• search
 • Live TV
ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮುಸ್ಲಿಮರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ರೇಣುಕಾಚಾರ್ಯ

By ದಾವಣಗೆರೆ ಪ್ರತಿನಿಧಿ
|
   ಮುಸ್ಲೀಂಮರ ವಿರುದ್ಧ ರೇಣುಕಾಚಾರ್ಯ ನೀಡಿದ ಹೇಳಿಕೆ ಏನು ಗೊತ್ತಾ..? | Renukacharya | Hindu | Muslim | Oneindia Kannada

   ದಾವಣಗೆರೆ, ಜನವರಿ 20: 'ಮುಸ್ಲಿಂ ಕೇರಿಗಳ ಅಭಿವೃದ್ಧಿಗೆ ಬಂದಿರುವ ಹಣವನ್ನು ಹಿಂದುಗಳ ಕೇರಿ ಅಭಿವೃದ್ಧಿ ಗೆ ಬಳಸುವ ಮೂಲಕ ಅವರನ್ನು(ಮುಸ್ಲೀಮರು) ಎಲ್ಲಿ ಇಡ ಬೇಕೋ ಅಲ್ಲಿ ಇಡ್ತೇವೆ' ಎಂದು ಬಿಜೆಪಿ ಶಾಸಕ, ಸಿಎಂ ರಾಜಕೀಯ ಕಾರ್ಯದರ್ಶಿಯೂ ಆಗಿರುವ ರೇಣುಕಾಚಾರ್ಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

   ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ಪೌರತ್ವ ಕಾಯ್ದೆ ಜಾರಿಗೆ ತಂದಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಅಭಿನಂದನೆ ಸಲ್ಲಿಸಲು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರೇಣುಕಾಚಾರ್ಯ ಮಾತನಾಡಿದರು.

   ಮತ್ತೆ ಸುದ್ದಿಯಲ್ಲಿ ರೇಣುಕಾಚಾರ್ಯ, ಚಾಲಕನಾದ ಹೊನ್ನಾಳಿ ಶಾಸಕ

   ಮುಸ್ಲಿಮರ ವಿರುದ್ದ ಆಕ್ರೋಶ ವ್ಯಕ್ತ ಪಡಿಸಿದ ರೇಣುಕಾಚಾರ್ಯ, 'ಕೆಲ ಮಸೀದಿಗಳಲ್ಲಿ ಸಶಸ್ತ್ರಗಳನ್ನು ಸಂಗ್ರಹ ಮಾಡುತ್ತಿದ್ದು, ಇದಕ್ಕೆ ಮಸೀದಿಗಳು ಬೇಕಾ, ಮಸೀದಿಗಳು ಭಯೋತ್ಪಾದನೆ ಗೆ ಪ್ರೇರಣೆ ನೀಡುತ್ತಿವೆ, ಇದನ್ನು ನೋಡಿ ಕೊಂಡು ನಾವು ಸುಮ್ಮನಿರ ಬೇಕಾ?' ಎಂದು ಪ್ರಚೋದನಕಾರಿ ಮಾತುಗಳನ್ನಾಡಿದರು.

   'ಹೊನ್ನಾಳಿ, ನ್ಯಾಮತಿ ತಾಲೂಕನ್ನು ಸಂಪೂರ್ಣ ಕೇಸರಿಮಯ ಮಾಡ್ತೀನಿ ಎಂದು ಪಣ ತೊಟ್ಟ ರೇಣುಕಾಯಚಾರ್ಯ, ಮುಸ್ಲಿಂ ಕೇರಿಗಳಿಗೆ ಬಂದಿರುವ ಹಣವನ್ನು ಹಿಂದುಗಳ ಕೇರಿಗಳ ಅಭಿವೃದ್ಧಿ ಗೆ ಬಳಸುವ ಮೂಲಕ ಅವರನ್ನು ಎಲ್ಲಿ ಇಡ ಬೇಕೋ ಅಲ್ಲಿ ಇಡ್ತೇವೆ' ಎಂದರು. ಆ ಮೂಲಕ ಅಭಿವೃದ್ಧಿಯಲ್ಲಿ ತಾರತಮ್ಯ ಮಾಡುವುದಾಗಿ ಬಹಿರಂಗವಾಗಿಯೇ ಹೇಳಿದರು. ಕ್ಷೇತ್ರದ ಎಲ್ಲ ಜನರನ್ನೂ ತಾವು ಸಮಾನವಾಗಿ ನೋಡುವುದಿಲ್ಲವೆಂಬುದನ್ನೂ ಬಹಿರಂಗಗೊಳಿಸಿರು.

   'ಯು.ಟಿ.ಖಾದರ್‌ ಮಂಗಳೂರು ಗೋಲಿಬಾರ್ ನಲ್ಲಿ ಸತ್ತವರು ಅಮಾಯಕರು ಅಂತಾರೆ, ಭಾರತ ಏನು ಭಯೋತ್ಪಾದಕರ ಮಾವನ ಮನೆನಾ? ನಿಮಗೆ ಪಾಕಿಸ್ತಾನದಿಂದ ಹಣ ಬಂದಿದ್ದರೇ ಮೃತ‌ಕುಟುಂಬಕ್ಕ ಹಣ ನೀಡಿ ಯಾರು ಬೇಡ ಎಂದರು? ಎಂದರು.

   "ನಾನೇ ಡಿಸಿಎಂ ಆಗ್ತೀನಿ" ಎಂದು ನಕ್ಕು ನುಣುಚಿಕೊಂಡ ರೇಣುಕಾಚಾರ್ಯ

   'ಸಿದ್ದರಾಮಯ್ಯ, ಡಿ‌.ಕೆ.ಶಿವಕುಮಾರ್ ಬಿಜೆಪಿಯನ್ನು ಕೋಮವಾದಿ ಅಂತಾರೆ, ಜಾತಿಗಣತಿ ವಿಚಾರವಾಗಿ, ವೀರಶೈವ- ಲಿಂಗಾಯತ ಹೊಡೆದಿದ್ದೀರಲ್ಲ ನೀವು ಕೋಮುವಾದಿಗಳು. ಅದನ್ನು ಬಿಟ್ಟು ಬಿಜೆಪಿಯನ್ನು ಕೋಮುವಾದಿಗಳು ಎನ್ನುತ್ತಾರೆ, ಸಿದ್ದರಾಮಯ್ಯರಿಗೆ ಬಿಜೆಪಿ‌ ಬಗ್ಗೆ ಮಾತನಾಡುವ ನೈತಿಕತೆ ಇಲ್ಲಾ' ಎಂದು ಕಿಡಿ ಕಾರಿದರು.

   'ಕಾಂಗ್ರೇಸ್ ನಲ್ಲಿ ಪ್ರತಿಪಕ್ಷದ ನಾಯಕ ಸ್ಥಾನ ಖಾಲಿ ಇದೆ, ದಿನೇಶ್ ಗುಂಡುರಾವ್ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ಕೊಟ್ಟು ಓಡಿ ಹೋಗಿದ್ದಾರೆ, ಅದು ಕೂಡ ಖಾಲಿ ಆಗಿ ಮೂರು ತಿಂಗಳಾಯ್ತು ಇನ್ನೂ ಯಾರನ್ನು ನೇಮಕ‌ ಮಾಡಿಲ್ಲಾ' ಎಂದು ಕಾಂಗ್ರೆಸ್ ಪಕ್ಷದ ವಿರುದ್ದ ಲೇವಡಿ ಮಾಡಿದರು.

   English summary
   BJP MLA and CM's political secretory Renukacharya said, 'i will use grant money to develop Hindu areas not Muslim area, i will teach Muslims a lesson'.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X