Rain Entered ICU: ಮಳೆ ನೀರು ಅಂದರ್ ರೋಗಿಗಳು ಬಾಹರ್: ದಾವಣಗೆರೆ ಆಸ್ಪತ್ರೆಯಲ್ಲಿ ಇದೆಂಥ ಕರ್ಮಕಾಂಡ?
ದಾವಣಗೆರೆ ಆಗಸ್ಟ್ 21: ಸಾಮಾನ್ಯವಾಗಿ ಆಸ್ಪತ್ರೆಗೆ ರೋಗಿಗಳು ಹೋಗುತ್ತಾರೆ. ಆದರೆ ಆಸ್ಪತ್ರೆಗೆ ಮಳೆರಾಯನೂ ಕೂಡ ಭೇಟಿ ನೀಡಿದ್ದಾನೆ. ಅದರಲ್ಲೂ ಐಸಿಯುನಲ್ಲೇ ಕಳೆದ 12 ಗಂಟೆಯಿಂದ ದಾಖಲಾಗಿದ್ದಾನೆ. ನಿಮಗಿದು ಹಾಸ್ಯಾಸ್ಪದ ಅನಿಸಬಹುದು. ಆದರಿದು ನಿಜ. ದಾವಣಗೆರೆಯ ಹೊನ್ನಾವಳಿಯಲ್ಲಿರುವ ತಾಲೂಕು ಆಸ್ಪತ್ರೆಯೊಂದರ ನೈಜ ಸ್ಥಿತಿ ಇದು.
ಕಳೆದ ರಾತ್ರಿ ಸುರಿದ ಧಾರಾಕಾರ ಮಳೆಗೆ ಆಸ್ಪತ್ರೆಯ ದೃಶ್ಯವೇ ಬದಲಾಗಿ ಹೋಗಿದೆ. ಕಣ್ಣಾಯಿಸಿದಲೆಲ್ಲಾ ಮಳೆ ನೀರು ನಿಂತಿದ್ದು, ರೋಗಿಗಳನ್ನು ಹೊರ ಹಾಕಿ ಮಳೆರಾಯ ಆಸ್ಪತ್ರೆಗೆ ದಾಖಲಾದಂತೆ ಕಾಣಿಸುತ್ತಿದೆ. ಇದರಿಂದ ರೋಗಿಗಳು ರಾತ್ರಿ ಇಡೀ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ಆಸ್ಪತ್ರೆಯ ಚಿಕಿತ್ಸಾ ಕೊಠಡಿ, ಔಷಧ ವಿರತಣಾ ಕೊಠಡಿ, ಹೆರಿಗೆ ವಾರ್ಡ್, ಜನರಲ್ ವಾರ್ಡ್ ಹಾಗೂ ಐಸಿಯು ವಾರ್ಡ್‌ಗಳನ್ನೂ ಬಿಡದೆ ಎಲ್ಲಂದರಲ್ಲಿ ಮಳೆ ನೀರು ನುಗ್ಗಿ ಇಡೀ ಆಸ್ಪತ್ರೆಯೇ ಜಲಾವೃತಗೊಂಡಿದೆ. ರೋಗಿಗಳನ್ನು ಗುಣಮುಖರನ್ನಾಗಿ ಮಾಡುವ ಸ್ಥಳವೇ ಮಳೆ ನೀರಿನಿಂದ ತುಂಬಿ ಅನಾರೋಗ್ಯದ ವಾತಾವರಣವನ್ನು ಸೃಷ್ಟಿ ಮಾಡಿದೆ. ಇದರಿಂದಾಗಿ ಬಾಣಂತಿಯರು ಹಾಗೂ ಐಸಿಯು ಘಟದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ್ ರೋಗಿಗಳನ್ನ ಬೇರೆಡೆ ಸ್ಥಳಾಂತರಿಸಲಾಗಿದೆ.
ತಡ ರಾತ್ರಿ ಧಾರಾಕಾರ ಸುರಿದ ಮಳೆಗೆ ಚರಂಡಿ ನೀರು ಸಮೇತ ಆಸ್ಪತ್ರೆಗೆ ನುಗ್ಗಿದೆ. ಇದರಿಂದಾಗಿ ನಿದ್ದೆಗೆಟ್ಟು ಸಿಬ್ಬಂದಿ ಆಸ್ಪತ್ರೆ ಸ್ವಚ್ಚತಾ ಕಾರ್ಯಕ್ಕೆ ಇಳಿದಿರುವ ದೃಶ್ಯಗಳು ಕಂಡು ಬಂದಿವೆ. ಚರಂಡಿ ವ್ಯವಸ್ಥೆ ಸರಿಯಾಗಿಲ್ಲದ ಕ್ರೀಡಾಂಗಣದಿಂದ ಆಸ್ಪತ್ರೆಗೆ ನೀರು ನುಗ್ಗಿದೆ ಎಂದು ಆರೋಪಿಸಲಾಗುತ್ತಿದೆ.
ಆಸ್ಪತ್ರೆ ಮಾತ್ರವಲ್ಲದೆ, ಹೊನ್ನಾಳಿ ಪಟ್ಟಣದ ರಸ್ತೆಗಳು ಜಲಾವೃತಗೊಂಡು ಬಡಾವಣೆಯ ಬೀದಿಗಳಲ್ಲೂ ಮೊಣಕಾಲುದ್ದ ನೀರು ನಿಂತಿರುವ ದೃಶ್ಯಗಳು ಕಂಡು ಬಂದಿವೆ. ಖಾಸಗಿ ಬಸ್ ನಿಲ್ದಾಣ, ದೇವಸ್ಥಾನ, ಶಾಲಾಗಳಿಗೂ ಮಳೆ ನೀರು ತುಂಬಿರುವ ಆರೋಪಗಳು ಕೇಳಿ ಬಂದಿವೆ. ನಿಂತ ನೀರಲ್ಲೇ ಗುಂಡಿಗಳು ಕಾಣದೆ ಬೀಳುತ್ತಾ ಗಾಯ ಮಾಡಿಕೊಂಡು ಸವಾರರು ವಾಹನ ಸಂಚಾರ ಮಾಡುತ್ತಿರುವುದು ಕಂಡುಬಂದಿದೆ.
ರಾಜ್ಯದಲ್ಲಿ ಸದ್ಯ ಭಾರೀ ಮಳೆಯಾಗುತ್ತಿದ್ದು, ಹಲವೆಡೆ ಮನೆಗಳಿಗೆ ಮಳೆ ನೀರು ನುಗ್ಗಿ ಜನ ಜೀವನವೇ ಅಸ್ತವ್ಯಸ್ತಗೊಂಡ ವರದಿಗಳಾಗುತ್ತಿವೆ. ಇನ್ನೂ ಕರ್ನಾಟಕದಲ್ಲಿ ಮಳೆ ಮುಂದುವರೆದಿದ್ದು, ಬೆಂಗಳೂರಿನಲ್ಲಿ ಗುಡುಗು ಸಹಿತ ಮಿಂಚಿನ ಜೊತೆ ಸಾಧಾರಣ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಬೆಳಗ್ಗೆ ಏಳು ಗಂಟೆಗೆ ಬಿಡುಗಡೆ ಮಾಡಿದ ಹವಾಮಾನ ವರದಿಯ ಪ್ರಕಾರ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ದಾವಣಗೆರೆ ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚನೆ ನೀಡಲಾಗಿದೆ.
General Motors Layoffs: ಜನರಲ್ ಮೋಟಾರ್ಸ್‌ನಲ್ಲಿ ಜಾಗತಿಕವಾಗಿ 1,000 ನೌಕರರ ವಜಾ
ಅಲ್ಲದೆ ಐದು ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದ್ದು 30-40 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ. ಬೆಂಗಳೂರಿನಲ್ಲಿ ಇಂದು ಬೆಳಗ್ಗೆಯೇ ಹಲವೆಡೆ ಮಳೆ ಸುರಿದಿದೆ. ಹೀಗಾಗಿ ಮನೆಯೊಳಗೆ ಇರಿ, ಕಿಟಕಿಗಳು ಮತ್ತು ಬಾಗಿಲುಗಳನ್ನು ಮುಚ್ಚಿ. ಸಾಧ್ಯವಾದರೆ ಮನೆಯೊಳಗೆ ಇರಿ ಎಂದು ಸೂಚನೆ ನೀಡಲಾಗಿದೆ. ಇನ್ನೂ ಹಲವೆಡೆ ಮಳೆ ಇಲ್ಲದೇ ಇದ್ದರೂ ನೇತ್ರಾವತಿ ಮತ್ತು ಮೃತ್ಯಂಜಯ ನದಿಗಳು ಏಕಾಏಕಿ ಪ್ರವಾಹದಂತೆ ಹರಿದು ಬಂದು ನದಿಪಾತ್ರದ ಜನರಲ್ಲಿ ಭೀತಿ ಹುಟ್ಟಿಸುತ್ತಿದೆ.












Click it and Unblock the Notifications