ರಾಗಿಗುಡ್ಡ ಗಲಭೆ ಪ್ರಕರಣ: ಆರೋಪಿಗಳನ್ನು ಬಂಧಿಸುವುದಷ್ಟೇ ಅಲ್ಲ, ಎನ್‌ಕೌಂಟರ್ ಮಾಡಿ ಎಂದ ಎಂ.ಪಿ.ರೇಣುಕಾಚಾರ್ಯ
ದಾವಣಗೆರೆ, ಅಕ್ಟೋಬರ್, 05: ಶಿವಮೊಗ್ಗದ ರಾಗಿಗುಡ್ಡದಲ್ಲಿ ನಡೆದ ಗಲಾಟೆ ಪ್ರಕರಣದ ಆರೋಪಿಗಳನ್ನು ಬಂಧಿಸಿದರೆ ಸಾಲದು ಅವರನ್ನು ಎಸ್‌ಕೌಂಟರ್ ಮಾಡಬೇಕು ಎಂದು ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಹೊನ್ನಾಳಿಯಲ್ಲಿ ಹೇಳಿದ್ದಾರೆ.
ಹೊನ್ನಾಳಿಯ ತಮ್ಮ ನಿವಾಸದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಶಿವಮೊಗ್ಗದ ರಾಗಿಗುಡ್ಡದಲ್ಲಿ ನಡೆದ ಗಲಾಟೆ ಪ್ರಕರಣವನ್ನು ಹಾಲಿ ನ್ಯಾಯಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು. ಗಾಗೆಯೇ ಹಿಂದೂಗಳ ಮನೆಗಳು ಜಖಂ ಆಗಿದ್ದು, ಕೂಡಲೇ ಅವರಿಗೆ ಪರಿಹಾರ ನೀಡಿ ಅವರ ನೆರವಿಗೆ ಧಾವಿಸಬೇಕು. ರಾಜ್ಯ ಸರ್ಕಾರವೇ ಮುಸ್ಲಿಂರ ತುಷ್ಟೀಕರಣಕ್ಕೆ ಮುಂದಾಗಿದ್ದು. ಇದರಿಂದ ಪ್ರಚೋದನೆಗೆ ಒಳಗಾದ ಕೆಲ ಪುಂಡರು ಈ ರೀತಿಯ ಕೃತ್ಯವೆಸಗಿದ್ಧಾರೆ. ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು ಎಂದು ಹೇಳಿದರು.

ಯಾವುದೇ ಕಾರಣಕ್ಕೂ ಸರ್ಕಾರ ಡಿಜೆ ಹಳ್ಳಿ, ಕೆಜೆ ಹಳ್ಳಿ ಹಾಗೂ ಹುಬ್ಬಳ್ಳಿಯಲ್ಲಿ ನಡೆದ ಪ್ರಕರಣಗಳನ್ನು ವಾಪಸ್ಸು ಪಡೆಯಬಾರದು. ಶಿವಮೊಗ್ಗದಲ್ಲಿ ನಡೆದ ಗಲಾಟೆಗೆ ಬಿಜೆಪಿ ಕಾರ್ಯಕರ್ತರು ಕಾರಣ ಎಂದು ಸಚಿವ ರಾಮಲಿಂಗರೆಡ್ಡಿ ಹೇಳಿದ್ದು ಖಂಡನೀಯ. ಹಿಂದೂಗಳು ಯಾರೂ ಕೂಡ ಈ ರೀತಿಯ ಕೃತ್ಯ ಎಸಗುವುದಿಲ್ಲ. ಕೂಡಲೇ ಅವರು ರಾಜ್ಯದ ಜನರ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
ಶಿವ, ದುರ್ಗಮ್ಮ, ಆಂಜನೇಯ ಶಿಷ್ಟ ಸಂಹಾರಕ್ಕೆ ಆಯುಧ ಬಳಸುತ್ತಿದ್ದರು. ಆದರೆ ಇವರು ತಲಾವಾರ್ ಪ್ರದರ್ಶನ ಮಾಡಿದ್ದು ಯಾವ ಯಾವುದರ ಸಂಕೇತ ಎಂದು ಪ್ರಶ್ನೆ ಮಾಡಿದರು. ಅಲ್ಲದೇ ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುವಂತಹ ಹೇಳಿಕೆಗಳನ್ನು ನೀಡುವುದನ್ನು ಮೊದಲು ಕಾಂಗ್ರೆಸ್ ಸಚಿವರು ಬಿಡಬೇಕು. ಶಿವಮೊಗ್ಗ ಗಲಾಟೆ ಪ್ರಕರಣ ಪೂರ್ವ ನಿಯೋಜಿತ ಕೃತ್ಯ. ಜಿಲ್ಲಾಡಳಿತದ ನಿರ್ಲಕ್ಷವೇ ಗಲಾಟೆಗೆ ಕಾರಣ ಎಂದು ಆರೋಪ ಮಾಡಿದರು.
ದೇಶದ ಕಾರಣಕ್ಕೆ ನಾವು ಗೆಲ್ಲಬೇಕಿದೆ
ಮತ್ತೊಂದೆಡೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ದೇಶದ ಕಾರಣಕ್ಕೆ ನಾವು ಗೆಲ್ಲಬೇಕಿದೆ. ಮತ್ತೊಮ್ಮೆ ಮೋದಿ ಎನ್ನುವ ಸಂಕಲ್ಪ ಇಟ್ಟುಕೊಂಡು ಬೂತ್ ಹಂತದಲ್ಲಿ ಸಂಘಟನೆಯನ್ನು ಸಕ್ರೀಯ ಮತ್ತು ಗಟ್ಟಿಗೊಳಿಸಬೇಕು ಎಂದು ಚಿಕ್ಕಮಗಳೂರಿನಲ್ಲಿ ಮಾಜಿ ಶಾಸಕ ಸಿ.ಟಿ.ರವಿ ಕರೆ ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಿದರು.
ಗುರುವಾರ ಜಿಲ್ಲಾ ಬಿಜೆಪಿ ಕಚೇರಿ ಪಾಂಚಜನ್ಯದಲ್ಲಿ ನಡೆದ ಬಿಎಲ್‍ಎಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾಂಗ್ರೆಸ್ ಪಕ್ಷದ ಶಾಸಕರಲ್ಲೇ ಕೇವಲ ನಾಲ್ಕು ತಿಂಗಳಲ್ಲೇ ಸಂಬಂಧಗಳು ಹಳಸುತ್ತಿರುವುದನ್ನು ಗಮನಿಸಿದರೆ ಇಷ್ಟರಲ್ಲೇ ತಾ.ಪಂ., ಜಿ.ಪಂ. ಚುನಾವಣೆ ನಡೆಸುತ್ತಾರೆ ಎಂದು ಅನ್ನಿಸುತ್ತಿಲ್ಲ. ಆದರೂ ನಾವಂತೂ ತಯಾರಿ ಮಾಡಿಕೊಳ್ಳಬೇಕು. ಈ ಕಡೆಗೆ ಗಮನ ಕೊಡಬೇಕು ಎಂದು ಸೂಚಿಸಿದರು.
ಕಳೆದ 19 ವರ್ಷಗಳಿಂದ ಅಧಿಕಾರದ ರಾಜಕಾರನವನ್ನ ಅನುಭವಿಸಿದ ಬಿಜೆಪಿ ಕಾರ್ಯಕರ್ತರಿಗೆ ಅದನ್ನು ಬಿಟ್ಟು ರಾಜಕಾರಣ ಮಾಡುವುದು ಕಷ್ಟ ಅನ್ನಿಸಬಹುದು. ಈಗ ಸಣ್ಣ ಸಣ್ಣ ವಿಷಯಕ್ಕೂ ಸ್ವಲ್ಪ ಪ್ರಯತ್ನ ಪಡಬೇಕು ಎನ್ನಿಸುತ್ತಿರಬಹುದು. ಜೀವನದಲ್ಲಿ ಸವಾಲುಗಳು ಬಂದಾಗ ಅವಕಾಶಗಳನ್ನು ಸೃಷ್ಠಿ ಮಾಡುತ್ತವೆ. ಕಾಲ ಹೀಗೆಯೇ ಇರುವುದಿಲ್ಲ ಎಂದುಕೊಂಡರೆ ಅದು ಎಲ್ಲಾ ಕಾಲಕ್ಕೂ ಅನ್ವಯವಾಗುತ್ತದೆ. ಸುಖದ ಸುಪ್ಪತ್ತಿಗೆ ಇದ್ದಾಗಲೂ, ಅತ್ಯಂತ ಕೆಟ್ಟ ಪರಿಸ್ಥಿತಿ ಇದ್ದಾಗಲೂ ಕೂಡ ಈ ಎರಡು ಪದಗಳು ನಮ್ಮ ಮನಸ್ಸಿನಲ್ಲಿರಬೇಕು ಎಂದರು.
ಬಿಜೆಪಿ ಅಧಿಕಾರವನ್ನ ಸಾಧನ ಎಂದು ಭಾವಿಸಿರುವ ಪಕ್ಷ ಆದರೆ ರಾಜಕಾರಣ ಸಿದ್ಧಾಂತಕ್ಕಾಗಿ ಮಾತ್ರ. ನಾವು ಯಾವ ಲಕ್ಷ್ಯವನ್ನು ಇಟ್ಟು ಕೊಂಡು ಕೆಲಸ ಮಾಡುತ್ತಿದ್ದೇವೋ ಅದರ ಯಶಸ್ಸಿಗೆ ಅಧಿಕಾರ ಒಂದು ಸಾಧನ ಮಾತ್ರ. ಇದರ ನಡುವೆ ಪರಿಸ್ಥಿತಿ ಜೊತೆಗೆ ರಾಜೀ ಮಾಡಿಕೊಂಡು ಬದುಕುವ ಜನ ಇತಿಹಾಸದಲ್ಲೂ ನೋಡಿದ್ದೇವೆ. ವರ್ತಮಾನದಲ್ಲೂ ನೋಡುತ್ತೇವೆ. ಅವರು ಇಂದು ಕಳೆದು ಹೋಗಿದ್ದಾರೆ. ಅವರಾರಿಗೂ ಹೆಜ್ಜೆ ಗುರುತನ್ನು ಮೂಡಿಸಲು ಸಾಧ್ಯವಾಗಿಲ್ಲ. ಪರಿಸ್ಥಿತಿಯನ್ನು ಸವಾಲಾಗಿ ಎದುರಿಸಿ ನಿಂತು ಸ್ವೀಕರಿಸುತ್ತಾರೋ ಅವರು ಇತಿಹಾಸದಲ್ಲಿ ಶಾಶ್ವತವಾಗಿ ಸ್ಥಾನ ಮಾನ ಗಳಿಸಿದ್ದಾರೆ ಎಂದರು.
ನಡುವಿನ ಕಾಲಘಟ್ಟದಲ್ಲಿ ಬಂದವರು ಹಾಗೂ ಅಧಿಕಾರಕ್ಕಾಗೇ ಬಂದವರಿಗೆ ಇದು ಕಷ್ಟ ಎನ್ನಿಸಬಹುದು. ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿ ಪಕ್ಷ ಕಟ್ಟಿದವರಿಗೆ ಹೋಲಿಸಿದರೆ ಇಂದಿನವರದ್ದು ಕಷ್ಟವೇನಲ್ಲ. ಹಿಂದೆ ಯಾವುದೇ ವಿಷಯವನ್ನು ಪ್ರಶ್ನಿಸಲು ಹಿಂದೆ ಸ್ವಲ್ಪ ಕಸಿವಿಸಿ ಆಗುತ್ತಿತ್ತು. ಈಗ ಅದಕ್ಕೆ ಅವಕಾಶವಿಲ್ಲ. ಈ ಕಾರಣಕ್ಕೆ ಪ್ರಶ್ನಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ. ಜನ ಪರ ಹೋರಾಟದ ಮೂಲಕ ಬೂತ್ ನಿಂದ ಹಿಡಿದು ತಾಲ್ಲೂಕು, ಜಿಲ್ಲಾ, ರಾಜ್ಯ ಹಾಗೂ ಕೇಂದ್ರದ ವರೆಗೆ ನಾಯಕತ್ವವನ್ನು ಬೆಳೆಸಬೇಕು ಎಂದು ಕರೆ ನೀಡಿದರು.
ಗಂಗಾ ಕಲ್ಯಾಣ ನಮ್ಮ ಕಾಲದಲ್ಲಿ ಮಂಜೂರಾಗಿವೆ. ಅವನ್ನು ಕೊರೆಯಲೇ ಬೇಕು. ಆದರೆ ಅದನ್ನಿಟ್ಟುಕೊಂಡು ರಾಜಕೀಯ ಲಾಭ ಪಡೆಯಬೇಕು ಎನ್ನುವ ಪ್ರಯತ್ನ ಕಾಂಗ್ರೆಸಿಗರಿಂದ ನಡೆಯುತ್ತಿದೆ ಎಂದು ದೂರಿದರು.












Click it and Unblock the Notifications