಿಡುತ್ತಿಲ್ಲ.

"ನಾವು ವಶೀಕರಣ ಮಾಡಲು ಬಂದಿದ್ದು, ಮುಂಗಡವಾಗಿ 20 ಸಾವಿರ ರುಪಾಯಿ ನೀಡಿದ್ದರು‌" ಎಂದು ಒಪ್ಪಿಕೊಂಡಿದ್ದಾರೆ. ಇನ್ನು ವಶೀಕರಣ ಮಾಡಲು ಬಂದವರು ದಾವಣಗೆರೆಯ ಗಡಿಯಾರ ಕಂಬದ ಬಳಿ ವಾಸವಾಗಿದ್ದೇವೆ ಎಂದು ಹೇಳುತ್ತಿದ್ದು, ಇಬ್ಬರನ್ನು ಬಿಳಚೋಡು ಪೊಲೀಸರಿಗೆ ಗ್ರಾಮಸ್ಥರು ಒಪ್ಪಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು, ತನಿಖೆ ನಡೆಸುತ್ತಿದ್ದಾರೆ.

English summary
Two youths beaten and handed over to police by Ucchangipura villagers in Davanagere. Here is the details of the story.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X