ದಾವಣಗೆರೆ ದಕ್ಷಿಣ ಮತ್ತು ಉತ್ತರ ಎರಡೂ ಕ್ಷೇತ್ರಗಳಲ್ಲೂ ಬಾವುಟ ನೆಟ್ಟ ಕಾಂಗ್ರೆಸ್‌, ಮಕಾಡೆ ಮಲಗಿದ ಕಮಲ

ದಾವಣಗೆರೆ, ಮೇ, 13: ರಾಜ್ಯ ವಿಧಾನಸಭೆ ಚುನಾವಣೆಯ ಮತ ಎಣಿಕೆ ನಡೆದಿದ್ದು, ದಾವಣಗೆರೆ ದಕ್ಷಿಣ ಮತ್ತು ಉತ್ತರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ.

ದಾವಣಗೆರೆ ಉತ್ತರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಎಸ್‌.ಎಸ್‌.ಮಲ್ಲಿಕಾರ್ಜುನ್‌ 78,345 ಮತಗಳನ್ನು ಪಡೆಯುವ ಗೆಲುವು ಸಾಧಿಸಿದ್ದರೆ, ಮತ್ತೊಂದೆಡೆ ದಕ್ಷಿಣದಲ್ಲಿ ತಂದೆ ಶಾಮನೂರು ಶಿವಶಂಕರಪ್ಪ 83,839 ಅವರು ಮತಗಳನ್ನು ಪಡೆಯುವ ಮೂಲಕ ವಿಜಯ ಪತಾಕೆಯನ್ನು ಹಾರಿಸಿದ್ದಾರೆ.

Karnataka Election Results Davangere

ಮತ್ತೊಂದೆಡೆ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ 53,428 ಮತಗಳನ್ನು ಪಡೆಯುವ ಬಿಜೆಪಿ ಅಭ್ಯರ್ಥಿ ಲೋಕಿಕೆರೆ ನಾಗರಾಜ್ ಸೋಲುಂಡಿದ್ದು, ದಕ್ಷಿಣ ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಜಿ. ಅಜಯ್‌ಕುಮಾರ್ 56,052 ಮತಗಳನ್ನಷ್ಟೇ ಪಡೆದು ಸೋಲುಂಡಿದ್ದಾರೆ‌.

ಆರಂಭದಲ್ಲಿ ಸ್ವಲ್ಪ ಹಿನ್ನೆಡೆ ಅನುಭವಿಸಿದ್ದ ಶಾಮನೂರು ಶಿವಶಂಕರಪ್ಪ ಅವರು ನಂತರ ಮುನ್ನಡೆ ಕಾಯ್ದುಕೊಂಡರು. ಈ ಮೂಲಕ 93 ವರ್ಷ ವಯಸ್ಸಿನ ಶಾಮನೂರು ಶಿವಶಂಕರಪ್ಪರು ಸ್ಪರ್ಧಿಸಿ ಗೆದ್ದು ಇತಿಹಾಸ ನಿರ್ಮಿಸಿದರು. ಹಿರಿಯ ವಯಸ್ಸಿನ ಶಿವಶಂಕರಪ್ಪ ಅವರು ಹಿರಿಯ ಶಾಸಕರಾಗಿ ವಿಧಾನಸಭೆ ಪ್ರವೇಶಿಸಿದ್ದಾರೆ. ಸುಮಾರು 28 ಸಾವಿರಕ್ಕೂ ಅಧಿಕ ಮತಗಳಿಂದ ಗೆದ್ದಿದ್ದಾರೆ. ಎಸ್. ಎಸ್. ಮಲ್ಲಿಕಾರ್ಜುನ್ ಅವರು ಸಹ ಗೆಲುವಿನ ನಗೆ ಬೀರಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+