ನಾನು ಯಾವ ಬಾಂಬ್ ಹಾಕಿಲ್ಲ, ಸಿಎಂ ಜೊತೆಗಿನ ಚರ್ಚೆ ಸೀಕ್ರೆಟ್, ಬಹಿರಂಗವಾಗಿ ಹೇಳಲು ಆಗಲ್ಲ: ಶಾಮನೂರು ಶಿವಶಂಕರಪ್ಪ

ದಾವಣಗೆರೆ, ಅಕ್ಟೋಬರ್‌, 06: ನಾನು ಯಾವ ಬಾಂಬ್ ಹಾಕಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಯಾವಾಗ ಮಾತನಾಡುತ್ತೇನೆ ಎಂದು ಹೇಳಲು ಆಗದು. ನೀವು ಸಿದ್ದರಾಮಯ್ಯ ಅವರನ್ನೇ ಕೇಳಿ. ಸಿದ್ದರಾಮಯ್ಯರ ಜೊತೆ ಮಾತನಾಡಿದ್ದರೂ ಅದೂ ಸೀಕ್ರೇಟ್ ಆಗಿರುತ್ತದೆ. ಅದನ್ನು ಬಹಿರಂಗವಾಗಿ ಹೇಳಲು ಆಗದು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರಾಧ್ಯಕ್ಷರೂ ಆದ ಕಾಂಗ್ರೆಸ್‌ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ದಾವಣಗೆರೆಯಲ್ಲಿ ಹೇಳಿದ್ದಾರೆ.

ಬಾಪೂಜಿ ಎಂಬಿಎ ಗ್ರೌಂಟ್‌ನಲ್ಲಿ ಆಯೋಜಿಸಿದ್ದ ವೀರಶೈವ ಲಿಂಗಾಯತ ಮಹಾಸಭಾದ 24ನೇ ಅಧಿವೇಶನದ ಪೂರ್ವಭಾವಿ ಸಭೆಯ ಬಳಿಕ ಮಾಧ್ಯಮದವರ ಜೊತೆ ಅವರು ಮಾತನಾಡಿದರು. ನಾನು ಇದುವರೆಗೆ ಯಾವ ಬಾಂಬ್ ಹಾಕಲು ಹೋಗಿಲ್ಲ. ಹೈಕಮಾಂಟ್‌ನಿಂದ ನನಗೆ ಯಾವ ಸೂಚನೆಯೂ ಇಲ್ಲ. ಯಾವ ಹೈಕಮಾಂಡ್ ಇಲ್ಲ, ಏನೂ ಇಲ್ಲ. ಮಾತುಕತೆ ಯಾವ ದಿನ ನಡೆಸುತ್ತೀರಾ ಎಂಬುದನ್ನು ಸಿಎಂ ಅವರನ್ನೇ ಕೇಳಿ. ನನ್ನನ್ನು ಕೇಳಲು ಹೋಗಬೇಡಿ ಎಂದು ಹೇಳಿದರು.

shamanur-shivashankarappa

ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ, ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರೂ ಆದ ನಿಮ್ಮ ಪುತ್ರ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಲಿಂಗಾಯತ ಅಧಿಕಾರಿಗಳ ಕಡೆಗಣನೆ ಆಗಿಲ್ಲ. ಸಮಸ್ಯೆ ಬಗೆಹರಿದಿದೆ, ಸಿದ್ದರಾಮಯ್ಯರ ಜೊತೆ ತಂದೆ ಮಾತನಾಡುತ್ತಾರೆ, ಮುಗಿದ ಅಧ್ಯಾಯ ಎಂದು ಹೇಳಿದ್ದಾರಲ್ವಾ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಶಾಮನೂರು ಶಿವಶಂಕರಪ್ಪ ಅವರು, ಅವರು ಹೇಳಿದ್ದಾರಲ್ವಾ. ಅವರು ಹೇಳಿದ ಮೇಲೆ ಮುಗಿಯಿತು. ಮತ್ತೇನೂ ಇಲ್ಲ ಎಂದು ತಿಳಿಸಿದರು.

ವೀರಶೈವ ಲಿಂಗಾಯತ ಮಹಾಸಭಾದ 24ನೇ ಅಧಿವೇಶನವು ಶಕ್ತಿ ಪ್ರದರ್ಶನ ಮಾಡುವ ವೇದಿಕೆ ಅಲ್ಲ. ಹತ್ತು ಇಲ್ಲವೇ, ಇಪ್ಪತ್ತು ಲಕ್ಷ ಜನರು ಸೇರಿದರೆ ಅದು ಶಕ್ತಿ ಪ್ರದರ್ಶನ ಆಗುತ್ತದೆ. ಲಕ್ಷಕ್ಕೂ ಹೆಚ್ಚು ಜನರು ಪಾಲ್ಗೊಂಡರೆ ಅದು ಹೇಗೆ ಶಕ್ತಿ ಪ್ರದರ್ಶನ ಆಗುತ್ತದೆ ಎಂದು ಪ್ರಶ್ನಿಸಿದರು.

ಡಿಸೆಂಬರ್ 23 ಮತ್ತು 24ರಂದು ದಾವಣಗೆರೆಯಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ 24ನೇ ಅಧಿವೇಶನ ನಡೆಯಲಿದೆ. ಲಕ್ಷಾಂತರ ಜನರು ಭಾಗವಹಿಸಲಿದ್ದಾರೆ. ಸಮಾಜದ ಬಂಧುಗಳು ಬರುತ್ತಾರೆ ಎಂದು ಶಾಮನೂರು ಶಿವಶಂಕರಪ್ಪ ಹೇಳಿದರು.

ಕಾವಾಡಿಗರಹಟ್ಟಿಗೆ ಸಿಎಂ ಭೇಟಿ

ಇಂದು ಕವಾಡಿಗರಹಟ್ಟಿಗೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿದ್ದು, ಈ ವೇಳೆ ಮಾತನಾಡಿದ ಅವರು, ಕವಾಡಿಗರಹಟ್ಟಿಯಲ್ಲಿ ಆಗಸ್ಟ್‌ 1ರಂದು ಕಲುಷಿತ ನೀರು ಸೇವಿಸಿ 200ಕ್ಕೂ ಅಧಿಕ ಮಂದಿ ಅಸ್ವಸ್ಥರಾಗಿದ್ದರು. ಇಲ್ಲಿ ಎಲ್ಲರೂ ಬಡತನದಲ್ಲಿ ಇದ್ದವರು. ಈ ವಿಷಯ ತಿಳಿದು ಎಲ್ಲರಿಗೂ ಫೋನ್ ಮಾಡಿದ್ದೆ ಎಂದರು.

ಶುದ್ದ ಕುಡಿಯುವ ನೀರು ನೀಡುವುದು ಸರ್ಕಾರದ ಜವಬ್ದಾರಿ. ಕೂಡಲೇ ಡಿಸಿ ಶಾಸಕರು, ಸಚಿವರು ಸ್ಥಳಕ್ಕೆ ಬಂದು ಸಮಸ್ಯೆ ಆಲಿಸಿದ್ದಾರೆ. 6 ಮಂದಿ ಕಲುಷಿತ ನೀರು ಕುಡಿದು ಮೃತಪಟ್ಟಿದ್ದಾರೆ. ಶುದ್ದ ನೀರು ನೀಡಲು ಆಗಿಲ್ಲ ಎಂಬುದು ಊಹಿಸಲು ಆಗಲ್ಲ. ಸರ್ಕಾರದಿಂದ ಪರಿಹಾರ ಘೋಷಣೆಗೆ ಸೂಚನೆ ನೀಡಿದ್ದೆ. ನಗರಸಭೆಯಿಂದ ಕೂಡಾ ಪರಿಹಾರ ನೀಡಿದ್ದೇವೆ. ಡಿಸಿ ಜೊತೆಗೆ ಸಭೆ ನಡೆಸಿ ಕೂಡಲೇ ಕುಡಿಯುವ ನೀರು ಸಮಸ್ಯೆ ಆಗದಂತೆ ಸೂಚನೆ ನೀಡಿದ್ದೇನೆ. ಇನ್ನುಮುಂದೆ ಕಲುಷಿತ ನೀರು ಕೊಟ್ಟರೆ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಆಗುತ್ತದೆ ಎಂದರು.

ಕಲು‍‍ಷಿತ ನೀರು ಸೇವನೆ ಮಾಡಿ 6 ಜನ ಮೃತಪಟ್ಟಿದ್ದು, ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಬಯಸುವೆ. ಅಲ್ಲದೆ ಮೃತರ 3 ಹೆಕ್ಟೇರ್‌ ಜಮೀನು ಹಾಗೂ ಅಭಿವೃದ್ಧಿಗಾಗಿ 4 ಕೋಟಿ ಹಣ ನೀಡಿದ್ದೇವೆ. ಉದ್ಯೋಗವನ್ನೂ ನೀಡುತ್ತೇವೆ. ಹಾಗೂ ಮನೆಯನ್ನೂ ಕೂಡ ನಾವೇ ಕಟ್ಟಿಸುತ್ತೇವೆ. ಒಟ್ಟಿನಲ್ಲಿ ಮೃತರ ಕುಟುಂಬದ ಜವಾಬ್ದಾರಿಯನ್ನು ಸರ್ಕಾರ ವಹಿಸಿಕೊಳ್ಳುತ್ತದೆ ಎಂದರು.

ರಾಜ್ಯದಲ್ಲಿ ಈ ಬಾರಿ ಬರಗಾಲ ಆವರಿಸಿದೆ. 122 ವರ್ಷಗಳ ಬಳಿಕ ಇಂತಹ ಬರಗಾಲ ಬಂದಿದೆ. 195 ತಾಲೂಕುಗಳನ್ನು ಬರ ಪೀಡಿತ ತಾಲೂಕುಗಳೆಂದು ಘೋಷಣೆ ಮಾಡಿದ್ದೇವೆ. ಇನ್ನೊಂದು ಸುತ್ತಿನ ಸಭೆಯನ್ನೂ ಕೂಡ ಮಾಡುತ್ತಿದ್ದೇವೆ. ರಾಜ್ಯದಲ್ಲಿ 30 ಕೋಟಿ ನಷ್ಟ ಆಗಿದೆ. ಎನ್‌ಡಿಆರ್‌ಎಫ್‌ ನಾರ್ಮ್ಸ್ ಪ್ರಕಾರ ಪರಿಹಾರಕ್ಕೆ ಕೇಂದ್ರಕ್ಕೆ ಪತ್ರ ಬರೆದಿದ್ದಿದ್ದು, ಕೇಂದ್ರದಿಂದ ರಾಜ್ಯಕ್ಕೆ ತಜ್ಞರ ತಂಡ ಆಗಮಿಸಿದೆ ಎಂದರು.

ಅನೇಕ ರಾಜ್ಯಗಳಲ್ಲಿ ಈ ಬಾರಿ ಮಳೆ ಕೈಕೊಟ್ಟಿದ್ದು, ದೇಶದಲ್ಲೇ ಬರಗಾಲ ಆವರಿಸಿದೆ. ಆದ್ದರಿಂದ ರಾಜ್ಯದಲ್ಲಿ ಜನ ಗುಳೆ ಹೋಗದಂತೆ ಸಭೆ ನಡೆಸಿ ಸೂಚನೆ ನೀಡಿದ್ದೇವೆ. ಅನ್ನ ಭಾಗ್ಯ ಅಕ್ಕಿ ನೀಡಿದ್ದೇವೆ, ಗೃಹ ಜ್ಯೋತಿ ನೀಡಿದ್ದೇವೆ. 1 ಕೋಟಿ 10 ಲಕ್ಷ ಜನರಿಗೆ 2 ಸಾವಿರ ಹಣ ಹಾಕಿದ್ದೇವೆ. ಇನ್ನೂ ಕೆಲವರಿಗೆ ಬ್ಯಾಂಕ್ ಸಮಸ್ಯೆಯಿಂದ ಹಣ ಬಂದಿಲ್ಲ. ಹಾಗೆಯೇ ಶಕ್ತಿ ಯೋಜನೆ ಮೂಲಕ ಬಸ್ ಪ್ರಯಾಣವನ್ನು ಉಚಿತವಾಗಿ ನೀಡಿದ್ದೇವೆ. ಈ ಯೋಜನೆಯಿಂದ ರಾಜ್ಯದಲ್ಲಿ 50-60 ಲಕ್ಷ ಮಹಿಳೆಯರು ಒಂದು ದಿನಕ್ಕೆ ಉಚಿತ ಪ್ರಯಾಣ ಮಾಡುತ್ತಿದ್ದಾರೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+