ನಾನು ಜೆಡಿಎಸ್ ಬಿಡಲಿಲ್ಲ, ಪಕ್ಷ ನನ್ನನ್ನು ಉಚ್ಚಾಟಿಸಿತ್ತು: ಸಿದ್ದರಾಮಯ್ಯ

ದಾವಣಗೆರೆ, ನವೆಂಬರ್ 27: ನಾನು ಜೆಡಿಎಸ್ ಬಿಟ್ಟಿರಲಿಲ್ಲ, ಪಕ್ಷವೇ ನನ್ನನ್ನು ಉಚ್ಚಾಟನೆ ಮಾಡಿತ್ತು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ದಾವಣೆಗೆರೆಯಲ್ಲಿ ಬುಧವಾರ ಮಾತನಾಡಿದ ಅವರು, ನಾನು ಜೆಡಿಎಸ್ ಬಿಡಲಿಲ್ಲ, ಪಕ್ವೇ ನನ್ನನ್ನು ಉಚ್ಚಾಟನೆ ಮಾಡಿತ್ತು, ಉಚ್ಚಾಟಿಸಿದ ಒಂದು ವರ್ಷದ ಬಳಿಕ ಕಾಂಗ್ರೆಸ್ ಸೇರಿದ್ದೆ ಎಂದು ಹಳೆಯ ದಿನಗಳನ್ನು ನೆನಪಿಸಿಕೊಂಡರು.

ಆಗ ಕಾಂಗ್ರೆಸ್ ಅಧಿಕಾರದಲ್ಲಿ ಇರಲಿಲ್ಲ, ಸೋನಿಯಾ ಗಾಂಧಿಯವರು ನನಗೆ ಅಫರ್ ಕೊಟ್ಟಿದ್ದರು. ಪಾಪ ಬಿ.ಸಿ ಪಾಟೀಲ್ ಗೆ ಗೊತ್ತಿರೋದಿಲ್ಲ ಮಾತಾಡುತ್ತಾರೆ, ಬಿಸಿ ಪಾಟೀಲ್ ತರ ಹಣ ಅಧಿಕಾರಕ್ಕೆ ಪಕ್ಷ ಬಿಟ್ಟಿಲ್ಲ. ಶ್ರೀನಿವಾಸ್ ಪಟೇಲ್ ಗೆ ಮನೆಗೆ ಹೋಗಿ ಕೋಟಿಗಟ್ಟಲೇ ಹಣ ನೀಡಿದ ನಿದರ್ಶನಗಳು ಇವೆ.

I Did Not Leave JDS The Party Expelled Me

ಯಡಿಯೂರಪ್ಪ ಐಬಿಯಲ್ಲಿ ಕೂತು ವ್ಯವಹಾರ ಮಾಡಿದ್ದು ಗೊತ್ತೇ ಇದೆ.ಕಳೆದ ಬಾರಿ ಕೋಳಿವಾಡ ಪರವಾಗಿ ಕ್ಯಾಂಪೇನ್ ಗೆ ಬಂದಿರಲಿಲ್ಲ. ಅದಕ್ಕೆ ಬೇಸರವಾಗಿದ್ರು, ಅದನ್ನೇ ಹಳೆಯ ವೀಡಿಯೋ ಇಟ್ಟುಕೊಂಡು ಬಿಜೆಪಿಯವರು ಆರೋಪ ಮಾಡ್ತಾ ಇದಾರೆ.

ನಿನ್ನೆ ಇಡೀ ದಿನ ನಾನು ಕೋಳಿವಾಡ ಕ್ಷೇತ್ರದಲ್ಲಿ ಪ್ರಚಾರ ಮಾಡಿದ್ದೇವೆ, ನಮಗೂ ಅವರ‌ ನಡುವೆ ಯಾವುದೇ ಅಸಮಧಾನ ಇಲ್ಲ ಎಂದು ಸ್ಪಷ್ಟಪಡಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+