ಬಳ್ಳಾರಿ, ದಾವಣಗೆರೆಯಲ್ಲಿ ಧಾರಾಕಾರ ಮಳೆ; ರಸ್ತೆಗೆ ನುಗ್ಗಿದ ನೀರು
ದಾವಣಗೆರೆ, ಮೇ 18: ದಾವಣಗೆರೆ ಜಿಲ್ಲೆ ಸೇರಿದಂತೆ ಬಳ್ಳಾರಿ ಜಿಲ್ಲೆಯ ಹರಪನಹಳ್ಳಿಯಲ್ಲಿ ಇಂದು ಬೆಳಿಗ್ಗೆ ಐದು ಗಂಟೆಯಿಂದ ಧಾರಾಕಾರವಾಗಿ ಮಳೆ ಸುರಿದಿದೆ. ಹೊನ್ನಾಳಿ, ನ್ಯಾಮತಿ, ಮಲೆಬೆನ್ನೂರು, ಹರಪನಹಳ್ಳಿ, ಸಂತೆಬೆನ್ನೂರು, ಚನ್ನಗಿರಿ, ಮಾಯಕೊಂಡ, ದಾವಣಗೆರೆಯಲ್ಲಿ ಗುಡುಗು ಮಿಂಚು ಸಹಿತ ಉತ್ತಮ ಮಳೆ ಸುರಿದಿದೆ.
Recommended Video
ಗೌಡರ ಹೆಸರಲ್ಲಿ ರಕ್ತದಾನ ಮಾಡಿದ ಶರವಣ | TA Sharavana | JDS
ಗಾಳಿ ಹೆಚ್ಚಿನ ಮಟ್ಟದಲ್ಲಿದ್ದುದರಿಂದ ಕೆಲ ಕಡೆ ಮರಗಳು ರಸ್ತೆಗೆ ಅಡ್ಡಲಾಗಿ ಉರುಳಿಬಿದ್ದಿವೆ. ಇನ್ನೂ ಕೆಲ ಕಡೆ ಚರಂಡಿಗಳು ಕಟ್ಟಿಕೊಂಡು ಮಳೆ ನೀರು ರಸ್ತೆಯಲ್ಲಿ ಹರಿದಿದೆ. ಉತ್ತಮ ಮಳೆಯಾಗಿದ್ದರಿಂದ ರೈತರು ಕೃಷಿ ಚಟುವಟಿಕೆ ಕೈಗೊಳ್ಳಲು ಸಜ್ಜಾಗಿದ್ದಾರೆ.

ಸಂತೇಬೆನ್ನೂರು, ತ್ಯಾವಣಗಿಯಲ್ಲಿ ಭಾನುವಾರ ರಾತ್ರಿಯೂ ಮಳೆ ಸುರಿದಿದೆ. ಉಚ್ಚಂಗಿ ದುರ್ಗದಲ್ಲಿ ಭಾರಿ ಮಳೆಗೆ ಹಳ್ಳಗಳು ತುಂಬಿ ಹರಿದಿವೆ. ಹರಪನಹಳ್ಳಿ ಪಟ್ಟಣದ ವಿವಿಧ ಕಾಲೋನಿಯಲ್ಲಿ ತಡ ರಾತ್ರಿ ಸುರಿದ ಮಳೆಯಿಂದ ಕೊಟ್ಟರು, ಹೊಸಪೇಟೆ, ಅರಸೀಕೆರೆ, ಹರಿಹರ ರಸ್ತೆಯಲ್ಲಿ ನೀರು ನುಗ್ಗಿದೆ.












Click it and Unblock the Notifications