ನೀರಿಲ್ಲ, ರೋಡಿಲ್ಲ; ಪಾಲಿಕೆ ಚುನಾವಣೆ ಬಹಿಷ್ಕಾರಕ್ಕೆ ಕರೂರು ಗ್ರಾಮಸ್ಥರ ತೀರ್ಮಾನ

ದಾವಣಗೆರೆ, ನವೆಂಬರ್ 2: ಮೂಲ ಸೌಕರ್ಯಗಳಿಲ್ಲದೇ ರೋಸಿ ಹೋಗಿರುವ ದಾವಣಗೆರೆಯ ಕರೂರು ಗ್ರಾಮಸ್ಥರು ಪಾಲಿಕೆ ಚುನಾವಣೆಯನ್ನು ಬಹಿಷ್ಕರಿಸಲು ತೀರ್ಮಾನಿಸಿದ್ದಾರೆ.

ದಾವಣಗೆರೆಯ ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳಪಡುವ 45ನೇ ವಾರ್ಡ್ ನಲ್ಲಿ ಯಾವುದೇ ಮೂಲ ಸೌಕರ್ಯಗಳಿಲ್ಲ. ಇದರಿಂದ ಪಾಲಿಕೆ ಚುನಾವಣೆ ಬಹಿಷ್ಕಾರ ಮಾಡಿ ಕರೂರು-ಆವರಗೊಳ್ಳ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದಾರೆ. ಗ್ರಾಮದಲ್ಲಿ ರಸ್ತೆ, ಚರಂಡಿ, ನೀರಿನ ಸೌಲಭ್ಯ ಒದಗಿಸುವಂತೆ ಆಗ್ರಹಿಸಿದ್ದಾರೆ.

Karur Villagers Decided To Boycott Palike Election

ಜಿಲ್ಲಾಡಳಿತ ಕರೂರಿನ ರುದ್ರಭೂಮಿಯನ್ನು ಕಬಳಿಸಿ ಜಿಲ್ಲಾ ಭವನ ನಿರ್ಮಿಸಿದೆ. ಇದರಿಂದ ಊರಿಗೆ ಸ್ಮಶಾನವಿಲ್ಲದಂತಾಗಿದೆ. ಈಗ ಪ್ರತ್ಯೇಕ ಸ್ಮಶಾನ ಭೂಮಿ ನೀಡಿ, ಬಸ್ ಸೌಲಭ್ಯ ಒದಗಿಸಲು ಆಗ್ರಹಿಸಲಾಗಿದೆ. ಇನ್ನು ಪ್ರತಿಭಟನಾ ಸ್ಥಳಕ್ಕೆ ಪಾಲಿಕೆಯ ಕಾರ್ಯನಿರ್ವಾಹಕ ಎಂಜಿನಿಯರ್ ಭಾರತಿ ಭೇಟಿ ನೀಡಿ ಸ್ಥಳೀಯ ನಿವಾಸಿಗಳ ಮನವೊಲಿಕೆಗೆ ಪ್ರಯತ್ನ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಲ್ಲದೆ ಮೂಲ ಸೌಕರ್ಯಗಳನ್ನು ಕಡೆಗಣಿಸಿ ಮನವೊಲಿಕೆಗೆ ಆಗಮಿಸಿದ ಅಧಿಕಾರಿ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಆಗಮಿಸುವಂತೆ ಪಟ್ಟು ಹಿಡಿದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+