ದಾವಣಗೆರೆಯಲ್ಲಿ ಮಳೆ, ಗಾಳಿಗೆ ಅಲೆಮಾರಿಗಳ ಬದುಕು ಬೀದಿಗೆ
ದಾವಣಗೆರೆ, ಏಪ್ರಿಲ್ 25: ಕಳೆದ ರಾತ್ರಿ ಸುರಿದ ಭಾರೀ ಮಳೆಗೆ ಜಗಳೂರು ತಾಲ್ಲೂಕಿನ ಅಶ್ವತ್ ರೆಡ್ಡಿ ನಗರದಲ್ಲಿ ಅಲೆಮಾರಿಗಳ ಬದುಕು ಬೀದಿಗೆ ಬಿದ್ದಿರುವ ಘಟನೆ ನಡೆದಿದೆ.
ಗುರುವಾರ ತಡ ರಾತ್ರಿ ಜೋರಾಗಿ ಬೀಸಿದ ಗಾಳಿಯಿಂದಾಗಿ ಜಗಳೂರಲ್ಲಿ ಕಟ್ಟಿಕೊಂಡಿದ್ದ ಗುಡಿಸಲುಗಳು ನೆಲಸಮವಾಗಿದ್ದು, ದಾನಿಗಳು ನೀಡಿದ ಆಹಾರ ಕಿಟ್ ಮಳೆಯಿಂದ ಹಾಳಾಗಿವೆ.

ಲಾಕ್ ಡೌನ್ ನಿಂದ ಕೆಲಸವಿಲ್ಲದೇ ಪರದಾಡುತ್ತಿರುವ ಅಲೆಮಾರಿಗಳು, ತಮಗೆ ಆಸರೆ ನೀಡಿ ಎಂದು ಗೋಗರೆಯುತ್ತಿದ್ದಾರೆ. ತಿನ್ನಲು ತುತ್ತು ಅನ್ನವಿಲ್ಲ, ಇರಲು ಸೂರು ಇಲ್ಲದೇ ಗೋಳಾಡುತ್ತಿರುವುದು ನೋಡುಗರಿಗೆ ಮರುಕ ಹುಟ್ಟಿಸುವಂತಿದೆ.
ಈ ಅಲೆಮಾರಿಗಳ ಗೋಳಾಟ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದ್ದು, ಶೆಡ್ ನಿರ್ಮಾಣ, ಆಹಾರ ಧಾನ್ಯ ನೀಡುವಂತೆ ಅಲೆಮಾರಿಗಳು ಬೇಡುತ್ತಿದ್ದಾರೆ.












Click it and Unblock the Notifications