ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಾನು ನಿಸ್ಸಹಾಯಕ ಎಂದು ಶ್ರೀರಾಮುಲು ಹೇಳಿದ್ದು ಯಾಕೆ?

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಜನವರಿ 02: "ಜನರು ನಾನು ಡಿಸಿಎಂ ಆಗಬೇಕೆಂದು ಬಯಸಿದ್ದಾರೆ. ಆದರೆ ಅವರಿಗೆ ಉತ್ತರಿಸುವ ಸ್ಥಿತಿಯಲ್ಲಿ ನಾನಿಲ್ಲ. ನಾನು ಅವರ ಮುಂದೆ ನಿಸ್ಸಹಾಯಕನಾಗಿದ್ದೇನೆ" ಎಂದು ಆರೋಗ್ಯ ಸಚಿವ ಶ್ರೀ ರಾಮುಲು ತಮ್ಮ ಬೇಸರವನ್ನು ಹೊರ ಹಾಕಿದ್ದಾರೆ.

ಡಿಸಿಎಂ ಸ್ಥಾನ ಕೊಡದಿದ್ದರೆ ರಾಜೀನಾಮೆ: ಶ್ರೀರಾಮುಲುಡಿಸಿಎಂ ಸ್ಥಾನ ಕೊಡದಿದ್ದರೆ ರಾಜೀನಾಮೆ: ಶ್ರೀರಾಮುಲು

ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ ಮಾತನಾಡಿದ ಅವರು, "ನನ್ನನ್ನ ಡಿಸಿಎಂ ಮಾಡುವುದು, ಬಿಡುವುದು ಪಕ್ಷಕ್ಕೆ ಬಿಟ್ಟ ವಿಚಾರ. ಈ ವಿಚಾರದಲ್ಲಿ ಜನರೂ ಶಾಂತರಾಗಬೇಕು. ಯಡಿಯೂರಪ್ಪನವರು ಈ ರಾಜ್ಯದ ಮುಖ್ಯಮಂತ್ರಿಗಳಾಗಿ ಉತ್ತಮ ಆಡಳಿತ ನಡೆಸುತ್ತಿದ್ದಾರೆ. ಅವರಿಗೆ ಹಾಗೂ ಪಕ್ಷಕ್ಕೆ ಮುಜುಗರ ತರುವಂತಹ ಕೆಲಸ ಯಾರೂ ಮಾಡಬಾರದು. ಪಕ್ಷದ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ" ಎಂದರು.

I Am Helpless Said Sriramulu IN Davanagere

"ಎಷ್ಟು ಮಂದಿಯನ್ನು ಉಪಮುಖ್ಯಮಂತ್ರಿ ಮಾಡಬೇಕು, ಸಚಿವರನ್ನಾಗಿ ಯಾರನ್ನು ಮಾಡಬೇಕು ಎನ್ನುವುದು ಹೈಕಮಾಂಡ್ ಗೆ ಬಿಟ್ಟ ವಿಚಾರ. ನಾವು ಹೇಳಲು ಹೋದರೆ ಅದು ಪಕ್ಷದಲ್ಲಿ ನಡೆಯಲ್ಲ. ಪಕ್ಷ ಗಟ್ಟಿ ಮುಟ್ಟಾಗಿರುವ ಕಾರಣ ಅವರೇ ನಿರ್ಣಯ ತೆಗೆದುಕೊಳ್ಳುತ್ತಾರೆ. ನಾವು ಅವರು ಹೇಳಿದಂತೆ ನಡೆದುಕೊಳ್ಳುತ್ತೇವೆ ಅಷ್ಟೆ. ಜನರಿಗೆ ಶ್ರೀರಾಮುಲು ಡಿಸಿಎಂ ಆಗಬೇಕು ಎನ್ನುವುದು ಆಸೆ, ಜನರು ಒತ್ತಾಯ ಮಾಡಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವುದಿಲ್ಲ" ಎಂದರು‌.

English summary
"People are expecting me to become dcm. But i am not in a situation to answer them. I am helpless infront of them" said B Sriramulu in Davanagere
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X