ದಾವಣಗೆರೆ: ಗ್ರಾ.ಪಂ ಚುನಾವಣೆಗೋಸ್ಕರ ಹೆತ್ತ ಮಗಳನ್ನೇ ಕೊಂದ ತಂದೆ
ದಾವಣಗೆರೆ, ಅಕ್ಟೋಬರ್ 13: ತನ್ನ ಎರಡನೇ ಮದುವೆಯ ರಹಸ್ಯ ಹೊರಬೀಳುತ್ತದೆ ಎಂಬ ಭೀತಿಯಲ್ಲಿ ತಂದೆಯೊಬ್ಬ ಹೆತ್ತ ಮಗಳನ್ನೇ ಕೊಂದು, ಸಮಾಧಿ ಮಾಡಿರುವ ಅಮಾನವೀಯ ಘಟನೆ ದಾವಣಗೆರೆಯ ಜಗಳೂರು ತಾಲೂಕಿನ ಗುತ್ತಿದುರ್ಗ ಗ್ರಾಮದಲ್ಲಿ ನಡೆದಿದೆ.
ಹೆತ್ತ ತಂದೆಯ ಎರಡು ವರ್ಷದ ಎಂಟು ತಿಂಗಳ ಹೆಣ್ಣು ಮಗುವನ್ನು ಕೊಲೆ ಮಾಡಿ ಗುಡ್ಡದ ಪಕ್ಕದ ಮೆಕ್ಕೆಜೋಳದ ಜಮೀನಿನಲ್ಲಿ ಹೂತು ಹಾಕಿದ್ದ. ಆರೋಪಿ ನಿಂಗಪ್ಪ ಈಗ ಪೊಲೀಸರ ವಶದಲ್ಲಿದ್ದಾನೆ.
ನಿಂಗಪ್ಪನಿಗೆ ಮದುವೆ ಆಗಿ ಮೂರು ಮಕ್ಕಳಿದ್ದಾರೆ. ಅಷ್ಟಾದರೂ ಇದೇ ಗ್ರಾಮದ ಸಂಬಂಧಿ, ನರ್ಸಿಂಗ್ ಓದುತ್ತಿದ್ದ ಶಶಿಕಲಾ ಎಂಬ ಯುವತಿಯನ್ನು ಪ್ರೀತಿಸುತ್ತಿದ್ದ. ಕಳೆದ ಮೂರು ವರ್ಷದ ಹಿಂದೆ ಶಶಿಕಲಾಳನ್ನು ಕರೆದುಕೊಂಡು ಗ್ರಾಮ ಬಿಟ್ಟು ಹೋಗಿದ್ದ. ಚಿತ್ರದುರ್ಗದ ಕೆಳಗೋಟೆಯಲ್ಲಿ ವಾಸವಾಗಿದ್ದ.

ನಿಂಗಪ್ಪ ಮತ್ತು ಶಶಿಕಲಾರಿಗೆ ಎರಡು ವರ್ಷ ಎಂಟು ತಿಂಗಳ ಸಿರೀಷಾ ಎಂಬ ಹೆಣ್ಣು ಮಗು ಇತ್ತು. ಈ ನಡುವೆ ಆತನಿಗೆ ಮತ್ತೆ ಗ್ರಾಮಕ್ಕೆ ಹೋಗಿ ಗ್ರಾಮ ಪಂಚಾಯತಿ ಚುನಾವಣೆಗೆ ನಿಲ್ಲಬೇಕು ಎಂಬ ಆಸೆಯಾಗಿದೆ. ಇದೇ ಕಾರಣಕ್ಕೆ ಹೆತ್ತ ಮಗಳನ್ನು ಕೊಲೆ ಮಾಡಿದ್ದಾನೆ. ಇದರಿಂದ ಶಶಿಕಲಾ ನಾನು ಮದುವೆ ಆಗಿಲ್ಲ ಎಂಬುದನ್ನು ಸಾಬೀತು ಪಡಿಸುವುದು ಆತನ ಉದ್ದೇಶವಾಗಿತ್ತು.
ಶಶಿಕಲಾ ಮತ್ತು ನಿಂಗಪ್ಪ ಒಂದೇ ಗ್ರಾಮದವರು ಎಂಟು ವರ್ಷದಿಂದ ಪ್ರೀತಿಸುತ್ತಿದ್ದರು. ಆದರೆ ಇಬ್ಬರು ಒಂದೇ ಕುಲದವರು. ಅಂದರೆ ಸಂಬಂಧದಲ್ಲಿ ಶಶಿಕಲಾ ನಿಂಗಪ್ಪನಿಗೆ ತಂಗಿ ಆಗುತ್ತಿದ್ದಳು. ಈ ವಿಚಾರಕ್ಕೆ ಗ್ರಾಮದಲ್ಲಿ ಅವಮಾನ ಆಗುತ್ತದೆ. ಯಾರು ಕೂಡಾ ಓಟ್ ಹಾಕಲ್ಲ. ಇದೇ ಕಾರಣಕ್ಕೆ ಒಂದು ತಿಂಗಳ ಹಿಂದೆ ಚಿತ್ರದುರ್ಗದಲ್ಲಿ ಶಶಿಕಲಾ ಜೊತೆಗೆ ಇದ್ದ ಮಗು ಕರೆದುಕೊಂಡು ಬಂದಿದ್ದ.
ಒಂದು ದಿನ ಸಮಾಧಿ ತೊಡಿ ಹೋಗಿದ್ದ, ಮರುದಿನ ಮಗು ಕರೆದುಕೊಂಡು ಬಂದು ಕರ ವಸ್ತ್ರದಿಂದ ಮಗುವಿನ ಕುತ್ತಿಗೆಗೆ ಬಿಗಿದು, ಅದೇ ವಸ್ತ್ರವನ್ನು ಬಾಯಿಗೆ ತುಂಬಿ ಕೊಲೆ ಮಾಡಿದ್ದಾನೆ. ಆದರೆ ಪತ್ನಿ ಶಶಿಕಲಾ ಕೇಳಿದರೆ ಅನಾಥ ಆಶ್ರಮದಲ್ಲಿ ಇಟ್ಟಿದ್ದೇನೆ ಎಂದಿದ್ದಾನೆ.
ಶಶಿಕಲಾಗೆ ನೀನು ನಿಮ್ಮ ತವರು ಮನೆಗೆ ಹೋಗು, ನನಗೂ ನಿನಗೂ ಸಂಬಂಧ ಇಲ್ಲಾ ಎಂದಾಗ ಸಂಶಯ ಬಂದಿದ್ದು, 20 ದಿನಗಳ ಹಿಂದೆ ಚಿತ್ರದುರ್ಗ ಮಹಿಳಾ ಪೊಲೀಸ್ ಠಾಣೆಯಲ್ಲಿ ಶಶಿಕಲಾ ಗಂಡನ ವಿರುದ್ಧ ದೂರು ನೀಡಿದಾಗ ಈ ವಿಚಾರ ಹೊರಬಂದಿದೆ.
ತಾನು ಚುನಾವಣೆಗೆ ನಿಲ್ಲಬೇಕು ಎಂಬ ಕಾರಣಕ್ಕೆ ಗ್ರಾಮದಲ್ಲಿ ಸಂಬಂಧದಲ್ಲಿ ತಂಗಿ ಆಗುವವಳನ್ನು ಮದುವೆ ಆಗಿದ್ದಾನೆ ಎಂಬ ಆರೋಪದಿಂದ ಹೊರಬರಲು ಮಗುವನ್ನೆ ಬಲಿ ಪಡೆದಿದ್ದಾನೆ.
Recommended Video
ನಡುವೆ ಶಶಿಕಲಾ ನರ್ಸಿಂಗ್ ಮುಗಿದ ಬಳಿಕ ದಾವಣಗೆರೆ ಹಾಗೂ ಚಿತ್ರದುರ್ಗ ಆಸ್ಪತ್ರೆಗಳಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದಳು. ಅವಳ ಕುಟುಂಬ ನಿರ್ವಹಣೆ ಮಾಡುತ್ತಿದ್ದಳು. ಈಗ ಈ ತಾಯಿ ಮಗುವನ್ನು ಕಳೆದುಕೊಂಡು ಕಣ್ಣೀರು ಹಾಕುತ್ತಿದ್ದಾಳೆ. ಪಾಪಿ ತಂದೆ ಚುನಾವಣೆ ಆಸೆಗೆ ಅಮಾಯಕ ಮಗು ಬಲಿಯಾಗಿದ್ದು ದುರಂತವೇ ಸರಿ.












Click it and Unblock the Notifications