ಸೋಲಿನಿಂದ ರೇಣುಕಾಚಾರ್ಯ ಭಾವುಕ, ರಾಜಕೀಯ ನಿವೃತ್ತಿ
ದಾವಣಗೆರೆ, ಮೇ 14; ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ ಘೋಷಣೆಯಾಗಿದೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ಬಿಜೆಪಿಯ ಎಂ. ಪಿ. ರೇಣುಕಾಚಾರ್ಯ ಸೋಲು ಅನುಭವಿಸಿದ್ದಾರೆ. ಕಾಂಗ್ರೆಸ್‌ನ ಡಿ. ಜಿ. ಶಾಂತನಗೌಡ 92392 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ.
ಶನಿವಾರ ಹೊನ್ನಾಳಿ ಕ್ಷೇತ್ರ ಮತ ಎಣಿಕೆ ನಡೆಯಿತು. ಬಿಜೆಪಿಯ ಎಂ. ಪಿ. ರೇಣುಕಾಚಾರ್ಯ 74832 ಮತಗಳನ್ನು ಪಡೆದು ಸೋಲು ಅನುಭವಿಸಿದರು. ಚುನಾವಣಾ ಫಲಿತಾಂಶ ಪ್ರಕಟವಾದ ಬಳಿಕ ಅಪಾರ ಸಂಖ್ಯೆಯಲ್ಲಿ ಬೆಂಬಲಿಗರು ಅವರ ಹೊನ್ನಾಳಿ ನಿವಾಸದ ಮುಂದೆ ಜವಾವಣೆಗೊಂಡರು.

ಅಭಿಮಾನಿಗಳು, ಕಾರ್ಯಕರ್ತರನ್ನು ಕಂಡು ಎಂ. ಪಿ. ರೇಣುಕಾಚಾರ್ಯ ಭಾವುಕರಾದರು. "ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಮಾಡಿದರೂ, ಕೋವಿಡ್ ಸಂದರ್ಭದಲ್ಲಿ ಜೀವದ ಹಂಗು ತೊರೆದು ದುಡಿದರೂ ಜನರು ಸೋಲಿಸಿದರು" ಎಂದರು.
ರಾಜಕೀಯ ನಿವೃತ್ತಿ ಘೋಷಣೆ; ಮಾಧ್ಯಮಗಳ ಜೊತೆ ಮಾತನಾಡಿದ ಎಂ. ಪಿ. ರೇಣುಕಾಚಾರ್ಯ, "ಅಭಿವೃದ್ಧಿ ಕೆಲಸ, ಕೋವಿಡ್ ಸಂದರ್ಭದಲ್ಲಿ ಜೀವದ ಹಂಗು ತೊರೆದರೂ ಜನರು ಸೋಲಿಸಿದರು. ಮುಂದಿನ ದಿನಗಳಲ್ಲಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ರಾಜಕೀಯ ನಿವೃತ್ತಿ ಪಡೆದು, ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ಅವರ ಪರವಾಗಿ ಕೆಲಸ ಮಾಡುತ್ತೇನೆ. ಯಾವುದೇ ಕಾರಣಕ್ಕೂ ಚುನಾವಣೆಗೆ ಬರುವುದಿಲ್ಲ" ಎಂದರು.

ಒಂದೇ ಒಂದು ಸುತ್ತಿನಲ್ಲಿಯೂ ಮುನ್ನಡೆ ಕಾಯ್ದುಕೊಳ್ಳದ ಬಗ್ಗೆ ಎಂ. ಪಿ. ರೇಣುಕಾಚಾರ್ಯ ಬೇಸರ ವ್ಯಕ್ತಪಡಿಸಿದ್ದಾರೆ. "ನಾನು ಕ್ಷೇತ್ರದ ಜನರಿಗಾಗಿ ಹಗಲಿರುಳು ಕೆಲಸ ಮಾಡಿದೆ. ಆದರೂ ರೀತಿ ಸೋಲು ಆಯ್ತಲ್ಲ" ಎಂದು ರೇಣುಕಾಚಾರ್ಯ ಬೇಸರ ವ್ಯಕ್ತಪಡಿಸಿದರು.
ಹೊನ್ನಾಳಿ ಕ್ಷೇತ್ರದ ಮತ ಎಣಿಕೆಯ ಮೊದಲ ಸುತ್ತಿನಿಂದಲೂ ಎಂ. ಪಿ. ರೇಣುಕಾಚಾರ್ಯ ಹಿನ್ನಡೆ ಅನುಭವಿಸಿದರು. ಮೊದಲ ಸುತ್ತಿನಲ್ಲಿ ಎಂ. ಪಿ. ರೇಣುಕಾಚಾರ್ಯ 3713 ಮತಗಳನ್ನು ಪಡೆದರೆ, ಡಿ. ಜಿ. ಶಾಂತನಗೌಡ 5185 ಮತಗಳನ್ನು ಪಡೆದರು.
5ನೇ ಸುತ್ತಿನಲ್ಲಿ ಎಂ. ಪಿ. ರೇಣುಕಾಚಾರ್ಯ 19690 ಮತಗಳನ್ನು ಪಡೆದರೆ, ಡಿ. ಜಿ. ಶಾಂತನಗೌಡ 26503 ಮತಗಳನ್ನು ಪಡೆದರು. 10ನೇ ಸುತ್ತಿನಲ್ಲಿ ರೇಣುಕಾರ್ಯ ಪಡೆದ ಮತಗಳು 39459, ಡಿ. ಜಿ. ಶಾಂತನಗೌಡ ಪಡೆದ ಮತಗಳು 53163.
15ನೇ ಸುತ್ತಿನಲ್ಲಿ ಎಂ. ಪಿ. ರೇಣುಕಾಚಾರ್ಯ 62152 ಮತಗಳನ್ನು ಪಡೆದರು. ಡಿ. ಜಿ. ಶಾಂತನಗೌಡ 79250 ಮತಗಳನ್ನು ಪಡೆದರು. ಕೊನೆಯ ಸುತ್ತಾದ 18ರಲ್ಲಿ ಎಂ. ಪಿ. ರೇಣುಕಾಚಾರ್ಯ 73649 ಮತಗಳನ್ನು ಪಡೆದರು. ಡಿ. ಜಿ. ಶಾಂತನಗೌಡ 90992 ಮತಗಳನ್ನು ಪಡೆದು ಗೆಲುವು ಸಾಧಿಸಿದರು. ಹೊನ್ನಾಳಿಯ ಹಾಲಿ ಶಾಸಕರಾಗಿದ್ದ ಎಂ. ಪಿ. ರೇಣುಕಾಚಾರ್ಯ 17343 ಮತಗಳ ಅಂತರದಿಂದ ಸೋಲು ಕಂಡರು.
ಅಭಿಮಾನಿಗಳು ಮತ್ತು ಕಾರ್ಯಕರ್ತರು ಎಂ. ಪಿ. ರೇಣುಕಾಚಾರ್ಯರನ್ನು ಸಮಾಧಾನ ಪಡಿಸಿದರು. ಹರಿಹರದ ಶಾಸಕ ಬಿ. ಪಿ. ಹರೀಶ್ ಸಹ ರೇಣುಕಾಚಾರ್ಯ ನಿವಾಸಕ್ಕೆ ಆಗಮಿಸಿ ಅವರನ್ನು ಸಮಾಧಾನ ಪಡಿಸಿದರು. ಚುನಾವಣೆ ಸೋಲು ಅವರನ್ನು ಕಂಗೆಡಿಸಿದೆ.
ಗೆದ್ದಿರುವುದು ಒಂದೇ ಸೀಟು; ದಾವಣಗೆರೆ ಜಿಲ್ಲೆಯ 6 ಕ್ಷೇತ್ರಗಳಲ್ಲಿ ಕಾಂಗ್ರೆಸ್ 5 ಕ್ಷೇತ್ರಗಳಲ್ಲಿ ಜಯಗಳಿಸಿದೆ. ಬಿಜೆಪಿಯು ಹರಿಹರ ಕ್ಷೇತ್ರದಲ್ಲಿ ಮಾತ್ರ ಜಯಗಳಿಸಿದೆ. ಹರಿಹರದಲ್ಲಿ ಬಿ. ಪಿ. ಹರೀಶ್ 3800 ಮತಗಳ ಅಂತರದಿಂದ ಜಯಗಳಿಸಿದರು.
ಜಿಲ್ಲೆಯಲ್ಲಿ ದಾವಣಗೆರೆ ಉತ್ತರ ಕ್ಷೇತ್ರದಲ್ಲಿ ಎಸ್. ಎಸ್. ಮಲ್ಲಿಕಾರ್ಜುನ್, ದಕ್ಷಿಣ ಕ್ಷೇತ್ರದಲ್ಲಿ ಶಾಮನೂರು ಶಿವಶಂಕರಪ್ಪ, ಜಗಳೂರು ಕ್ಷೇತ್ರದಲ್ಲಿ ದೇವೇಂದ್ರಪ್ಪ, ಹೊನ್ನಾಳಿಯಲ್ಲಿ ಡಿ. ಜಿ. ಶಾಂತನಗೌಡ, ಮಾಯಕೊಂಡ ಕ್ಷೇತ್ರದಲ್ಲಿ ಬಸವಂತಪ್ಪ ಅಲಿಯಾಸ್ ಬಸವರಾಜ್, ಚನ್ನಗಿರಿಯಿಂದ ಬಸವರಾಜ್ ಶಿವಗಂಗಾ ಜಯಗಳಿಸಿದ್ದಾರೆ.
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಆತಂಕ, ಭಾರತದ ಮೇಲಾಗುವ ಪರಿಣಾಮವೇನು? -
Bengaluru House Rent: ಬೆಂಗಳೂರಿನ ಪ್ರೈಮ್ ಏರಿಯಾದಲ್ಲೂ ನಾನ್ವೆಜ್ ಪ್ರಿಯರಿಗೆ ಮನೆ ಸಿಗ್ತಿಲ್ಲ, ಸೋಷಿಯಲ್ ಮೀಡಿಯಾ ಚರ್ಚೆ -
Prakash Raj: ನಾಸ್ತಿಕನಾದರೂ ತಾಯಿಯ ನಂಬಿಕೆಗೆ ಗೌರವ ಕೊಟ್ಟು; ಕ್ರೈಸ್ತ ಧರ್ಮದ ಸಂಪ್ರದಾಯ ಪಾಲನೆ: ನಟ ಪ್ರಕಾಶ್ ರಾಜ್ -
Education: CBSE 9 ಮತ್ತು 10ನೇ ತರಗತಿಯ ಹೊಸ ಪಠ್ಯಕ್ರಮ ಇಂದು ಬಿಡುಗಡೆ -
ಮುಂದಿನ 2 ರಿಂದ 3 ವಾರಗಳಲ್ಲಿ ಇರಾನ್ ಮೇಲೆ ಅತ್ಯಂತ ಭೀಕರ ದಾಳಿ: ಟ್ರಂಪ್ ಎಚ್ಚರಿಕೆ












Click it and Unblock the Notifications