ಆರೋಗ್ಯ ಸಚಿವರು ಬಂದಾಗಲೇ ಪೊಲೀಸರ ಅಮಾನವೀಯ ವರ್ತನೆ

ದಾವಣಗೆರೆ, ಮೇ 21; ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ವೃದ್ಧ ಮತ್ತು ಆತನ ಅಣ್ಣನ ಮಗನನ್ನು ಪೊಲೀಸರು ಎಳೆದುಕೊಂಡು ಹೋಗಿ ಹೊರಹಾಕಿದ ಅಮಾನವೀಯ ಘಟನೆ ನಡೆದಿದೆ. ಈ ಸಂದರ್ಭದಲ್ಲಿ ಆರೋಗ್ಯ ಸಚಿವ ಡಾ. ಸುಧಾಕರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಆಸ್ಪತ್ರೆಯಲ್ಲಿದ್ದರು.

Recommended Video

      Dr sudhakar- ಆರೋಗ್ಯ ಸಚಿವರ ಮುಂದೆ , ಬಡವರ ಮೇಲೆ ಹಲ್ಲೆ !! | Oneindia Kannada

      ದಾವಣಗೆರೆ ತಾಲೂಕಿನ ಅಗಸನಕಟ್ಟೆಯ ಬಸವರಾಜಯ್ಯ ಎಂಬುವವರು ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದರು. ಆಸ್ಪತ್ರೆಗೆ ಬೆಳಗ್ಗೆ ಆರೂವರೆ ಗಂಟೆಗೆ ಕರೆದುಕೊಂಡು ಬಂದಿದ್ದರು. ಆದರೆ ಬೆಡ್ ನೀಡಿಲ್ಲ, ಚಿಕಿತ್ಸೆಯೂ ಕೊಡಲಿಲ್ಲ.

      ಆಸ್ಪತ್ರೆಗೆ ಆಗಮಿಸಿದರೂ ಕೋವಿಡ್ ಟೆಸ್ಟ್ ಮಾಡಿಲ್ಲ. ಯಾರೂ ನೋಡಿಕೊಳ್ಳುವವರೇ ಇಲ್ಲ ಎಂದು ರೋಗಿಯ ಸಹೋದರ ಷಣ್ಮುಖಪ್ಪ ಹಾಗೂ ಅವರ ಅಣ್ಣನ ಮಗ ಕಿರಣ್ ಕುಮಾರ್ ಆರೋಪಿಸಿದ್ದಾರೆ. ಸಚಿವರಾದ ಸುಧಾಕರ್ ಹಾಗೂ ಭೈರತಿ ಬಸವರಾಜ್ ಭೇಟಿ ಮಾಡಿ ಗೋಳು ಹೇಳಿಕೊಳ್ಳಲು ಷಣ್ಮುಖಯ್ಯ ಹಾಗೂ ಕಿರಣ್ ಪ್ರಯತ್ನಿಸಿದರು.

      Police Not Allowed People To Meet Health Minister

      ಆದರೆ ಪೊಲೀಸರು ಬಲಪ್ರಯೋಗದಿಂದ ಇಬ್ಬರನ್ನು ಹೊರ ಹಾಕಿದರು. ಈ ವೇಳೆ ಪೊಲೀಸರ ಜೊತೆ ಮಾತಿನ ಚಕಮಕಿಯೂ ನಡೆಯಿತು‌. ಆಸ್ಪತ್ರೆಯ ಆವರಣದಲ್ಲಿ ಪೊಲೀಸರ ಅಮಾನವೀಯ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಲಾಯಿತು.

      ತೀವ್ರ ಉಸಿರಾಟದ ತೊಂದರೆ, ಕಫದಿಂದ ಬಳಲುತ್ತಿದ್ದ ಬಸವರಾಜಯ್ಯ ಸ್ಯಾಚುರೇಷನ್ ಕಡಿಮೆ ಇದ್ದು, ರೋಗಿಗಳಿಗೆ ಸರಿಯಾದ ಚಿಕಿತ್ಸೆ ನೀಡದೇ ಸಾಯಿಸುತ್ತಿದ್ದಾರೆ. ಸಚಿವರನ್ನು ಭೇಟಿಯಾಗಲು ಬಿಡುತ್ತಿಲ್ಲ ಎಂದು ಪ್ರಶ್ನಿಸಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+