Breaking: ಚಿಕನ್ ಸಾಂಬಾರ್ ಮಾಡಿಲ್ಲವೆಂದು ಪತ್ನಿಯನ್ನು ಕೊಂದ ಪತಿ...!

ದಾವಣಗೆರೆ, ಜೂನ್ 9: ಮದ್ಯವ್ಯಸನಿಯೊಬ್ಬ ಚಿಕನ್ ಸಾಂಬಾರ್ ಮಾಡಲಿಲ್ಲ ಎಂಬ ಕಾರಣಕ್ಕೆ ತನ್ನ ಪತ್ನಿಯನ್ನು ಕೊಚ್ಚಿ ಕೊಲೆ ಮಾಡಿರುವ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಬನ್ನಿಕೋಡು ಗ್ರಾಮದಲ್ಲಿ ನಡೆದಿದೆ‌.

28 ವರ್ಷದ ಶೀಲಾ ಎಂಬುವವರೆ ಕೊಲೆಯಾದ ಮಹಿಳೆ. ಆಕೆಯ ಗಂಡ ಕೆಂಚಪ್ಪ ಕೊಲೆ ಮಾಡಿರು ಕೀಚಕ ಪತಿ. ಪತ್ನಿಯನ್ನು ಹತ್ಯೆ ಮಾಡಿದ್ದಲ್ಲದೆ ಅದೇ ಚಾಕು ಹಿಡಿದು ಸೀದಾ ಪೊಲೀಸ್ ಠಾಣಗೆ ಹೋಗಿ ಶರಣಾಗಿದ್ದಾನೆ.

ಕಳೆದ 9 ವರ್ಷಗಳ ಹಿಂದೆ ಪ್ರೀತಿ ಮಾಡಿ ಕೆಂಚಪ್ಪನು ಶೀಲಾಳನ್ನು ಮದುವೆಯಾಗಿದ್ದ. ಇದು ಎರಡನೇ ವಿವಾಹವಾಗಿತ್ತು. ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಮಧ್ಯವೆಸನಿಯಾಗಿದ್ದ ಕೆಂಚಪ್ಪ ಕುಡಿದು ಬಂದು ಗಲಾಟೆ ಮಾಡುತ್ತಿದ್ದ. ಬುಧವಾರವೂ ರಾತ್ರಿ ಕುಡಿದು ಮನೆಗೆ ಬಂದಿದ್ದ ಕೆಂಚಪ್ಪ, ಬರುವಾಗ ಚಿಕನ್ ತಂದು ಸಾಂಬಾರ್ ಮಾಡಿಕೊಡುವಂತೆ ಗಲಾಟೆ ಮಾಡಿದ್ದಾನೆ. ಆಗ ಸಿಟ್ಟಿಗೆದ್ದು ಮನೆಯಲ್ಲಿದ್ದ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.

Man Kills His Wife For Not Preparing Chicken Sambar in Davanagere

ಚಾಕುವಿನಿಂದ ಹೆಂಡತಿಯ ಕುತ್ತಿಗೆಗೆ ಇರಿದು ಕೊಂದು ಹಾಕಿ ಹರಿಹರ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣ ನಡೆಸುತ್ತಿದ್ದಾರೆ.

Recommended Video

      ಆಮೆಗಳ ಈ ವಿಡಿಯೋವನ್ನು ಇಷ್ಟೊಂದು ಜನ ನೋಡಿದ್ದಾರೆ ಅಂದ್ರೆ‌ ಇದ್ರಲ್ಲಿ ಅಂಥದ್ದೇನಿದೆ | OneIndia Kannada

      (ಒನ್ಇಂಡಿಯಾ ಸುದ್ದಿ)

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+