ಚಹಾ ಕುಡಿದ ಬಳಿಕ ಆಪ್ತ ಸ್ನೇಹಿತರಿಬ್ಬರ ಅನುಮಾನಾಸ್ಪದ ಸಾವು
ದಾವಣಗೆರೆ, ಜೂನ್ 1: ಟೀ ಕುಡಿದ ಬಳಿಕ ಸ್ನೇಹಿರಿಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ದಾವಣೆಗೆರಯಲ್ಲಿ ನಡೆದಿದೆ.
ಕಲ್ಲಪ್ಪ (38), ಶಂಕರ ನಾಯ್ಕ (45) ಮೃತರು. ಇವರಿಬ್ಬರು ತಮ್ಮ ಸ್ನೇಹಿತನ ಅಂಗಡಿಯಲ್ಲೇ ಟೀ ಕುಡಿದ ಸ್ವಲ್ಪ ಸಮಯದಲ್ಲೇ ಮೃತಪಟ್ಟಿದ್ದಾರೆ.
ಈ ಘಟನೆ ದಾವಣಗೆರೆಯ ಜಗಳೂರು ತಾಲೂಕಿನ ದೇವೀಕೆರೆಯಲ್ಲಿ ನಡೆದಿದೆ. ಸ್ನೇಹಿತನ ಅಂಗಡಿಯಿಂದ ಚಹಾ ಕುಡಿದು ತೆರಳಿದ್ದ ಕಲ್ಲಪ್ಪ ರಸ್ತೆಯಲ್ಲೇ ಬಿದ್ದಿದ್ದರು, ತಕ್ಷಣವೇ ಆಸ್ಪತ್ರೆಗೆ ಕಳುಹಿಸಲಾಯಿತು ಆದರೂ ಯಾವುದೇ ಪ್ರಯೋಜನವಾಗಿಲ್ಲ.

ಹಲವು ವರ್ಷಗಳಿಂದ ಅಪ್ತ ಸ್ನೇಹಿತರಾಗಿದ್ದ ಕಲ್ಲಪ್ಪ, ಶಂಕರ ನಾಯ್ಕ ಕೆಲವೇ ಕ್ಷಣಗಳಲ್ಲಿ ಮೃತಪಟ್ಟಿರುವುದು ಗ್ರಾಮಸ್ಥರಲ್ಲಿ ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. ಅಂಗಡಿ ಮಾಲೀಕನನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ.












Click it and Unblock the Notifications