ಹಬ್ಬದ ಖರೀದಿ ಭರಾಟೆಯಲ್ಲಿ ನಿಯಮ ಮರೆತವರಿಗೆ ಬಿತ್ತು ದಂಡ
ದಾವಣಗೆರೆ, ನವೆಂಬರ್ 11: ದೀಪಾವಳಿ ಹಬ್ಬದ ಖರೀದಿ ಭರದಲ್ಲಿ ಜನರು ಮಾಸ್ಕ್ ಹಾಕಿಕೊಳ್ಳದೆ ವ್ಯಾಪಾರ ಮಾಡುತ್ತಿದ್ದು, ತಹಶೀಲ್ದಾರ್ ಗಿರೀಶ್ ಅವರಿಗೆ ದಂಡ ಹಾಕುವ ಮೂಲಕ ಶಾಕ್ ನೀಡಿದ್ದಾರೆ.
ಕಾಳಿಕಾದೇವಿ ರಸ್ತೆಯಲ್ಲಿರುವ ಬಿ.ಎಸ್. ಚನ್ನಬಸಪ್ಪ ಅಂಡ್ ಸನ್ಸ್ ಜವಳಿ ಅಂಗಡಿ ಸೇರಿದಂತೆ ಹಲವು ಜವಳಿ ಅಂಗಡಿಗಳ ಮೇಲೆ ತಹಶೀಲ್ದಾರ್ ತಂಡ ದಾಳಿ ನಡೆಸಿದ್ದು, ಮಾಸ್ಕ್ ಇಲ್ಲದೆ ಓಡಾಡುತ್ತಿದ್ದವರಿಗೆ ದಂಡ ವಿಧಿಸಿದೆ.
ದೀಪಾವಳಿ ಹಬ್ಬದ ಹಿನ್ನೆಲೆ ಜವಳಿ ಅಂಗಡಿಯಲ್ಲಿ ಸಾಕಷ್ಟು ಜನರು ಮಾಸ್ಕ್ ಇಲ್ಲದೆ ಬಟ್ಟೆ ಖರೀದಿ ಮಾಡುತ್ತಿದ್ದು, ತಹಶೀಲ್ದಾರ್ ದಾಳಿ ನಡೆಸುತ್ತಿದ್ದಂತೆ ಮಾಸ್ಕ್ ತೆಗೆದು ಹಾಕಿಕೊಳ್ಳಲು ಆರಂಭಿಸಿದರು. ಈ ಸಂದರ್ಭ ಮಾಸ್ಕ್ ಹಾಕಿಕೊಳ್ಳದವರಿಗೆ ದಂಡ ವಿಧಿಸಿದ್ದು, ಕೋವಿಡ್ ನಿಯಮವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ಅಂಗಡಿ ಮಾಲೀಕರಿಗೆ ಸೂಚನೆ ನೀಡಿದರು.

ಈ ಸಂದರ್ಭ ಸಾರ್ವಜನಿಕರು ಹಾಗೂ ತಂಡದ ನಡುವೆ ವಾಗ್ವಾದವೂ ನಡೆಯಿತು. ಪೊಲೀಸರು ಅವರಿಂದ ದಂಡ ವಸೂಲಿ ಮಾಡಿ, ಜವಳಿ ಅಂಗಡಿಯ ಸಿಬ್ಬಂದಿಗೆ ಕೋವಿಡ್ ಟೆಸ್ಟ್ ಮಾಡಿಸಲು ಕ್ಯಾಂಪ್ ಕೂಡ ಹಾಕಿಸಿದರು.












Click it and Unblock the Notifications