ತಮ್ಮನ್ನು ಹೊಗಳಲಿಲ್ಲ ಎಂದು ನಿಂದಿಸಿದ ಶಾಸಕರ ಮಗ; ಆತ್ಮಹತ್ಯೆಗೆ ಯತ್ನಿಸಿದ ಶಿಕ್ಷಕ

ದಾವಣಗೆರೆ, ನವೆಂಬರ್ 19: ಶಾಸಕರ ಮಗ ಜನರ ಮುಂದೆ ತಮ್ಮನ್ನು ನಿಂದಿಸಿದ್ದಾರೆ ಎಂದು ಆರೋಪಿಸಿ ಸರ್ಕಾರಿ ಶಾಲಾ ಶಿಕ್ಷಕ ಹಾಗೂ ಮಾಜಿ ನೌಕರರ ಸಂಘದ ಅಧ್ಯಕ್ಷರೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ದಾವಣಗೆರೆಯ ಚನ್ನಗಿರಿ ತಾಲೂಕಿನಲ್ಲಿ ‌ನಡೆದಿದೆ.

ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪನವರ ಪುತ್ರ ಮಲ್ಲಿಕಾರ್ಜುನ ಅವರ ಮೇಲೆ‌ ಆರೋಪವಿದ್ದು, ಅಧಿಕಾರ ಸ್ವೀಕಾರ ಸಮಾರಂಭ ಹಾಗೂ ಕನ್ನಡ ರಾಜ್ಯೋತ್ಸವದಲ್ಲಿ ತಮ್ಮನ್ನು ಹೊಗಳಲಿಲ್ಲ ಎಂದು ಕೋಪಗೊಂಡು ಜನರ ಮುಂದೆ ನಿಂದಿಸಿದ್ದಾರೆ ಎನ್ನಲಾಗಿದೆ. ಇದರಿಂದ ಮನನೊಂದು ಶಿಕ್ಷಕ ಹಾಗೂ ಮಾಜಿ ತಾಲ್ಲೂಕು ಸರ್ಕಾರಿ ನೌಕರರ ಅಧ್ಯಕ್ಷ ಎಚ್ ಡಿ ನಾಗರಾಜ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ವಿಷ ಸೇವನೆ ಮಾಡಿದ ಶಿಕ್ಷಕ‌ ನಾಗರಾಜ್ ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Teacher Attempted Suicide For Insult From Mla Son In Channagiri

ಇತ್ತ, ನಮ್ಮ‌ ಮೇಲೆ ಸುಳ್ಳು ಆರೋಪ‌ ಮಾಡುತ್ತಿದ್ದಾರೆ. ಯಾವ ಕಾರ್ಯಕ್ರಮದ ಬಗ್ಗೆ ಕೂಡ ನಾವು ಶಿಕ್ಷಕರನ್ನು ನಿಂದಿಸಿಲ್ಲ. ನಮ್ಮ ಮಾಡಾಳ್ ಗ್ರಾಮದ ಶಿಕ್ಷಕರಾಗಿದ್ದರಿಂದ ಸರಿಯಾಗಿ ಶಾಲೆಗೆ ಬರ್ತಾಇಲ್ಲ.‌ ಹೀಗೆ ಮಾಡಿದ್ರೆ ಮಕ್ಕಳ ಭವಿಷ್ಯ ಏನಾಗುತ್ತದೆ ಎಂದು ಕೇಳಿದ್ದಕ್ಕೆ ಹೀಗೆ ಸುಳ್ಳು ಆರೋಪ ‌ಮಾಡುತ್ತಿದ್ದಾರೆ, ಇದರ ಹಿಂದೆ ರಾಜಕೀಯ ದುರುದ್ದೇಶವಿದೆ ಎಂದು ಶಾಸಕರ ಮಗ ಮಲ್ಲಿಕಾರ್ಜುನ್ ಸ್ಪಷ್ಟಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+