ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಾನು ಸನ್ಯಾಸಿಯಲ್ಲ, ಸಿಎಂ ಆಗುವೆ, ಆದರೆ ಈಗಲೇ ಅಲ್ಲ: ಸಿದ್ದರಾಮಯ್ಯ

|
Google Oneindia Kannada News

Recommended Video

ಗೊಂಬೆಯನ್ನು ವಾಮಾಚಾರಕ್ಕೆ ಬಳಸಿದ್ದಾರಾ ಎಂದು ಶಂಕೆ ಮೊದಲಿತ್ತು: Lok Sabha Elections 2019 | Oneindia Kannada

ದಾವಣಗೆರೆ, ಏಪ್ರಿಲ್ 20: ನಾನೇನು ಸನ್ಯಾಸಿ ಅಲ್ಲ, ಸಿಎಂ ಆಗುವ ಆಸೆ ಇದೆ ಆದರೆ ನಾಳೆಯೇ ಆಗಿಬಿಡುತ್ತೇನೆ ಎಂದು ಹೇಳಿಲ್ಲ ಎಂದು ಸಿದ್ದರಾಮಯ್ಯ ಅವರು ತಾವು ಸಿಎಂ ಆಗುವ ಹೇಳಿಕೆ ಕುರಿತು ಸ್ಪಷ್ಟನೆ ನೀಡಿದರು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಸಿದ್ದರಾಮಯ್ಯ ಅವರು ನಿನ್ನೆ ಧಾರವಾಡದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿ, ನಾನು ಸಿಎಂ ಆದರೆ 10 ಕೆಜಿ ಅಕ್ಕಿ ಉಚಿತವಾಗಿ ಕೊಡುತ್ತೇನೆ, ಯಾರೂ ಹಸಿವಿನಿಂದ ಇರದಂತೆ ಮಾಡುತ್ತೇನೆ ಎಂದಿದ್ದರು, ಈ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಬದಲಾವಣೆ ಆಗಬಹುದೆಂಬ ಅನುಮಾನ ಮೂಡಿಸಿತ್ತು.

ಸಿದ್ದರಾಮಯ್ಯ ಮತ್ತು ಸಿಎಂ ಕುರ್ಚಿ ಬಗ್ಗೆ ಕುಮಾರಸ್ವಾಮಿ ಶಾಕಿಂಗ್ ಹೇಳಿಕೆ ಸಿದ್ದರಾಮಯ್ಯ ಮತ್ತು ಸಿಎಂ ಕುರ್ಚಿ ಬಗ್ಗೆ ಕುಮಾರಸ್ವಾಮಿ ಶಾಕಿಂಗ್ ಹೇಳಿಕೆ

ಆದರೆ ತಮ್ಮ ಹೇಳಿಕೆ ಬಗ್ಗೆ ದಾವಣಗೆರೆಯಲ್ಲಿ ಸುದ್ದಿಗಾರರಿಗೆ ಸ್ಪಷ್ಟನೆ ನೀಡಿರುವ ಸಿದ್ದರಾಮಯ್ಯ, ನಾನು ಸಿಎಂ ಆಗುವ ಆಸೆಯಿದೆ ಆದರೆ ನಾಳೆಯೇ ಸಿಎಂ ಆಗುತ್ತೇನೆ ಎಂದಿಲ್ಲ, ಮುಂದಿನ ಚುನಾವಣೆ ಬಳಿಕ ಸಿಎಂ ಆಗುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

I will become chief minister but not now: Siddaramaiah

ಇದೇ ಸಮಯದಲ್ಲಿ ಬಿಜೆಪಿಯ ಈಶ್ವರಪ್ಪ ಅವರ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ಈಶ್ವರಪ್ಪ ಒಬ್ಬ ಪೆದ್ದ ಆತನ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದರು.

ಸಾವಿರಾರು ಜನರ ಎದುರು ವೇದಿಕೆಯಲ್ಲಿ ಸಿದ್ದರಾಮಯ್ಯ ಕೆನ್ನೆಗೆ ಮುತ್ತಿಟ್ಟ ಯುವಕಸಾವಿರಾರು ಜನರ ಎದುರು ವೇದಿಕೆಯಲ್ಲಿ ಸಿದ್ದರಾಮಯ್ಯ ಕೆನ್ನೆಗೆ ಮುತ್ತಿಟ್ಟ ಯುವಕ

ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ ಅವರು, ಸಿದ್ದರಾಮಯ್ಯ ಅವರು ಸಿಎಂ ಆಗುವುದರಲ್ಲಿ ತಪ್ಪೇನು ಇಲ್ಲ, ಯಾರ್ಯಾರ ಹಣೆಯಲ್ಲಿ ಏನೇನೋ ಬರೆದಿದೆಯೋ ಯಾರಿಗೆ ಗೊತ್ತು ಎಂದು ಹೇಳಿದ್ದರು.

English summary
I will become chief minister of Karnataka but not now said former CM sddaramaiah. He said i am not a priest i want to become cm of Karnataka again.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X