ವಿದ್ಯಾರ್ಥಿನಿಯನ್ನು ಬೆನ್ನ ಮೇಲೆ ಹೊತ್ತು ಉಪನ್ಯಾಸಕ ಡ್ಯಾನ್ಸೋ.. ಡ್ಯಾನ್ಸ್.. ವಿಡಿಯೋ ಭಾರೀ ವೈರಲ್
ದಾವಣಗೆರೆ, ಸೆಪ್ಟೆಂಬರ್, 06: ಸಾಮಾನ್ಯವಾಗಿ ಶಾಲಾ-ಕಾಲೇಜುಗಳ ಕಾರ್ಯಕ್ರಗಳಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ನೃತ್ಯ ಮಾಡುವುದನ್ನು ನೋಡಿರುತ್ತೇವೆ. ಆದರೆ ಅತಿಥಿ ಉಪನ್ಯಾಸಕರೊಬ್ಬರು ವಿದ್ಯಾರ್ಥಿನಿಯನ್ನು ತನ್ನ ಬೆನ್ನಿನ ಮೇಲೆ ಕೂರಿಸಿಕೊಂಡು ಡ್ಯಾನ್ಸ್ ಮಾಡಿರುವ ಘಟನೆ ದಾವವಣಗೆರೆ ವಿಶ್ವವಿದ್ಯಾಲಯದಲ್ಲಿ ನಡೆದಿದೆ ಎನ್ನಲಾಗಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
ವಿಡಿಯೋ ಭಾರೀ ವೈರಲ್: ವಿದ್ಯಾಕಾಶಿ ಅಂತಲೇ ಹೆಸರುವಾಸಿಯಾಗಿರುವ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಪಾಠ ಹೇಳಿಕೊಡುವ ಅತಿಥಿ ಉಪನ್ಯಾಸಕರೊಬ್ಬರು ವಿದ್ಯಾರ್ಥಿನಿಯನ್ನು ಬೆನ್ನ ಮೇಲೆ ಕೂರಿಸಿಕೊಂಡು ನೃತ್ಯ ಮಾಡಿದ್ದು, ಈ ವಿಡಿಯೋ ಭಾರೀ ವೈರಲ್ ಆಗುತ್ತಿದೆ. ಅಲ್ಲದೆ, ಇದೀಗ ಇದಕ್ಕೆ ಎಲ್ಲೆಡೆ ಆಕ್ರೋಶಗಳು ಭುಗಿಲೆದ್ದಿವೆ.

ಅತಿಥಿ ಉಪನ್ಯಾಸಕ ಪಂಪಾಪತಿ ವಿದ್ಯಾರ್ಥಿನಿಯನ್ನು ಬೆನ್ನ ಮೇಲೆ ಕೂರಿಸಿಕೊಂಡು ಡ್ಯಾನ್ಸ್ ಮಾಡಿದವರು ಎಂದು ತಿಳಿದುಬಂದಿದೆ. ಅಷ್ಟೇ ಅಲ್ಲದೆ, ಕೆಲವರು ಅಂಗಿ ಬಿಚ್ಚಿಕೊಂಡು ಬರೀ ಮೈಯಲ್ಲಿ ಡ್ಯಾನ್ಸ್ ಮಾಡಿ ಅಶಿಸ್ತು ತೋರಿರುವ ಘಟನೆಯೂ ನಡೆದಿದೆ ಎಂದು ಈ ವಿಡಿಯೋದಲ್ಲಿ ಸ್ಪಷ್ಟವಾಗಿ ಕಂಡುಬರುತ್ತಿದೆ.
ಜೋಡಿ ಜಿಂಕೆಗಳ ಕಾದಾಟ: ಚಾಮರಾಜನಗರ ಜಿಲ್ಲೆಯ ಬಂಡೀಪುರ ವ್ಯಾಪ್ತಿಯಲ್ಲಿ ಪ್ರಾಣಿಗಳ ಕಾದಾಟದ ದೃಶ್ಯಗಳು ಸದ್ದು ಮಾಡುತ್ತಲೇ ಇರುತ್ತವೆ. ಹಾಗೆಯೇ ಇದೀಗ ಅಂತಹದ್ದೇ ಅದ್ಭುತ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ವಾಹನಗಳ ಸಂಚಾರವಿದ್ದರೂ ಜೋಡಿ ಜಿಂಕೆಗಳು ನಾನಾ-ನೀನಾ ಎಂದು ಕುಸ್ತಿ ಮಾಡಿದ ಪ್ರಸಂಗ ಮೈಸೂರು-ಉಟಿ ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಬಂಡೀಪುರದ ರಸ್ತೆಯಲ್ಲಿ ನಡೆದಿದೆ.
ಹತ್ತಾರು ಜಿಂಕೆಗಳು ಮೇಯುತ್ತಿದ್ದರೆ, ಎರಡು ಜಿಂಕೆಗಳು ಮಾತ್ರ ನಾನಾ-ನೀನಾ ಎಂದು ಕಾಳಗಕ್ಕೆ ಇಳಿದಿದ್ದವು. ಈ ದೃಶ್ಯವನ್ನು ರಸ್ತೆಯಲ್ಲಿ ಸಂಚರಿಸುತ್ತಿದ್ದವರು ಸೆರೆಹಿಡಿದಿದ್ದು, ಸದ್ಯ ಇದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.
ವಾಹನಗಳ ಹಾರ್ನ್ ಕೇಳುತ್ತಿದ್ದಂತೆ ಜಿಂಕೆ ಹಿಂಡು ಚದುರಿದಾಗ, ಕಾಳಗಕ್ಕೆ ಇಳಿದಿದ್ದ ಜಿಂಕೆಗಳು ಕೂಡ ಕಾಡಿಗೆ ಕಾಲ್ಕಿತ್ತ ಘಟನೆಯೂ ನಡೆದಿದೆ. ಇನ್ನು ಈ ವಿಡಿಯೋ ಅಂತೂ ಸಖತ್ ವೈರಲ್ ಆಗುತ್ತಿದೆ.












Click it and Unblock the Notifications